ಟಿಪ್ಪು ಜಯಂತಿ ಬಗ್ಗೆ ಕ್ಯಾತೆ ತೆಗೆದ ಸಿಎಂ ಇಬ್ರಾಹಿಂ

By Web DeskFirst Published Oct 28, 2019, 12:11 PM IST
Highlights

ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರಕಾರ ವಿಫಲ| ಯಡಿಯೂರಪ್ಪ ಪ್ರಧಾನಿಯನ್ನು ಭೇಟಿ ಮಾಡಲು ಅಮಿತ್ ಶಾ ವಿಸಾ ನೀಡುತ್ತಿಲ್ಲ| ಪ್ರಧಾನಿ ಮನ್ ಕಿ ಬಾತ್‌ನಲ್ಲೂ ಕರ್ನಾಟಕದ ಪ್ರವಾಹದ ಬಗ್ಗೆ ಪ್ರಸ್ತಾಪ ಮಾಡಿಲ್ಲ| ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದೆ| ರಾಜ್ಯದಲ್ಲಿ ಜನೆವರಿಯಲ್ಲಿ ಚುನಾವಣೆ ಬರಲಿದೆ|

ವಿಜಯಪುರ(ಅ.28): ಮುಸ್ಲಿಮರಲ್ಲಿ ಜಯಂತಿ ಸಂಪ್ರದಾಯವಿಲ್ಲ. ನಮ್ಮಲ್ಲಿ ಮೂರ್ತಿಯೂ ಇಲ್ಲ. ಟಿಪ್ಪು ಜಯಂತಿ ಮಾಡಿದ ರೀತಿಯೇ ತಪ್ಪು. ಮುಸ್ಲಿಮರಲ್ಲಿ‌ ಈ ಸಂಪ್ರದಾಯವೇ ಇಲ್ಲ ಎಂದು ವಿಧಾನಪರಿತ್ ಸದಸ್ಯ ಸಿ.‌ಎಂ. ಇಬ್ರಾಹಿಂ ಅವರು ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗೃಹ ಸಚಿವ ಅಮಿತ್ ಶಾ ಓರ್ವ ಅಲ್ಪಸಂಖ್ಯಾತ. ದೇಶದಲ್ಲಿ ಒಂದು‌ ಕೆಟ್ಟ ಸಂಪ್ರದಾಯ, ಚರಿತ್ರೆಯನ್ನು ಅಮಿತ್ ಶಾ ಬಿಟ್ಟು ಹೋಗುತ್ತಿದ್ದಾರೆ. ಆದರೆ, ಎನ್ ಆರ್ ಸಿ ಮುಸ್ಲಿಮರನ್ನು ಬಿಟ್ಟು ಉಳಿದ ಧರ್ಮದವರಿಗೆ ಉಳಿಯಲು ಬಿಡುವುದು ಸರಿಯಲ್ಲ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಸಿಎಂ ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಅಮಿತ್ ಶಾ ವಿಸಾ ನೀಡುತ್ತಿಲ್ಲ. ಪ್ರಧಾನಿ ಇಲ್ಲಿಗೆ ಭೇಟಿ ನೀಡುವುದು ಬಿಡಲಿ ಮನ್ ಕಿ ಬಾತ್‌ನಲ್ಲೂ ಕರ್ನಾಟಕದ ಪ್ರವಾಹದ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದೆ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿಗೆ ಒಲ್ಲದ ಗಂಡನಾಗಿದ್ದಾರೆ ಅವರಿಗೆ ಸಹಕಾರ ಸಿಗುತ್ತಿಲ್ಲ. ರಾಜ್ಯದಲ್ಲಿ ಜನೆವರಿಯಲ್ಲಿ ಚುನಾವಣೆ ಬರಲಿದೆ ಎಂದು 

2000 ರು. ಮುಖಬೆಲೆಯ ನೋಟುಗಳನ್ನು ಮುಂದುವರೆಸ್ತೀರೋ? ಇಲ್ಲವೋ? ಎಂಬುದರ ಬಗ್ಗೆ ರಿಸರ್ವ್ ಬ್ಯಾಂಕ್ ಗವರ್ನರ್ ಸ್ಪಷ್ಟಪಡಿಸಲಿ. ಯಾವ ಬ್ಯಾಂಕುಗಳನ್ನು ಮುಚ್ಚುತ್ತೀರಾ? ಮೋದಿಯವರ ಕಾಲದಲ್ಲಿ 2.03 ಲಕ್ಷ ಕೋಟಿ ಬ್ಯಾಂಕುಗಳ ಹಣ ನಷ್ಟವಾಗಿದೆ. ಮಾರ್ಚ್ ಬಳಿಕ ಆರ್ಥಿಕ ಪರಿಸ್ಥಿತಿ ಊಹಿಸಲೂ ಅಸಾಧ್ಯ, ಜವಳಿ, ಅಟೊಮೋಬೈಲ್ ಉದ್ಯಮ ಕುಸಿದಿದೆ. ಕೃಷಿ ಬೆಳವಣಿಗೆ ಶೇ. 6-7 ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ. 

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇದನ್ನು ಬಿಟ್ಟು 370, ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಪಾಕಿಸ್ತಾನ, ಚೀನಾ ಭಾರತಕ್ಕೆ ಸಮಸ್ಯೆಯಲ್ಲ, ಕೇಂದ್ರ ಸರಕಾರ, ಗೃಹ, ಹಣಕಾಸು ಸಚಿವರು ದೇಶದ ಆಂತರಿಕ ಪರಿಸ್ಥಿತಿ ಬಗ್ಗೆ ಸ್ಪಷ್ಟಪಡಿಸಬೇಕು. ಐದು ವರ್ಷಗಳಲ್ಲಿ ಇವರು ದೇಶದಲ್ಲಿ ಹಾಳು ಮಾಡಿರುವುದನ್ನು ಸರಿಪಡಿಸಲು ಮುಂದೆ 10 ವರ್ಷಗಳು ಬೇಕಾಗಬಹುದು. ಬ್ಯಾಂಕಿನಲ್ಲಿ ಹಣ ಇಟ್ಟರೆ ಮರಳಿ ಬರುವ ಗ್ಯಾರಂಟಿ ಇಲ್ಲ. ಈಗ ಬ್ಯಾಂಕುಗಳಿಗೆ ಕೆಟ್ಟ ಕಾಲ ಬಂದಿದೆ. ಈ ಬಗ್ಗೆ ಚರ್ಚೆ ನಡೆಯುತ್ತಿಲ್ಲ ಎಂದು ತಿಳಿಸಿದ್ದಾರೆ. 

ಯಾರನ್ನು ಜೈಲಿಗಟ್ಟಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿ. ಡಿಕೆಶಿ, ಚಿದಂಬರಂರನ್ನು ಯಾಕೆ ಜೈಲಿನಲ್ಲಿಟ್ಟಿದ್ದೀರಾ?ದೇಶದಲ್ಲಿ ಈಗ ಎನ್ ಆರ್ ಸಿ ಮೂಲಕ ಭಯದ ವಾತಾವರಣ ಸೃಷ್ಠಿಸಲಾಗುತ್ತಿದೆ. ಎನ್ ಆರ್ ಸಿ ದೊಡ್ಡ ಗಿಮಿಕ್ಈ ಬಗ್ಗೆ ರಾಜ್ಯಾದ್ಯಂತ ಜನಜಾಗೃತಿ ಸಭೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. 

ಡಿಕೆಶಿ ಮೆರವಣಿಗೆ ಮೂಲಕ ಸ್ವಾಗತ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಡಿಕೆಶಿಯನ್ನು ಪ್ರೀತಿಸುವವರು ನಡೆಸಿದ ಕಾರ್ಯಕ್ರಮವದು.ಕೆಲವರಿಗೆ, ನಶೆ, ಕೆಲವರಿಗೆ ಧೂಮಪಾನ ಟೇಸ್ಟ್ ಇದೆ. ಆದರೆ, ಎರಡೂ ಹಾನಿಕಾರವೇ. ಡಿಕೆಶಿ ಅವರಿಗೆ ಹಾಕಿದ ಹಾರವನ್ನು ಮೆರವಣಿಗೆಯಲ್ಲಿ ಬಂದವರೇ ತಿಂದಿದ್ದಾರೆ ಎಂದರು. 

ಡಿಕೆಶಿ ವಿರುದ್ಧ ಸೂಕ್ತ ದಾಖಲಾತಿಗಳೇ ಇಲ್ಲ. ಗರ್ಭಿಣಿಯಾದವರಿಗೆ ಹೆರಿಗೆಗೆ ತೆಗೆದುಕೊಂಡು ಹೋಗಬೇಕು. ಇಲ್ಲಿ ಬಸುರಿಯೇ ಆಗಿಲ್ಲ, 53 ದಿನ ಡಿಕೆಶಿಯನ್ನು ಜೈಲಿನಲ್ಲಿಟ್ಟಿದ್ದು ಯಾವ ನ್ಯಾಯ? ಎಂದು ಹೇಳಿದ್ದಾರೆ.  
ತಂದೆ-ತಾಯಿಯ ಒಪ್ಪಿಗೆ ಇಲ್ಲದೇ ಲವ್ ಮ್ಯಾರೇಜ್ ಮಾಡಿಕೊಂಡ ಪರಿಸ್ಥಿತಿ ಅನರ್ಹ ಶಾಸಕರದ್ದಾಗಿದೆ. ಇವಿಎಂ ತೆಗೆದು ಹಾಕುವವರೆಗೆ ದೇಶದಲ್ಲಿ ನ್ಯಾಯಸಮ್ಮತ ಚುನಾವಣೆ ಅಸಾಧ್ಯ ಎಂದು ತಿಳಿಸಿದ್ದಾರೆ. 

ಅಕ್ಟೋಬರ್ 28ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!