ಆಲಮಟ್ಟಿಯಲ್ಲಿ ಎಕ್ಸ​ಪ್ರೆಸ್‌ ರೈಲು ನಿಲುಗಡೆಗೆ ಆಗ್ರಹ

By Web DeskFirst Published Oct 27, 2019, 11:40 AM IST
Highlights

ಆಲಮಟ್ಟಿ ರೈಲು ನಿಲ್ದಾಣದಲ್ಲಿ ಎಲ್ಲ ಎಕ್ಸಪ್ರೆಸ್‌ ರೈ​ಲು​ಗ​ಳನ್ನು ನಿಲುಗಡೆಗೆ ಮನವಿ| ಆಲಮಟ್ಟಿ ಪ್ರವಾಸಿ ತಾಣವಾಗಿದ್ದು, ಪ್ರತಿ ತಿಂಗಳು ಸುಮಾರು 80 ಲಕ್ಷ ರು. ಆದಾಯವಿದೆ| ಪ್ರತಿ ದಿನ ನೂರಾರು ಜನ ಪ್ರವಾಸಿಗರು ಆಲಮಟ್ಟಿಯ ಉದ್ಯಾನಗಳ ವೀಕ್ಷಣೆಗೆ ಬರುತ್ತಾರೆ| ಹಲವಾರು ರೈಲು ಗಾಡಿಗಳು ನಿಲ್ಲದ ಕಾರಣ ಪ್ರವಾಸಿಗರಿಗೆ ಹಾಗೂ ಸುತ್ತಮುತ್ತಲಿನ 50 ಕ್ಕೂ ಹೆಚ್ಚು ಗ್ರಾಮಗಳ ನಾಗರಿಕರಿಗೆ ತೀವ್ರ ತೊಂದರೆ| 

ಆಲಮಟ್ಟಿ(ಅ.27): ಪ್ರವಾಸಿ ತಾಣವಾಗಿರುವ ಆಲಮಟ್ಟಿ ರೈಲು ನಿಲ್ದಾಣದಲ್ಲಿ ಈ ಮಾರ್ಗದಲ್ಲಿ ಚಲಿಸುವ ಎಲ್ಲ ಎಕ್ಸಪ್ರೆಸ್‌ ರೈ​ಲು​ಗ​ಳನ್ನು ನಿಲುಗಡೆ ಮಾಡಬೇಕೆಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿಗೆ ಜಿಪಂ ಮಾಜಿ ಸದಸ್ಯ ನಿಡಗುಂದಿಯ ಶಿವಾನಂದ ಅವಟಿ ನೇತೃತ್ವ​ದಲ್ಲಿ ಮನವಿ ಸಲ್ಲಿಸಲಾಯಿತು.

ಇತ್ತೀಚೆಗೆ ಸಚಿವರಿಗೆ ಮನವಿ ಸಲ್ಲಿಸಿ, ಆಲಮಟ್ಟಿ ಪ್ರವಾಸಿ ತಾಣವಾಗಿದ್ದು, ಪ್ರತಿ ತಿಂಗಳು ಸುಮಾರು 80 ಲಕ್ಷ ರು. ಆದಾಯವಿದೆ ಪ್ರತಿ ದಿನ ನೂರಾರು ಜನ ಪ್ರವಾಸಿಗರು ಆಲಮಟ್ಟಿಯ ಉದ್ಯಾನಗಳ ವೀಕ್ಷಣೆಗೆ ಬರುತ್ತಾರೆ, ಹಲವಾರು ರೈಲು ಗಾಡಿಗಳು ನಿಲ್ಲದ ಕಾರಣ ಪ್ರವಾಸಿಗರಿಗೆ ಹಾಗೂ ಸುತ್ತಮುತ್ತಲಿನ 50 ಕ್ಕೂ ಹೆಚ್ಚು ಗ್ರಾಮಗಳ ನಾಗರಿಕರಿಗೆ ತೀವ್ರ ತೊಂದರೆಯಾಗಿದೆ. ಈ ಸಮಸ್ಯೆ ಅರಿತು ವೇಗ ಎಕ್ಸ​ಪ್ರೆಸ್‌ ರೈಲುಗಳನ್ನು ನಿಲ್ಲಿಸಬೇಕು ಎಂದು​ ಒ​ತ್ತಾ​ಯಿ​ಸಿ​ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಗದಗ- ಮುಂಬೈ, ಯಶವಂತಪುರ-ಬಿಕಾನೇರ್‌, ಮೈಸೂರು- ಶಿರಡಿ, ಯಶವಂತಪುರ- ಬಾರ್ಮರ್‌ ರೈಲುಗಳನ್ನು ಆಲಮಟ್ಟಿಗೆ ನಿಲುಗಡೆ ಮಾಡಬೇಕು. ಕೆಲವು ತಿಂಗಳಿಂದ ರದ್ದಾಗಿರುವ ಸೋಲಾಪುರ-ಹುಬ್ಬಳ್ಳಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ಪು​ನಾ​ರಂಭಿ​ಸ​ಬೇಕು. ವಿಜಯಪುರ- ರಾಯಚೂರ, ಮುಂಬೈ- ವಿಜಯಪುರ, ಬೋಲಾರಾಮ್‌-ವಿಜಯಪುರ ಈ ರೈಲು​ಗ​ಳನ್ನು ಬಾಗಲಕೋಟೆ ತನಕ ವಿಸ್ತರಿಸಬೇಕೆಂದು ಮನ​ವಿ​ಯಲ್ಲಿ ಒತ್ತಾ​ಯಿ​ಸ​ಲಾ​ಗಿದೆ.
 

click me!