PUC ಪರೀಕ್ಷೆ ಮುಗಿಸಿ ತೆರಳುತ್ತಿದ್ದ ವಿದ್ಯಾರ್ಥಿಗಳ ಬೈಕ್ ಅಪಘಾತ; ಓರ್ವ ಸಾವು!

By Suvarna NewsFirst Published Jun 18, 2020, 7:40 PM IST
Highlights

 ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಮುಂದೂಡಲಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಕೊನೆಗೂ ನಡೆಸಲಾಗಿದೆ. ಕೊರೋನಾ ಕಾರಣ ಬೈಕ್‌ನಲ್ಲಿ ಬಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳು ಹಿಂತಿರುಗುವಾಗ ಅಪಘಾತ ಸಂಭವಿಸಿ, ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ವಿಜಯಪುರ(ಜೂ.18): ಅದೊಂದು ಇಂಗ್ಲೀಷ್ ಪರೀಕ್ಷೆಗಾಗಿ ದ್ವಿತಿಯ ಪಿಯುಸಿ ವಿದ್ಯಾರ್ಥಿಗಳು ಕಾಯುತ್ತಿದ್ದರು. 5 ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಿಗೆ ಲಾಕ್‌ಡೌನ್ ಮಾನಸಿಕವಾಗಿ ಒತ್ತಡ ನೀಡಿತ್ತು. ಕಾದು ಕಾದು ಸುಸ್ತಾಗಿದ್ದ ವಿದ್ಯಾರ್ಥಿಗಳಿಗೆ ಕೊನೆಗೂ ಇಂಗ್ಲೀಷ್ ಪರೀಕ್ಷೆ ದಿನ ಬಂದಿತ್ತು. ಕೊರೋನಾ ವೈರಸ್ ಹಲವು ವಿದ್ಯಾರ್ಥಿಗಳು  ಬೈಕ್‌ನಲ್ಲೇ ತೆರಳಿ ಪರೀಕ್ಷೆ ಬರೆದಿದ್ದರು. ಹೀಗೆ ಪರೀಕ್ಷೆ ಬರೆದು ಮನಗೆ ತೆರಳುತ್ತಿದ್ದ ನಾಲ್ವರು ವಿದ್ಯಾರ್ಥಿಗಳ ಬೈಕ್ ಅಪಘಾಕ್ಕೀಡಾಗಿ ಓರ್ವ ಸಾವನ್ನಪ್ಪಿದ್ದಾನೆ.

ಕೊರೋನಾ ಭೀತಿ ನಡುವೆಯೇ ಪಿಯು ಇಂಗ್ಲಿಷ್ ಎಕ್ಸಾಮ್: ಇಲ್ಲಿವೆ ಫೋಟೋಸ್.

ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಮುಗಿಸಿ ಎರಡು ಬೈಕ್ ನಲ್ಲಿ ಸ್ವಗ್ರಾಮಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಎದುರಿಗೆ ಬರುತ್ತಿದ್ದ ಕಾರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಲ್ಲಿ 18 ವರ್ಷದ ವಿದ್ಯಾರ್ಥಿ  ಮಂಜುನಾಥ ರೂಡಗಿ ಮೃತಪಟ್ಟಿದ್ದಾನೆ. ಸಂಗು ಜಮಖಂಡಿ, ನೀಲಪ್ಪ ಜಮಖಂಡಿ ಹಾಗೂ ರಮೇಶ ಮೋಹಿತೆಗೆ ಗಂಭೀರ ಗಾಯಗೊಂಡಿದ್ದಾರೆ.

ಪಿಯುಸಿ ಪರೀಕ್ಷೆ: ಇಬ್ಬರು ವಿದ್ಯಾರ್ಥಿಗಳಿಗೆ ಹೈ ಟೆಂಪರೇಚರ್‌...

ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಲಘಾಣ ಕ್ರಾಸ್ ಬಳಿ ಎನ್ಎಚ್- 218ರಲ್ಲಿ  ಅಪಘಾತ ನಡೆದಿದೆ. ಘಟನೆ ಬಳಿಕ ಕಾರು ಚಾಲಕ ನಾಪತ್ತೆಯಾಗಿದ್ದಾನೆ. ಇತ್ತ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಮಂಜುನಾಥ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. 

click me!