Vijayapura Boy Beaten: ಅಪ್ರಾಪ್ತ ಬಾಲಕನ ಗುಪ್ತಾಗಂಕ್ಕೆ ಬಣ್ಣ ಹಾಕಿ ಹಿಂಸಿಸಿದ ಊರ ಗೌಡ!

By Suvarna News  |  First Published Mar 23, 2022, 7:32 PM IST
  • ಅಪ್ರಾಪ್ತ ಬಾಲಕನ ಮೇಲೆ ಊರ ಗೌಡನ ಪ್ರತಾಪ.
  • ಕಂಬಕ್ಕೆ ಕಟ್ಟಿ ಬೆತ್ತಲು ಮಾಡಿ ಹೊಡೆದ ರಾಕ್ಷಸ!
  • ಗುಪ್ತಾಗಂಕ್ಕೆ ಬಣ್ಣ ಹಾಕಿ ವಿಕೃತ ಮೆರೆದ ಹಣಮಂತರಾಯ!
  • ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತ ಬಾಲಕನಿಗೆ ಇದೆಂಥ ಅಪಮಾನ
     

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌  

ವಿಜಯಪುರ (ಮಾರ್ಚ್23): ಅಶ್ಲೀಲವಾಗಿ ಬೈದ ಅನ್ನೋ ಕಾರಣಕ್ಕೆ ಅಪ್ರಾಪ್ತ ಬಾಲಕನ (minor  boy) ಮೇಲೆ ಊರ ಗೌಡನೊಬ್ಬ ತನ್ನ ಉತ್ತರ ಕುಮಾರನ ಪ್ರತಾಪ ತೋರಿಸಿದ್ದಾನೆ. ಬಾಲಕನನ್ನ ಬೆತ್ತಲು ಮಾಡಿ ಕಂಬಕ್ಕೆ ಕಟ್ಟಿ, ಗುಪ್ತಾಂಗಕ್ಕೆ ಬಣ್ಣ ಹಾಕಿ ವಿಕೃತಿ ಮೆರೆದಿದ್ದಾನೆ. ಇಂಥ ಹೀನ ಘಟನೆಗೆ ಸಾಕ್ಷಿಯಾಗಿರೋದು ವಿಜಯಪುರ (Vijayapura) ಜಿಲ್ಲೆಯ ಬಸವನ ಬಾಗೇವಾಡಿ (Basavana Bagewadi ) ತಾಲೂಕಿನ ವಡವಡಗಿ ಗ್ರಾಮ (Vadavadagi Village). ಇದೆ ಗ್ರಾಮದ 12 ವರ್ಷದ ಅಪ್ರಾಪ್ತ ಬಾಲಕನ ಮೇಲೆ ಊರ ಗೌಡ ಹಣಮಂತರಾಯ ಮಡಿಕೇಶ್ವರ (h) ಎಂಬಾತ ವಿಕೃತಿ ಮೆರೆದಿದ್ದಾನೆ.

Tap to resize

Latest Videos

ಬಾಲಕ ಬೈದಿದ್ದಕ್ಕೆ ಊರ ಗೌಡನಿದ ಈ ಕ್ರೂರ ಶಿಕ್ಷೆ: ಹೋಳಿ ಹಬ್ಬದ (Holi Festival) ಮರುದಿನ ನಡೆಯುವ ಬಣ್ಣದ ದಿನದಂದು ನಡೆದ ಕೃತ್ಯ ಇದೆ. ಅಪ್ರಾಪ್ತ ಬಾಲಕ ಬಣ್ಣ ಆಡುವ ವೇಳೆ ಗೌಡ ಹಣಮಂತರಾಯ ಮಡಿಕೇಶ್ವರನಿಗೆ ಅಶ್ಲೀಲವಾಗಿ ಬೈದು ಮನೆಗೆ ಓಡಿ ಹೋಗಿದ್ದನಂತೆ. ಬಳಿಕ ಬಾಲಕನ ಮನೆಗೆ ತೆರಳಿದ ಹಣಮಂತರಾಯ ಗೌಡ ಅವರ ತಾಯಿ ಮಲಕಮ್ಮ ಹಿರೇಕುರುಬರಳಿಗೆ ನಿನ್ನ ಮಗನನ್ನ ಕಳುಹಿಸಿ ಕೊಡುವಂತೆ ಹೇಳಿದ್ದಾನೆ. ಈ ವೇಳೆ ಮಗ ತಪ್ಪು ಮಾಡಿದ್ರೆ ನಾನು ಹೊಡೆದು ಬುದ್ದಿ ಹೇಳ್ತೀನಿ ಎಂದು ಮಲಕಮ್ಮ ಬಾಲಕನಿಗೆ ಗೌಡ ಎದುರೇ ಎರೆಡೇಟು ಹೊಡೆದು ಬುದ್ಧಿ ಹೇಳಿದ್ದಾಳೆ. ಆದ್ರೆ ಇದು ಹಣಮಂತರಾಯನಿಗೆ ಸಮಾಧಾನ ತಂದಿಲ್ಲವಂತೆ. ಬಳಿಕ  ಬಾಲಕನನ್ನ ಒತ್ತಾಯಪೂರ್ವಕವಾಗಿ ತನ್ನ ವಶಕ್ಕೆ ಪಡೆದ ಹಣಮಂತರಾಯ ಹಿಗ್ಗಾ-ಮುಗ್ಗಾ ಥಳಿಸಿದ್ದಾನೆ. ಇಷ್ಟರ ಮೇಲು ಬಿಡದೆ ಬೆತ್ತಲು ಮಾಡಿ ಅಲ್ಲೆ ಇದ್ದ ವಿದ್ಯುತ್‌ ಕಂಬಕ್ಕೆ ಕಟ್ಟಿ ಹಾಕಿ ಮಾಡಬಾರದ್ದನ್ನ ಮಾಡಿದ್ದಾನೆ..

ಬಾಲಕನ ಗುಪ್ತಾಂಗಕ್ಕೆ ಬಣ್ಣ ಹಾಕಿ ವಿಕೃತಿ: ಅಪ್ರಾಪ್ತ ಬಾಲಕನಿಗೆ ಹೊಡೆದಿದ್ದು ಅಲ್ಲದೆ ಹಣಮಂತರಾಯ ಬಾಲಕನ ಇಡೀ ಬಟ್ಟೆಗಳನ್ನ ಹರಿದು ಹಾಕಿದ್ದಾನೆ. ಬಳಿಕ ಆತನನ್ನ ಬೆತ್ತಲಾಗಿಯೇ ವಿದ್ಯುತ್‌ ಕಂಬಕ್ಕೆ ಕಟ್ಟಿ ಹಾಕಿದ್ದಾನೆ. ಬಳಿಕ ಮತ್ತೆ ಬಾಲಕನಿಗೆ ಥಳಿಸೋಕೆ ಶುರು ಮಾಡಿದ್ದಾನೆ. ಇತ್ತ ತಾಯಿ ಮಲಕಮ್ಮ ನಾನು ಹೇಳ್ತೀನಿ ಹುಡುಗನನ್ನ ಬಿಟ್ಬಿಡು ಎಂದು ಕೇಳಿದ್ರು ಕೇಳದೆ ನಾನೇ ಇವ್ನಿಗೆ ಬುದ್ದಿ ಕಲಿಸುತ್ತೇನೆ  ಎಂದು ವಿಕೃತಿ ನಡೆಸಿದ್ದಾನೆ. ಬೆತ್ತಲಾಗಿ ನಿಂತ ಬಾಲಕನ ಗುಪ್ತಾಂಗಕ್ಕೆ ಕಪ್ಪು ಆಯಿಲ್‌, ಬಣ್ಣವನ್ನ ಏರಚಿ ವಿಕೃತಿ ಮೆರೆದಿದ್ದಾನೆ. ಅಷ್ಟೇ ಅಲ್ಲದೆ ಇದನ್ನ ಮೊಬೈಲ್‌ ಒಂದರಲ್ಲಿ ವಿಡಿಯೋ ಮಾಡಿಸಿದ್ದಾನೆ ಎನ್ನಲಾಗಿದೆ.

Muslims Traders Boycott: ಮಲೆನಾಡಿನಲ್ಲೂ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ ಒತ್ತಾಯ

ಜಿಲ್ಲಾಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ: ಹೋಳಿ ಹುಣ್ಣೀಮೆಯ ಮರುದಿನ ನಡೆದ ಈ ಘಟನೆಗೆ ವಿಡಿಯೋಗಳೆಲ್ಲ ವೈರಲ್‌ ಆಗೊ ಮೂಲಕ ಹೊರಬಿದ್ದಿದೆ. ಇನ್ನು ಬಾಲಕನನ್ನ ಕಂಬಕ್ಕೆ ಕಟ್ಟಿ ಥಳಿಸಿದ್ದರಿಂದ ಬಾಲಕ ಅಸ್ವಸ್ಥಗೊಂಡಿದ್ದ.. ಹೀಗಾಗಿ ಆತನನ್ನ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆನ್ನು, ತಲೆ, ಕೈ-ಕಾಲಿಗೆ ಹಲ್ಲೆ ನಡೆದಿದ್ದರಿಂದ ಕಳೆದ ೫ ದಿನಗಳಿಂದ ಆಸ್ಪತ್ರೆಯಲ್ಲೆ ಚಿಕಿತ್ಸೆ ನೀಡಲಾಗ್ತಿದೆ. ಇನ್ನು ಇಂದು ಬಾಲಕನಿಗೆ ತಲೆ ನೋವು ಹೆಚ್ಚಾಗಿದ್ದರಿಂದ ಸ್ಕ್ಯಾನಿಂಗ್‌ ಕೂಡ ಕುಟುಂಬಸ್ಥರು ಮಾಡಿಸಿದ್ದಾರೆ.

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಎದುರು ತಾಯಿಯ ಆಕ್ರೋಶ: ಇನ್ನು ಇದೆಲ್ಲ ಪ್ರಕರಣದ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಎದುರು ಬಾಲಕನ ತಾಯಿ ಮಲಕಮ್ಮ ಹಿರೇಕುರುಬರ್‌ ಆಕ್ರೋಶ ಹೊರ ಹಾಕಿದ್ದಾಳೆ. ಅವರು ಊರಲ್ಲಿ ಗೌಡರು ಅನ್ನೋ ಕಾರಣಕ್ಕೆ ನಾವು ದೂರು ನೀಡದೆ ಸುಮ್ಮನಾದ್ವೀ. ನನ್ನ ಕಣ್ಮುಂದೆಯೇ ನನ್ನ ಮಗನನ್ನ ಬೆತ್ತಲೆ ಮಾಡಿ ವಿಕೃತಿ ಮೆರೆದಿದ್ದಾರೆ. ನಾನು ಹೊಡೆದು ಬುದ್ದಿ ಹೇಳಿದ ಮೇಲು ಹೀಗೆ ವಿಕೃತವಾಗಿ ಅಪ್ರಾಪ್ತ ಬಾಲಕನೊಂದಿಗೆ ನಡೆದುಕೊಂಡಿದ್ದಾರೆ. ಸಧ್ಯ ನಮ್ಮ ಸಮುದಾಯದವರು ನಮ್ಮ ಬೆನ್ನಿಗೆ ನಿಂತಿದ್ದಾರೆ. ಅವರು ಧೈರ್ಯ ಕೊಟ್ಟ ಬಳಿಕ ನಾವು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಪೊಲೀಸರು ಆಸ್ಪತ್ರೆಗೆ ಬಂದು ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ನನ್ನ ಮಗನ ಜೊತೆಗೆ ಇಷ್ಟೊಂದು ಅಶ್ಲೀಲವಾಗಿ ನಡೆದುಕೊಂಡವರ ವಿರುದ್ಧ ಕಾನೂನು ಕ್ರಮವಾಗಲೇ ಬೇಕು ಎಂದು ಮಲಕಮ್ಮ ಆಗ್ರಹಿಸಿದ್ದಾಳೆ.

Kapu Marigudi Jatra: ಕಳಚಿದ ಸೌಹಾರ್ದತೆಯ ಕೊಂಡಿ, 2ನೇ ದಿನವು ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ

ಹಣಮಂತರಾಯ ಪೊಲೀಸ್‌ ವಶಕ್ಕೆ: ಇನ್ನು ಅಪ್ರಾಪ್ತ ಬಾಲಕನ ಮೇಲೆ ಹೀಗೆ ವಿಕೃತಿ ಮೆರೆದ ಹಣಮಂತರಾಯನನ್ನ ಬಸವನ ಬಾಗೇವಾಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕನ ಜೊತೆಗೆ ತೀರಾ ಹೀನಾಯವಾಗಿ ನಡೆದುಕೊಂಡ ಹಣಮಂತರಾಯನ ವಿರುದ್ಧ ಐಪಿಸಿ ಸೆಕ್ಷನ್‌ 323, 342, 504, 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ಆತನಿಗೆ ನೋಟಿಸ್‌ ಕೂಡ ನೀಡಲಾಗಿದೆ. ಠಾಣೆಗೆ ಕರೆಯಿಸಿಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್‌ ಮೂಲಗಳು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮಾಹಿತಿ ನೀಡಿವೆ..!

click me!