ಶಶಿಕಾಂತಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ಕಬ್ಬಿನ ಬೆಲೆ ಕುರಿತು ನಡೆದ ರೈತರ ಸಭೆ|ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆಗೆ ಪೂರೈಕೆಯಾದ ಪ್ರತಿ ಟನ್ ಕಬ್ಬಿಗೆ 2300 ಪ್ರಥಮ ಕಂತು ನೀಡಲಾಗುವುದು| 2019-20ರ ಹಂಗಾಮಿನಲ್ಲಿ ರೈತರು ತಾವು ಬೆಳೆದ ಎಲ್ಲಾ ಕಬ್ಬನ್ನು ಕಾರ್ಖಾನೆಗೆ ಪೂರೈಸಬೇಕು| ಕಾರ್ಖಾನೆ ಹಾಕಿಕೊಂಡ 9 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯುವ ನಿಗದಿತ ಗುರಿ ಯಶಸ್ವಿಗೊಳ್ಳುವಂತೆ ವಿನಂತಿ|
ವಿಜಯಪುರ[ಅ.23]: ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಸ್ತಕ ಸಾಲಿನಲ್ಲಿ ಪೂರೈಕೆಯಾಗುವ ಪ್ರತಿ ಟನ್ ಕಬ್ಬಿಗೆ 2525 ಬಿಲ್ ನೀಡಲಾಗುವುದು. ಕಬ್ಬು ಕಟಾವು, ಸಾರಿಗೆ ಬಿಲ್ ಹೊರತುಪಡಿಸಿ ನೀಡಲಾಗುವುದು ಎಂದು ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ ಶಿರಬೂರ ಘೋಷಿಸಿದ್ದಾರೆ.
ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕಬ್ಬು ಬೆಳೆಗಾರರು 2018-19ನೇ ಸಾಲಿಗೆ ಕಾರ್ಖಾನೆಗೆ ಪೂರೈಸಿದ ಕಬ್ಬಿನ ಬೆಲೆ ಕುರಿತಾಗಿ ರೈತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆಗೆ ಪೂರೈಕೆಯಾದ ಪ್ರತಿ ಟನ್ ಕಬ್ಬಿಗೆ 2300 ಪ್ರಥಮ ಕಂತು ನೀಡಲಾಗಿದ್ದು, ಎರಡನೆ ಬಿಲ್‌ನ್ನು ಪ್ರತಿ ಟನ್‌ಗೆ 125 ಗಳಂತೆ ಹಾಗೂ ಮೂರನೆ ಬಿಲ್‌ನ್ನು ಪ್ರತಿ ಟನ್‌ಗೆ 100 ಅಂತೆ ಒಟ್ಟು ಪ್ರತಿ ಟನ್‌ಗೆ 2525 ಕಬ್ಬಿನ ಬೆಲೆಯಲ್ಲಿ ನಿಯೋಜಿತ ವಿಸ್ತರಣಾ ಠೇವು ಅಂತಾ 100 ಪ್ರತಿ ಟನ್‌ಗೆ ಪ್ರಥಮ ಬಿಲ್‌ದಲ್ಲಿ ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.
ರೈತರಿಗೆ ಈಗಾಗಲೇ ಸಂದಾಯ ಮಾಡಲಾಗಿದ್ದನ್ನು ಹೊರತುಪಡಿಸಿ 100ನ್ನು ಪ್ರತಿ ಟನ್‌ಗೆ ನೀಡಲಾಗುವುದು. ಕಾರಣ ಕಳೆದ ಸಾಲಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್‌ಗೆ 2525 ಬಿಲ್ ಸಂದಾಯಮಾಡಿದಂತೆ ಆಗುತ್ತದೆ. ಈ ಮೊತ್ತ ಕಬ್ಬು ಕಟಾವು ಮತ್ತು ಸಾರಿಗೆ ಹೊರತುಪಡಿಸಿದೆ ಎಂದು ಘೋಷಿಸಿದರು.
2019-20ರ ಹಂಗಾಮಿನಲ್ಲಿ ರೈತರು ತಾವು ಬೆಳೆದ ಎಲ್ಲಾ ಕಬ್ಬನ್ನು ಕಾರ್ಖಾನೆಗೆ ಪೂರೈಸಬೇಕು. ಕಾರ್ಖಾನೆ ಹಾಕಿಕೊಂಡ 9 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯುವ ನಿಗದಿತ ಗುರಿ ಯಶಸ್ವಿಗೊಳ್ಳುವಂತೆ ಸಹಕರಿಸಬೇಕು ಎಂದು ವಿನಂತಿಸಿದರು.
ವ್ಯವಸ್ಥಾಪಕ ನಿರ್ದೇಶಕ ರಾಜಗೋಪಾಲ ಮಾತನಾಡಿ, ಈ ಭಾಗದ ರೈತರು ಹಾಗೂ ಹಿರಿಯರು ಕಬ್ಬಿನ ಬೆಲೆ ಪಾವತಿಸುವ ಪೂರ್ವದಲ್ಲಿ ಆಡಳಿತ ಮಂಡಳಿ ಜತೆ ಸಮಾಲೋಚಿಸಿ ಕಾರ್ಖಾನೆ ಅಭಿವೃದ್ಧಿ ಪರ ಚಟುವಟಿಕೆಗಳ ಕುರಿತು ರೈತರು ತಮ್ಮ ಕಬ್ಬಿನ ಬಿಲ್‌ದಲ್ಲಿ ಹಣವನ್ನು ಕೊಡಲಾಗುತ್ತಿದೆ ಎಂದರು.
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜ ದೇಸಾಯಿ, ಕಾರ್ಖಾನೆ ಉಪಾಧ್ಯಕ್ಷ ತಿಮ್ಮಣ್ಣ ಅಮಲಝರಿ, ಸಿ.ಬಿ. ಕೋರಡ್ಡಿ, ಶಂಕರಗೌಡ ಪಾಟೀಲ, ಆರ್.ಟಿ. ಪಾಟೀಲ, ಗಿರೀಶ ಕೋರಡ್ಡಿ, ನಿರ್ದೇಶಕರಾದ ಜಿ.ಕೆ. ಕೋನಪ್ಪನವರ, ರಮೇಶ ಜಕರಡ್ಡಿ, ಎಚ್. ಆರ್. ಬಿರಾದಾರ, ರಮೇಶ ಶೇಬಾಣಿ, ವಿ.ಎಚ್. ಬಿದರಿ, ಹನಮಂತ ಕೊಣ್ಣೂರ, ಶೇಖರ ಕೊಪ್ಪದ, ಆರ್.ಪಿ. ಕೊಡಬಾಗಿ, ಎಸ್.ಟಿ. ಪಾಟೀಲ, ಚಂದ್ರಶೇಖರ ಇಮ್ಮನ್ನವರ, ಜಿ.ಡಿ. ದೇಸಾಯಿ, ಮಲ್ಲಪ್ಪ ನಾಗರಾಳ, ಲಕ್ಷ್ಮಣ ದೊಡಮನಿ, ವೆಂಕಣಗೌಡ ಪಾಟೀಲ, ಭೀಮಶಿ ಜೀರಗಾಳ, ರಾಚಪ್ಪ ಕಾಳಪ್ಪಗೋಳ ಮುಂತಾದವರು ಇದ್ದರು.