Vijayapura Earthquake ಗುಮ್ಮಟನಗರಿಯಲ್ಲಿ ಮತ್ತೆ ನಡುಗಿದ ಭೂಮಿ ಸದ್ದಿಗೆ ಬೆಚ್ಚಿಬಿದ್ದ ಜನ!

By Suvarna News  |  First Published Mar 22, 2022, 8:47 PM IST
  • ಗುಮ್ಮಟನಗರಿಯಲ್ಲಿ ಮತ್ತೆ  ಭೂಕಂಪನ 
  •  ಮರುಕಳಿಸುತ್ತಿರುವ ಕಂಪನಕ್ಕೆ ಬೆಚ್ಚಿಬಿದ್ದ ಜನ..!
  •  ಸಾಲು-ಸಾಲು ಭೂಕಂಪನದಿಂದ ಮೂಡಿದ ಆತಂಕ!

ವರದಿ: ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌ 

ವಿಜಯಪುರ (ಮಾರ್ಚ್22): ವಿಜಯಪುರ (Vijayapura) ನಗರದಲ್ಲಿಂದು ಮತ್ತೆ ಲಘು ಭೂಕಂಪನವಾಗಿದ್ದು, ನಗರದ ಜನತೆ ತಲ್ಲಣಗೊಂಡಿದ್ದಾರೆ. ಇಂದು ಬೆಳಗ್ಗೆ 11.21ರ ವೇಳೆಗೆ ಭೂಮಿ ಕಂಪಿಸಿದೆ. ವಿಜಯಪುರ ನಗರದಲ್ಲಿನ ರೇಲ್ವೆಸ್ಟೇಷನ್ ಏರಿಯಾ, ಗೋಳಗುಮ್ಮಟ, ಕೀರ್ತಿ ನಗರ, ರಂಭಾಪೂರ, ಕವಲಗಿ ಸೇರಿದಂತೆ ಹಲವೆಡೆ ಭೂಮಿ ಕಂಪಿಸಿದ ಅನುಭವ ಜನರಿಗೆ ಆಗಿದೆ. ಮಂಚ, ಪಾತ್ರೆಗಳು, ಕುರ್ಚಿ, ಟೇಬಲ್ ಗಳು, ಮನೆಯ ಮೇಲ್ಚಾವಣಿ ಹೇರಿದಂತೆ ಮನೆಯಲ್ಲಿನ ವಸ್ತುಗಳು ಅಲುಗಾಡಿವೆ. ಹೀಗಾಗಿ ಜನ್ರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಬೆಳಗ್ಗೆ, ಮದ್ಯಾಹ್ನ ಹೀಗೆ ಭೂಮಿ ಕಂಪಿಸುತ್ತಿದ್ರೆ ಮನೆಯಲ್ಲಿ ಇರುವುದೋ ಅಥವಾ ಹೊರಗಡೆಯೇ ಇರುವುದೋ ಎಂಬ ಚಿಂತೆ ಶುರುವಾಗಿದೆ. ವಿಜ್ಞಾನಿಗಳ ಪ್ರಕಾರ ಇದು ಲಘು ಭೂಕಂಪನ ಎನಿಸಿದ್ರೂ ಸಹ ಅಕಸ್ಮಾತ ಒಮ್ಮೆ ಭಾರೀ ಪ್ರಮಾಣದಲ್ಲಿ ಭೂಮಿ ನಡುಗಿದ್ರೆ ಹೇಗೆ ಎಂಬ ಚಿಂತೆ ಜನ್ರಲ್ಲಿ ಮೂಡಿದೆ.

Latest Videos

undefined

3.5 ತೀವ್ರತೆಯಲ್ಲಿ ಭೂಕಂಪನ!
ಈಗಿರುವ ಪ್ರಾಥಮಿಕ ಮಾಹಿತಿಯಂತೆ 3.5 ತೀವ್ರತೆಯಲ್ಲಿ ಭೂಕಂಪನ (Earthquake ) ಸಂಭವಿಸಿದೆ ಎನ್ನಲಾಗ್ತಿದೆ. ಭೂಕಂಪನಗಳ ಬಗ್ಗೆ ಮಾಹಿತಿ ನೀಡುವ ಮೊಬೈಲ್‌ ಆಫ್‌ ಗಳಲ್ಲು ವಿಜಯಪುರ ನಗರದಲ್ಲಿ ಸಂಭವಿಸಿದ ಭೂಕಂಪನ ಮಾಹಿತಿ ಇದೆ. ನಗರದ 15 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಭೂಕಂಪನದ ಅನುಭವ ಆಗಿದೆ. ಇನ್ನು ಭೂಕಂಪನ ಆಫ್‌ ನಲ್ಲಿ ನೀಡಿದ ಮಾಹಿತಿಯಂತೆ ಭೂಮಿಯ 10 ಕೀ.ಮೀ ಆಳದಲ್ಲಿ ಇದೊಂದು ಭೂಕಂಪನ ಸಂಭವಿಸಿದೆ ಎನ್ನಲಾಗಿದೆ. ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಭೂಮಿಯ ಆಳದಲ್ಲಿ ಹೆಚ್ಚಿನ ಸುಣ್ಣದ ಅಂಶದಿಂದ ಕಂಪನ..!
ವಿಜಯಪುರ ಜಿಲ್ಲೆಯಲ್ಲಿ ಮೇಲಿಂದ ಮೇಲೆ ಭೂಕಂಪನ ಅನುಭವಗಳು ಜನರಿಗೆ ಆಗ್ತೀವೆ. ತೀವ್ರತೆಯು ರಿಕ್ಟರ್‌ ಮಾಫಕದಲ್ಲಿ ದಾಖಲಾಗಿವೆ. ಕಳೆದ ವರ್ಷ ಸಾಕಷ್ಟು ಭೂಮಿಯ ಆಳದಲ್ಲಿ ಬಾರಿ ಸದ್ದು ಕೇಳಿ ಬಂದಿದ್ದರಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪ್ರಕೃತಿ ವಿಕೋಪ ತಂಡ ಸೇರಿದಂತೆ ಹಲವು ವಿಜ್ಞಾನಿಗಳು ಆಗಮಿಸಿ ಅಧ್ಯಯನ ನಡೆಸಿದ್ರು. ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗಿದ್ದರಿಂದ, ಭೂಮಿಯ ಅಂತರಾಳದಲ್ಲಿ ಕೆಲವು ಕಡೆ ಸುಣ್ಣದ ಅಂಶ ಇರುವುದರಿಂದ ಹೀಗೆ ಆಗುತ್ತಿದೆ. ಈ ವೇಳೆ ಇದು ಲಘು ಭೂಕಂಪನವಿದ್ದು, ಹೆಚ್ಚಿನ ಅನಾಹುತಗಳು ಆಗಲಿಕ್ಕಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ರೆ ಮತ್ತೆ ಮತ್ತೆ ಭೂಮಿ ಕಂಪಿಸುತ್ತಿದ್ದು, ಜನ್ರ ನೆಮ್ಮದಿಯೇ ಹಾಳಾಗಿದೆ. ಮತ್ತೊಮ್ಮೆ ಅಧಿಕಾರಿಗಳು, ವಿಜ್ಞಾನಿಗಳು ಸುದೀರ್ಘ ಅಧ್ಯಯನ ಮಾಡುವ ಅಗತ್ಯವಿದೆ. ಕಳೆದ ಜನೆವರಿಯಲ್ಲಿ ಭೂಮಿ ನಡುಗಿದ್ದು, ಎರಡು ತಿಂಗಳನಿಂದ ಭೂಕಂಪನ ಆಗಿರಲಿಲ್ಲ. ಈ ಹಿಂದೆ ಪ್ರತಿಬಾರಿ ಭೂಮಿ ಕಂಪಿಸಿದಾಗಲು 1ರಿಂದ 4ರಷ್ಟು ತೀವ್ರತೆ ದಾಖಲಾಗಿದೆ. ಇಂದು ಸಂಭವಿಸಿದ ಭೂಕಂಪನದ ತೀವ್ರತೆಯನ್ನು ಜಿಲ್ಲಾಡಳಿತ ಖಚಿತಪಡಿಸಬೇಕಿದೆ.

Bhima River Bank Murder Case ನ್ಯಾಯಾಲಯಕ್ಕೆ ಹಾಜರಾದ ಪ್ರಮುಖ ಆರೋಪಿಗೆ ಬಿಗಿ ಭದ್ರತೆ!

2021 ರಲ್ಲಿ ಸಾಲು ಸಾಲು ಭೂಕಂಪನ..!
ಕಳೆದ 2021ರಲ್ಲಿ ಸಾಲು ಸಾಲು ಭೂಕಂಪನಗಳು ಸಂಭವಿಸಿವೆ. ಕಳೆದ ವರ್ಷ ವಿಜಯಪುರ ನಗರ, ತಿಕೋಟ ತಾಲೂಕಿನ ಬಿಜ್ಜರಗಿ, ಬಸವನ ಬಾಗೇವಾಡಿ ತಾಲೂಕಿನ ಮಸೂತಿ, ಮಲಘಾಣ, ಸಿಂದಗಿ ಪಟ್ಟಣದಲ್ಲು ಎರೆಡೆರು ಸಾರಿ ಭೂಮಿ ನಡುಗಿ, ಭಯಾನಕ ಸದ್ದು ಕೇಳಿ ಬಂದಿತ್ತು. ಪದೇ ಪದೇ ಭೂಕಂಪನದಿಂದಾಗಿ ಈ ಭಾಗದ ಜನರು ಅಕ್ಷರಶಃ ಬೆಚ್ಚಿ ಬಿದ್ದಿದ್ದರು. ಯಾವಾಗ ಏನಾಗುತ್ತೋ ಅಂತಾ ಕಂಗಾಲಾಗಿದ್ದಾರು. 2021ರಲ್ಲಿ ಸಂಭವಿಸಿದ ಭೂಕಂಪನ ಘಟನೆಗಳ ಮಾಹಿತಿ ಇಲ್ಲಿದೆ ನೋಡಿ.

ಘಟನೆ - 1
ಸಪ್ಟೆಂಬರ್ 4, 2021
ಮಧ್ಯರಾತ್ರಿ 11.38
ತೀವ್ರತೆ - 3.9
ಭೂಕಂಪನ ಕೇಂದ್ರ - ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆ

ಘಟನೆ - 2, ಮೂರು ಕಡೆ ಒಂದೇ ದಿನ!
ಭೂಮಿ ನಡುಗಿದ ಅನುಭವ, ಸ್ಪೋಟದ ಸದ್ದು..
ದಿನಾಂಕ - ಅಕ್ಟೋಬರ್ 1, 2021
ಸ್ಥಳ - ಬಸವನಬಾಗೇವಾಡಿ ತಾ. ಮಸೂತಿ ಭೂಕಂಪನ ಕೇಂದ್ರ ಬಿಂದು. 
ಸಮಯ - ಮಧ್ಯಾಹ್ನ 1.47
ತೀವ್ರತೆ - 2.5 ರಿಕ್ಟರ್ ಮಾಪಕದಲ್ಲಿ
ಆಳ 10 ಕಿ.ಮೀ, ವ್ಯಾಪ್ತಿ 10 ಕೀ.ಮೀ

ಸ್ಥಳ - ವಿಜಯಪುರ ನೈರುತ್ಯ ಭಾಗ 10 ಕೀ.ಮಿ ಅಂತರ
ಸಮಯ - ಸಾಯಂಕಾಲ 4.10
ತೀವ್ರತೆ - 2.2 ರಿಕ್ಟರ್ ಮಾಪಕದಲ್ಲಿ

ಸ್ಥಳ - ಸಿಂದಗಿ ಪಟ್ಟಣ
ಸಮಯ - ಬೆಳಗಿನ ಜಾವ 5.30 ಸುಮಾರು
ತೀವ್ರತೆ - ದಾಖಲಾಗಿಲ್ಲ.

ಘಟನೆ - 3
ದಿನಾಂಕ - ಅಕ್ಟೋಬರ್ 2, 2021
ಸಮಯ - ಬೆಳಿಗ್ಗೆ 8.31
ಭೂಕಂಪನ ಕೇಂದ್ರ - ತಿಕೋಟ ತಾ. ಬಿಜ್ಜರಗಿ ಗ್ರಾಮ
ತೀವ್ರತೆ - ರಿಕ್ಟರ್ ಮಾಪಕದಲ್ಲಿ 2.0
ವ್ಯಾಪ್ತಿ - 10 ಕೀ.ಮಿ ಆಳ, 2.9 ವ್ಯಾಪ್ತಿ

ಘಟನೆ - 4
ದಿನಾಂಕ - ಅಕ್ಟೋಬರ್ 5, 2021
ಸಮಯ - ಮಧ್ಯಾಹ್ನ 3.10
ಭೂಕಂಪನ ಕೇಂದ್ರ - ಬ.ಬಾಗೇವಾಡಿ ತಾ. ಮಸೂತಿ
ತೀವ್ರತೆ - 2.9 ರಿಕ್ಟರ್ ಮಾಪಕದಲ್ಲಿ
ವ್ಯಾಪ್ತಿ - 2 ಕಿ.ಮೀ, ಆಳ - 10ಕಿ.ಮೀ

ಘಟನೆ -  5
ದಿನಾಂಕ - ಅಕ್ಟೋಬರ್ 6, 2021
ಸಮಯ ಬೆಳಿಗ್ಗೆ 8.30
ಸ್ಥಳ - ಸಿಂದಗಿ ಪಟ್ಟಣ
ತೀವ್ರತೆ - ದಾಖಲಾಗಿಲ್ಲ

ಘಟನೆ - 6
ದಿನಾಂಕ - ಅಕ್ಟೋಬರ್ 8, 2021
ಸ್ಥಳ - ವಿಜಯಪುರ ನಗರ
ಸಮಯ - ಮಧ್ಯರಾತ್ರಿ 12.20 ನಿಮಿಷ
ತೀವ್ರತೆ - ದಾಖಲಾಗಿಲ್ಲ

ಘಟನೆ - 7
ದಿನಾಂಕ - ಅಕ್ಟೋಬರ್ 10, 2021
ಸ್ಥಳ - ಕೊಲ್ಹಾರ ತಾ. ಮಲಘಾತ, ಮುಳವಾಡ ಸುತ್ತಲ ಗ್ರಾಮಗಳು.
ತೀವ್ರತೆ - ದಾಖಲಾಗಿಲ್ಲ.
 

click me!