ಅನೈ​ತಿಕ ಸಂಬಂಧ ಶಂಕೆ: ತಂದೆ, ಪತ್ನಿ ಕೊಲೆ

Published : Oct 07, 2019, 03:02 PM ISTUpdated : Oct 07, 2019, 03:03 PM IST
ಅನೈ​ತಿಕ ಸಂಬಂಧ ಶಂಕೆ: ತಂದೆ, ಪತ್ನಿ ಕೊಲೆ

ಸಾರಾಂಶ

ತನ್ನ ತಂದೆ, ಪತ್ನಿಯ ನಡುವೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿದ ಪುತ್ರನೋರ್ವ ಅವರಿಬ್ಬರನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ|  ಆರೋಪಿ ಪುಟ್ಟಣ್ಣ ಮಾಳಪ್ಪ ಪೂಜಾರಿ (40) ಪರಾ​ರಿ​ಯಾ​ಗಿ​ದ್ದಾನೆ| ಮಗ ಪುಟ್ಟಣ್ಣ ತನ್ನ ತಂದೆ ಮತ್ತು ತನ್ನ ಹೆಂಡತಿ ಜೊತೆ ಅನೈತಿಕ ಸಂಬಂಧ ಇದೆ ಶಂಕಿಸಿ, ಪತ್ನಿ ರೇಣುಕಾ ಹಾಗೂ ತಂದೆ ಮಾಳಪ್ಪನನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ| 

ಇಂಡಿ(ಅ.7): ತನ್ನ ತಂದೆ, ಪತ್ನಿಯ ನಡುವೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿದ ಪುತ್ರನೋರ್ವ ಅವರಿಬ್ಬರನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ವಿಜ​ಯ​ಪುರ ಜಿಲ್ಲೆಯ ಇಂಡಿ ತಾಲೂ​ಕಿನ ಖೇಡಗಿ ಕ್ರಾಸ್‌ ಬಳಿಯ ತೋಟ​ವೊಂದ​ರಲ್ಲಿ ಭಾನು​ವಾರ ನಡೆದಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೊಲೆಯಾದವರನ್ನು ಇಂಡಿ ತಾಲೂ​ಕಿನ ಶಿರ​ಗೂರ ಗ್ರಾಮದ ಮಾಳಪ್ಪ ಧರ್ಮಣ್ಣ ಪೂಜಾರಿ (65), ರೇಣುಕಾ ಪುಟ್ಟಣ್ಣ ಪೂಜಾರಿ (35) ಎಂದು ಗುರುತಿಸಲಾಗಿದೆ. ಆರೋಪಿ ಪುಟ್ಟಣ್ಣ ಮಾಳಪ್ಪ ಪೂಜಾರಿ (40) ಪರಾ​ರಿ​ಯಾ​ಗಿ​ದ್ದಾನೆ. 

ಶಿವಪೂರ ಗ್ರಾಮದ ಶ್ರೀಶೈಲ ಸೊನ್ನ ಅವರ ಖೇಡಗಿ ಕ್ರಾಸ್‌​ದ​ಲ್ಲಿರುವ ತೋಟದಲ್ಲಿ ಕೂಲಿ ಕೆಲಸಕ್ಕೆಂದು ಐದಾರು ತಿಂಗಳ ಹಿಂದೆ ಬಂದು ಶೆಡ್‌ ಶೆಡ್‌ ಹಾಕಿ​ಕೊಂಡು ವಾಸಿಸುತ್ತಿದ್ದರು. ಮಗ ಪುಟ್ಟಣ್ಣ ತನ್ನ ತಂದೆ ಮತ್ತು ತನ್ನ ಹೆಂಡತಿ ಜೊತೆ ಅನೈತಿಕ ಸಂಬಂಧ ಇದೆ ಶಂಕಿಸಿ, ಭಾನುವಾರ ಪತ್ನಿ ರೇಣುಕಾ ಹಾಗೂ ತಂದೆ ಮಾಳಪ್ಪನನ್ನು ಹರಿತವಾದ ಆಯುಧದಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. 

PREV
click me!

Recommended Stories

Congress: ಬರಪೀಡಿತ ಪಟ್ಟಿಯಿಂದ ವಂಚಿತವಾದ ತಾಲೂಕುಗಳು; ರಾಜೀನಾಮೆ ನೀಡಿದ ಉತ್ತರ ಕರ್ನಾಟಕದ ಕೈ ಶಾಸಕ!
ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ದಿಢೀರ್ ರಾಜೀನಾಮೆ! ಮನವೊಲಿಕೆಗೆ ಹರಸಾಹಸ, ಪತ್ರದಲ್ಲೇನಿದೆ?