ವಿಜಯಪುರ: ಸೆಪ್ಟಿಕ್‌ ಟ್ಯಾಂಕ್‌ನಲ್ಲಿ ಉಸಿರುಗಟ್ಟಿ ಮೂವರು ಕಾರ್ಮಿಕರು ಸಾವು

Published : Apr 02, 2019, 09:47 PM IST
ವಿಜಯಪುರ:  ಸೆಪ್ಟಿಕ್‌ ಟ್ಯಾಂಕ್‌ನಲ್ಲಿ ಉಸಿರುಗಟ್ಟಿ ಮೂವರು ಕಾರ್ಮಿಕರು ಸಾವು

ಸಾರಾಂಶ

ಸೆಪ್ಟಿಕ್ ಟ್ಯಾಂಕ್ ನಲ್ಲಿ ಉಸಿರುಗಟ್ಟಿ ಮೂವರ ದಾರುಣ ಸಾವು | ವಿಜಯಪುರದ ಇಂಡಿ ಪಟ್ಟಣದ ಹೊಟೇಲ್ ಅಮರ್ ಇಂಟರ್ನ್ಯಾಷನಲ್ ನಲ್ಲಿ ನಡೆದ ಘಟನೆ | ಹೋಟೆಲ್ ನ ಸೆಪ್ಟಿಕ್ ಟ್ಯಾಂಕ್ ಕ್ಲೀನ್ ಮಾಡಲು ಇಳಿದಿದ್ದ ಮೂವರು ಕಾರ್ಮಿಕರು.

ವಿಜಯಪುರ, [ಏ.02]: ಜಿಲ್ಲೆಯ ಇಂಡಿ ಪಟ್ಟಣದ ಅಮರ್ ಇಂಟರ್ ನ್ಯಾಷನಲ್ ಹೋಟೆಲ್ ನ ಸೆಪ್ಟಿಕ್ ಟ್ಯಾಂಕ್ ಕ್ಲೀನ್ ಮಾಡಲು ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಇಂಡಿ ಪಟ್ಟಣದ ಗುಡುಸಾಬ್ ಬಾಗವಾನ್ (50), ನಬೀಲಾಲ್ ಏಕೆವಾಲೆ (25), ಮುದುಕಪ್ಪ ಬೆಣ್ಣೆನ್ನವರ್ (35) ಸಾವನ್ನಪ್ಪಿದ ದುರ್ದೈವಿಗಳು. ಅಮರ್ ಇಂಟರ್ ನ್ಯಾಷನಲ್ ಹೋಟೆಲ್ ನ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದಿದ್ದ ಈ ಮೂವರು ಕಾರ್ಮಿಕರು ಒಳಗೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಅಗ್ನಿ ಶಾಮಕ ದಳ ಸಿಬ್ಬಂದಿ ಮೂವರ ಮೃತ ದೇಹಗಳನ್ನು ಹೊರ ತೆಗೆದಿದ್ದು, ಹೋಟೆಲ್ ಮಾಲೀಕನ ಒತ್ತಾಯ ಪೂರ್ವಕವಾಗಿ ಕಾರ್ಮಿಕರನ್ನು ಸೆಪ್ಟಿಕ್ ಟ್ಯಾಂಕ್ ಗೆ  ಇಳಿಸಿದ್ದ ಎನ್ನುವ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಇಂಡಿ ಠಾಣೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

PREV
click me!

Recommended Stories

ರಸ್ತೆ ಮೇಲೆಯೇ ಕಾರ್ ಪಾರ್ಕ್ ಮಾಡಿ ಹೋದ ಆಸಾಮಿ! ಟ್ರಾಫಿಕ್ ಜಾಮ್, ಸಾರ್ವಜನಿಕರು ಸೇರಿ ಏನು ಮಾಡಿದ್ರು ನೋಡಿ!
ವಿಜಯಪುರದ ಚಡಚಣದಲ್ಲಿ ಪತ್ತೆಯಾದ ನಿಗೂಢ ರಣಹದ್ದು: ಕಾಲಿನಲ್ಲಿರೋ ವಸ್ತು ನೋಡಿ ಜನರು ಶಾಕ್