ಒಳ ಚರಂಡಿ ಮಂಡಳಿ ಅಭಿಯಂತರ ಎಸಿಬಿ ಬಲೆಗೆ| ವಿದ್ಯಾಧರ ವಸ್ತ್ರದ ಎಸಿಬಿ ಬಲೆಗೆ ಬಿದ್ದ ಅಭಿಯಂತರ| ಸೇವಾ ಪುಸ್ತಕ ಕಳುಹಿಸಲು ವಸ್ತ್ರದ 2 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು| ಆಗ ಚೌಗಲಾ ಅವರು ಈ ಸಂಬಂಧ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು| ಅವರ ದೂರಿನ ಮೇರೆಗೆ ಎಸಿಬಿ ಪೊಲೀಸರು ನಗರ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ ಕಚೇರಿಯಲ್ಲಿ ವಸ್ತ್ರದ 2 ಲಕ್ಷ ಲಂಚ ಪಡೆಯುತ್ತಿದ್ದಾಗ ಎಸಿಬಿ ಪೊಲೀಸರು ಹಠಾತ್ ದಾಳಿ ನಡೆಸಿ ಬಂಧನ|
ವಿಜಯಪುರ[ಅ.24]: ಲಂಚ ಸ್ವೀಕರಿಸುತ್ತಿದ್ದ ವೇಳೆ ನಗರದ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ ಪ್ರಭಾರ ಕಾರ್ಯ ನಿರ್ವಾಹಕ ಅಭಿಯಂತರ ಬುಧವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.
ವಿದ್ಯಾಧರ ವಸ್ತ್ರದ ಎಸಿಬಿ ಬಲೆಗೆ ಬಿದ್ದ ಅಭಿಯಂತರ. ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಅಜಿತ ಕುಮಾರ ಚೌಗಲೆ ಅವರು ಜುಲೈ ತಿಂಗಳಲ್ಲಿ ಬೇರೆಡೆ ವರ್ಗಾವಣೆಯಾಗಿದ್ದರು. ಜಲ ಮಂಡಳಿ ಕಾರ್ಯನಿರ್ವಾಹಕ ಅಭಿಯಂತರ ಕಚೇರಿಯಿಂದ ವರ್ಗಾವಣೆಯಾಗಿದ್ದ ಚೌಗಲಾ ಅವರಿಗೆ ಸೇವಾ ಪುಸ್ತಕ ಕಳಿಸಬೇಕಾಗಿತ್ತು. ಸೇವಾ ಪುಸ್ತಕ ಕಳುಹಿಸಲು ಸಾಕಷ್ಟು ಸಲ ಚೌಗಲಾ ಅವರು ಪ್ರಭಾರ ಕಾರ್ಯ ನಿರ್ವಾಹಕ ಅಭಿಯಂತರ ವಸ್ತ್ರದ ಅವರಿಗೆ ಕೇಳಿದ್ದರು. ಆದರೂ ಸೇವಾ ಪುಸ್ತಕ ಕಳುಹಿಸಿ ಕೊಟ್ಟಿರಲಿಲ್ಲ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಸಂಬಂಧ ಅನೇಕರಿಂದ ಸೇವಾ ಪುಸ್ತಕ ಕಳುಹಿಸಿ ಕೊಡುವಂತೆ ಹೇಳಿಸಿಯೂ ಆಗಿತ್ತು. ಅದಕ್ಕೂ ಸಹ ವಸ್ತ್ರದ ಅವರು ಸೇವಾ ಪುಸ್ತಕ ಕಳುಹಿಸಿ ಕೊಟ್ಟಿರಲಿಲ್ಲ. ಸೇವಾ ಪುಸ್ತಕ ಕಳುಹಿಸಲು ವಸ್ತ್ರದ 2 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು. ಆಗ ಚೌಗಲಾ ಅವರು ಈ ಸಂಬಂಧ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಅವರ ದೂರಿನ ಮೇರೆಗೆ ಎಸಿಬಿ ಪೊಲೀಸರು ನಗರ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ ಕಚೇರಿಯಲ್ಲಿ ವಸ್ತ್ರದ 2 ಲಕ್ಷ ಲಂಚ ಪಡೆಯುತ್ತಿದ್ದಾಗ ಎಸಿಬಿ ಪೊಲೀಸರು ಹಠಾತ್ ದಾಳಿ ನಡೆಸಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಎಸಿಬಿ ಡಿವೈಎಸ್ಪಿ ಮಲ್ಲೇಶ ದೊಡಮನಿ, ಇನ್ಸಪೆಕ್ಟರ್‌ಗಳಾದ ಎಸ್.ಆರ್. ಗಣಾಚಾರಿ, ಸಚಿನ ಚಲವಾದಿ ನೇತೃತ್ವದಲ್ಲಿ ಈ ದಾಳಿ ನಡೆಯಿತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.