ವಿಜಯಪುರ- ಯಶವಂತಪುರ ವಿಶೇಷ ರೈಲು ಸೇವೆ

By Kannadaprabha News  |  First Published Oct 22, 2019, 9:39 AM IST

ವಿಜಯಪುರ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್‌ ಪ್ರಾಯೋಗಿಕ ರೈಲು ಸಂಚಾರ ಇಂದಿನಿಂದ ಆರಂಭವಾಗಲಿದೆ. ಡಿಸೆಂಬರ್‌ವರೆಗೆ ರೈಲು ಸಂಚರಿಸಲಿದೆ.


ಕೊಟ್ಟೂರು [ಅ.22]: ವಿಜಯಪುರ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್‌ ಪ್ರಾಯೋಗಿಕ ರೈಲು ಸಂಚಾರ ಇಂದಿನಿಂದ ಆರಂಭಗೊಳ್ಳಲಿದ್ದು ಡಿ.21ರವರೆಗೆ ಸಂಚರಿಸಲಿದೆ ಎಂದು ನೈಋುತ್ಯ ರೈಲ್ವೆ ವಲಯ ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರತಿ ಮಧ್ಯಾಹ್ನ 1 ಗಂಟೆಗೆ ವಿಜಯಪುರದಿಂದ ಹೊರಡುವ ರೈಲು ಅಲಮಟ್ಟಿ, ಬಾಗಲಕೋಟೆ, ಬಾದಾಮಿ, ಹೊಳೆಆಲೂರು, ಗದಗ, ಕೊಪ್ಪಳ ಮೂಲಕ ಹೊಸಪೇಟೆಗೆ ಬರಲಿದ್ದು, ನಂತರ ಹಗರಿಬೊಮ್ಮನಹಳ್ಳಿ ಮೂಲಕ ರಾತ್ರಿ 8.22ಕ್ಕೆ ಕೊಟ್ಟೂರಿಗೆ ಆಗಮಿಸಲಿದೆ.

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹರಪನಹಳ್ಳಿ ಮೂಲಕ ದಾವಣಗೆರೆಗೆ ರಾತ್ರಿ 10.15ಕ್ಕೆ ತಲುಪಲಿದೆ. ಅಲ್ಲಿಂದ ಚಿಕ್ಕಜಾಜೂರು, ಕಡೂರು, ಅರಸೀಕೆರೆ, ತಿಪಟೂರು, ತುಮಕೂರು ಮೂಲಕ ಯಶವಂತಪುರ ತಲುಪಲಿದೆ. ಯಶವಂತಪುರದಿಂದ ಸಂಜೆ 5.45ಕ್ಕೆ ಬಿಡುವ ರೈಲು ಕೊಟ್ಟೂರಿಗೆ ರಾತ್ರಿ 12.30ಕ್ಕೆ ಬರಲಿದೆ. ವಿಜಯಪುರವನ್ನು ಬೆಳಗ್ಗೆ 8.30ಕ್ಕೆ ತಲುಪಲಿದೆ.

click me!