ಕಕ್ಕಳಮೇಲಿ ಘಟನೆಗೆ ಖಂಡನೆ: ತಾಳಿಕೋಟೆ ಸಂಪೂರ್ಣ ಬಂದ್

By Web DeskFirst Published Oct 25, 2019, 11:20 AM IST
Highlights

ದಲಿತರ ಮೇಲೆ ದೌರ್ಜನ್ಯ ಹಾಗೂ ಡಾ. ಬಾಬಾಸಾಹೇಬ ಅಂಬೇಡ್ಕರ್ ಪುತ್ಥಳಿ ಧ್ವಂಸಗೊಳಿಸಿರುವ ಕೃತ್ಯ ಖಂಡಿಸಿ ತಾಳಿಕೋಟೆ ಬಂದ್| ಕಕ್ಕಳಮೇಲಿ ಘಟನೆ ಖಂಡಿಸಿ ಪ್ರತಿಭಟನೆ | ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ|

ತಾಳಿಕೋಟೆ[ಅ.25]: ಸಿಂದಗಿ ತಾಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ಹಾಗೂ ಡಾ. ಬಾಬಾಸಾಹೇಬ ಅಂಬೇಡ್ಕರ್ ಪುತ್ಥಳಿ ಧ್ವಂಸಗೊಳಿಸಿರುವ ಕೃತ್ಯ ಖಂಡಿಸಿ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಗುರುವಾರ ಕರೆ ನೀಡಿದ್ದ ತಾಳಿಕೋಟೆ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

ಅಂಬೇಡ್ಕರ್ ಭವನದಿಂದ ಪ್ರಾರಂಭಗೊಂಡ ಬೃಹತ್‌ ಪ್ರತಿಭಟನಾ ರ‌್ಯಾಲಿ ವಿವಿಧ ಮಾರ್ಗವಾಗಿ ಶ್ರೀ ಬಸವೇಶ್ವರವೃತ್ತ ತಲುಪಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ಸಂಪೂರ್ಣ ವಾಹನ ಸಂಚಾರ ತಡೆದು ಆಕ್ರೋಶ ಹೊರ ಹಾಕಿದರು. ಬಂದ್‌ಗೆ ಕರೆ ನೀಡಿದ್ದರಿಂದ ತಾಳಿಕೋಟೆ ಪಟ್ಟಣಕ್ಕೆ ಬಸ್‌ ಸೌಲಭ್ಯ ಸಂಪೂರ್ಣ ನಿಲ್ಲಿಸಲಾಗಿತ್ತು. ಹೀಗಾಗಿ ಬಸ್ ಮತ್ತು ಪ್ರಯಾಣಿಕರು ಇಲ್ಲದೇ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಪಟ್ಟಣದ ಎಲ್ಲ ಹೋಟೆಲ್ ಹಾಗೂ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಕ್ಕಳಮೇಲಿ ಘಟನೆಗೆ ಕಾರಣರಾದ ದುಷ್ಕರ್ಮಿಗಳನ್ನು ಬಂಧಿಸಬೇಕು, ತಾಳಿಕೋಟೆ ಪುರಸಭೆಯ ಮಳಿಗೆಗಳ ಬಾಡಿಗೆ ಅವಧಿ ಮುಗಿದರೂ ಇನ್ನೂ ಲೀಲಾವು ಮಾಡುವಲ್ಲಿ ವಿಳಂಬನೀತಿ ಅನುಸರಿಸಿದ ಮುಖ್ಯಾಧಿಕಾರಿಯನ್ನುಅಮಾನತುಗೊಳಿಸಬೇಕು, ತಾಳಿಕೋಟೆ ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿನ ದಲಿತ ಜನಾಂಗದವರಿಗೆ ಸ್ಮಶಾನ ಭೂಮಿ ಒದಗಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ತಾಲೂಕು ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದರು.

ಬಹಿರಂಗ ಸಭೆಯಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಸುರೇಶ ಮಣೂರ ಮಾತನಾಡಿ, ದುಷ್ಕರ್ಮಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿರುವುದು ಸಂಶಯಕ್ಕೆ ಎಡೆಮಾಡಿದೆ. ಕೂಡಲೇ ಈ ಕೃತ್ಯದಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸಿ, ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಡಿಎಸ್‌ಎಸ್ ಸಂಘಟನಾ ಸಂಚಾಲಕ ರಾವುತ ತಳಕೇರಿ, ಬ.ಬಾಗೇವಾಡಿ ಡಿಎಸ್‌ಎಸ್ ತಾಲೂಕಾ ಸಂಚಾಲಕ ಗುರುಗುಡಿಮನಿ, ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ, ಎಂ.ಸಿ. ಮಯೂರ, ಅಶೋಕ ಚಲವಾದಿ, ಲಕ್ಕಪ್ಪ ಬಡಿಗೇರ, ಜೈಭೀಮ ಮುತ್ತಗಿ ಮೊದಲಾದವರು ಮಾತನಾಡಿದರು.

ಪ್ರತಿಭಟನಾ ನೇತೃತ್ವ ವಹಿಸಿದ ವಿವಿಧ ದಲಿತಪರ ಸಂಘಟನೆಗಳ ಮುಖಂಡರಾದ ಮುತ್ತಪ್ಪ ಚಮಲಾಪೂರ,ಬಸವರಾಜ ಕಟ್ಟಿಮನಿ, ಶಾಂತಪ್ಪ ಚಲವಾದಿ, ಶಂಕರಕಟ್ಟಿಮನಿ, ಮಾಳಪ್ಪ ಮಾಳಳ್ಳಿ, ಶೇಖರ ರಕ್ಕಸಗಿ, ಶರಣುಜಮಖಂಡಿ, ದೇವೀಂದ್ರ ಹಾದಿಮನಿ, ನಾಗೇಶ ಕಟ್ಟಿಮನಿ,ಮಹೇಶ ಚಲವಾದಿ, ಮಹಾಂತೇಶ ಕಟ್ಟಿಮನಿ, ನಿಂಗಣ್ಣಹೊಸಮನಿ, ಸಿದ್ದು ಬಾರಿಗಿಡದ, ಬಸ್ಸು ಕಟ್ಟಿಮನಿ, ಗೌತಮಪತ್ತೇಪೂರ, ನಜೀರ ಚೋರಗಸ್ತಿ, ಬಸವರಾಜ ಗುಂಡಕನಾಳ,ದೇವೀಂದ್ರ ಗೊಟಗುಣಕಿ, ಶರಣು ಭಂಟನೂರ,ಗುರುಪ್ರಸಾದ ಬಿ.ಜಿ., ಪ್ರಕಾಶ ಪಜಾರಿ, ಬಿ.ಕೆ. ರತ್ನಾಕರ,ಗೋಪಾಲಕ ಕಟ್ಟಿಮನಿ, ಶ್ವೇತಾ ಭೀಮಕ್ರಾಂತಿ, ಪ್ರಭುತಮದಡ್ಡಿ, ಹುಯೋಗಿ ತಳ್ಳೊಳ್ಳಿ, ಅಶೋಕ ಚಲವಾದಿ,ಪರಶುರಾಮ ದಿಂಡವಾರ, ನಜೀರಸಾಬ ಬಿಳಗಿ, ವಿನಾಯಕಗುಣಸಾಗರ, ದ್ಯಾವಪ್ಪ ದೊಡಮನಿ, ಅಕ್ಷಯ ಅಜಮನಿ,ಚಂದ್ರಶೇಖರ ದೊಡಮನಿ, ಬಸವರಾಜ ಕೊಳ್ಯಾಳ, ಪರಪ್ಪಚಲವಾದಿ, ಮೊದಲಾದವರು ವಹಿಸಿದ್ದರು.

click me!