⦁ ರಾಜ್ಯದಲ್ಲೆ ಅತಿಹೆಚ್ಚು ಭಕ್ತರು ಕೆಂಡ ಹಾಯುವ ಜಾತ್ರೆ..!
⦁ ಸಂತಾನ ಭಾಗ್ಯ ನೀಡುವ ಸ್ವಾಮಿಗೆ ಕೆಂಡ ಹಾಯ್ದು ಹರಕೆ ತೀರಿಸುವ ಭಕ್ತರು..!
⦁ ಮಸೂತಿಯ ವೀರಭದ್ರೇಶ್ವರ ಕೆಂಡದ ಜಾತ್ರೆಯ ವಿಶೇಷ ಇದು..!
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಏ.5) : ದೇವರ ಜಾತ್ರೆಗಳಲ್ಲಿ ಕೆಂಡ ಹಾಯುವುದು ಕಾಮನ್. ಆದ್ರೆ ವಿಜಯಪುರ (Vijayapura) ಜಿಲ್ಲೆಯ ಕೋಲ್ಹಾರ ತಾಲೂಕಿನ ಮಸೂತಿ (Masuti) ಗ್ರಾಮದ ವೀರಭದ್ರೇಶ್ವರ ಜಾತ್ರೆಯಲ್ಲಿ ಒಟ್ಟೊಟ್ಟಿಗೆ ಸಾವಿರಾರು ಜನ ಕೆಂಡ ಹಾಯುವುದು ಇಲ್ಲಿನ ವಿಶೇಷ. ರಾಜ್ಯದಲ್ಲೆ ಅತಿಹೆಚ್ಚು ಜನರು ಕೆಂಡ ಹಾಯುವ ಧಾರ್ಮಿಕ ಸ್ಥಳ ಅಂತಲು ವೀರಭದ್ರೇಶ್ವರ (Veerabhadreshwara) ದೇಗುಲ ಫೇಮಸ್ ಆಗಿದೆ.
ಕೆಂಡ ಹಾಯ್ದ 3 ಸಾವಿರಕ್ಕು ಅಧಿಕ ಭಕ್ತರು: ಉತ್ತರ ಕರ್ನಾಟಕ ಭಾಗದಲ್ಲಿ ವೀರಭದ್ರ ದೇವರು ಅಂದ್ರೆ ಬೆಂಕಿ ದೇವರು ಅನ್ನೋ ನಂಬಿಕೆ ಇದೆ. ಅದ್ರಲ್ಲು ಈ ಭಾಗದ ವೀರಭದ್ರ ದೇವರ ಜಾತ್ರೆಗಳಲ್ಲಿ ಕೆಂಡ ಹಾಯುವ ಪದ್ದತಿ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಆದ್ರೆ ಬೇರೆ ಕಡೆಗಳಲ್ಲೆಲ್ಲ ಸಾಂಕೇತಿಕವಾಗಿ ಪಲ್ಲಕ್ಕಿ ಹೊತ್ತವರು, ಪೂಜಾರಿಗಳು ಸೇರಿ ಕೆಲವೇ ಕೆಲವು ಜನರು ಕೆಂಡ ಹಾಯ್ತಾರೆ. ಆದ್ರೆ ಮಸೂತಿ ಗ್ರಾಮದ ಈ ವೀರಭದ್ರೇಶ್ವ ಜಾತ್ರೆಯಲ್ಲಿ 4 ರಾಜ್ಯಗಳಿಂದ ಬರುವ ಭಕ್ತರು ಕೆಂಡ ಹಾಯ್ತಾರೆ. ಈ ವರ್ಷ ನಡೆದ ಜಾತ್ರೆಯಲ್ಲಿ ಅಂದಾಜು ಮೂರು ಸಾವಿರಕ್ಕು ಅಧಿಕ ಜನರು ಕೆಂಡ ಹಾಯ್ದಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ದರಾಧಿಯಾಗಿ ಯುವಕರು ಇಲ್ಲಿ ಕೆಂಡ ಹಾಯ್ತಾರೆ. ಅದ್ರಲ್ಲು ಹೆಣ್ಣುಮಕ್ಕಳೆ ಕೆಂಡ ಹಾಯೋದು ಹೆಚ್ಚು.
CHIKKAMAGALURU COMMUNAL HARMONY: ಧರ್ಮ ಸಂಘರ್ಷದ ಕಿಚ್ಚಿನ ನಡುವೆ ಮಲೆನಾಡಲ್ಲಿ ಸಾಮರಸ್ಯದ ಹೆಜ್ಜೆ
4 ರಾಜ್ಯಗಳಿಂದ ಕೆಂಡ ಹಾಯಲು ಬರ್ತಾರೆ ಭಕ್ತರು: ವಿಶೇಷ ಅಂದ್ರೆ ವಿಜಯಪುರ ಜಿಲ್ಲೆಯ ಮಸೂತಿಯ ವೀರಭದ್ರೇಶ್ವರ ದೇವರಿಗೆ ರಾಜ್ಯ-ಹೊರ ರಾಜ್ಯಗಳು ಅಸಂಖ್ಯ ಭಕ್ತರಿದ್ದಾರೆ. ನೆರೆಯ ಮಹಾರಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕದ ಮೂಲೆ ಮೂಲೆಗಳಲ್ಲು ಭಕ್ತರಿದ್ದಾರೆ. ಪ್ರತಿ ವರ್ಷ ಯುಗಾದಿ ಪಾಡ್ಯಯ ಬಳಿಕ ಮೂರು ದಿನಗಳ ಕಾಲ ನಡೆಯೋ ಈ ಕೆಂಡದ ಜಾತ್ರೆಯಲ್ಲಿ ಎಲ್ಲ ಕಡೆಗಳಿಂದ ಆಗಮಿಸುವ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ತಾರೆ. ಕೆಂಡ ಹಾಯುವ ದಿನ ಒಟ್ಟೊಟ್ಟಿಗೆ ಕೆಂಡ ಹಾಯ್ದು ತಮ್ಮ ಹರಕೆಗಳನ್ನ ತೀರಿಸ್ತಾರೆ.
ಸತತ ಮೂರು ವರ್ಷ ಕೆಂಡ ಹಾಯಲೇ ಬೇಕು: ಮಸೂತಿ ಗ್ರಾಮದ ವೀರಭದ್ರ ದೇವರು ಇಷ್ಟಾರ್ಥಗಳನ್ನ ಇಡೇರಿಸುತ್ತಾನೆ ಎನ್ನುವ ನಂಬಿಕೆ ಇದೆ. ಮಕ್ಕಳ ಭಾಗ್ಯವನ್ನ ಕರುಣಿಸುವ ಕರುಣಾಮಯಿ, ಕಂಕಣ ಭಾಗ್ಯ, ನೌಕರಿ ಭಾಗ್ಯ ಸೇರಿದಂತೆ ಸಾಂಸಾರಿಕ ತೊಂದರೆಗಳನ್ನ ವೀರಭದ್ರ ದೇವರು ನಿವಾರಿಸುತ್ತಾನೆ ಎನ್ನುವ ನಂಬಿಕೆ ಇದೆ.. ಜಾತ್ರೆಗೆ ಬಂದ ಭಕ್ತರು ವೀರಭದ್ರಸ್ವಾಮಿಯಲ್ಲಿ ಬೇಡಿಕೊಂಡು ಹೋಗ್ತಾರೆ. ಬೇಡಿಕೊಂಡ ಕಾರ್ಯ ಆದ ಬಳಿಕ, ಇಲ್ಲಿ ಬಂದು ಕೆಂಡ ಹಾಯ್ದು ಹರಕೆಯನ್ನ ತೀರಿಸ್ತಾರೆ. ಒಂದು ಬಾರಿ ಹರಕೆ ತೊಟ್ಟರೇ ಕಾರ್ಯವಾದ ಬಳಿಕ ಸತತ ಮೂರು ವರ್ಷಗಳ ಕಾಲ ಕೆಂಡ ಹಾಯಬೇಕು ಎನ್ನುವ ಪದ್ದತಿಯು ಇದೆ..!
Bengaluru University ಪರೀಕ್ಷೆ ಎಡವಟ್ಟಿನಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಬೆಂಗಳೂ
ಹಿಂದಿನ ರಾತ್ರಿ ಕೆಂಡ ಹಾಯಲು ಸಿದ್ಧತೆ: ಸಾವಿರಾರು ಜನರು ಹಾಯೋದ್ರಿಂದ ಇಲ್ಲಿ ಒಂದು ದಿನ ಮೊದಲೇ ಕೆಂಡಕ್ಕೆ ಸಿದ್ದತೆಗಳು ದೇಗುಲದಲ್ಲಿ ನಡೆಯುತ್ವೆ. 5ರಿಂದ 6 ಟ್ರಾಕ್ಟರ್ ಮೂಲಕ ಕಟ್ಟಿಗೆಗಳನ್ನ ತಂದು ಹಾಕಿ ಒಂದು ದಿನ ಮೊದಲೇ ಅಗ್ನಿ ಸ್ಪರ್ಷ ಮಾಡಲಾಗುತ್ತೆ. ಬಳಿಕ ಬೆಳಿಗ್ಗೆ ವೀರಭದ್ರೇಶ್ವರ ಸ್ವಾಮಿಯನ್ನ ಪಲ್ಲಕ್ಕಿ ಮೂಲಕ ಬಳೂತಿಯ ಪಕ್ಕದ ಕೃಷ್ಣಾನದಿಯ ಸ್ನಾನಕ್ಕೆ ಕರೆದೊಯ್ಯಲಾಗುತ್ತೆ. ಅಲ್ಲಿ ಮೂರ್ತಿಗಳಿಗೆ ಸ್ನಾನ, ಪೂಜೆ ಪುನಸ್ಕಾರ ಬಳಿಕ ವಾಪಾಸ್ ಆದ ಮೇಲೆ ಕೆಂಡ ಹಾಯಲಾಗುತ್ತೆ.. ಮುಂದೆ ಪಲ್ಲಕ್ಕಿ ಹೊತ್ತವರು ಕೆಂಡ ಪ್ರವೇಶಿಸಿದರೆ, ಸಾವಿರಾರು ಜನರು ಹಿಂದಿಂದೆ ಕೆಂಡ ಹಾಯ್ತಾರೆ..!