
ವಿಜಯಪುರ(ಅ.17): ಸಾರಿಗೆ ಬಸ್ ಮುಂದಿನ ಚಕ್ರ ಹರಿದು ವೃದ್ಧೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಬಸ್ ನಿಲ್ದಾಣದಲ್ಲಿ ಗುರುವಾರ ನಡೆದಿದೆ. ಮೃತ ವೃದ್ಧೆಯನ್ನು ಬಿಯಾಮಾ ನಬಿಸಾಬ ಟಕ್ಕಳಕಿ (67) ಎಂದು ಗುರುತಿಸಲಾಗಿದೆ.
ತನ್ನ ಮನೆಯಿಂದ ಪ್ರತ್ಯೇಕ ವಾಸವಾಗಿರುವ ವೃದ್ಧೆ ಮಗನ ಮನೆಗೆ ಉಪಹಾರ ಸೇವಿಸಲು ಹೊರಟಿದ್ದಾಗ ಈ ಘಟನೆ ನಡೆದಿದೆ. ಈಕರಸಾ ಸಂಸ್ಥೆಯ ಮುದ್ದೇಬಿಹಾಳ ಘಟಕದ ಮುದ್ದೇಬಿಹಾಳ-ಇಲಕಲ್ ಮಾರ್ಗದ ಕೆಎ 28 ಎಫ್ 1826 ನಂಬರಿನ ಬಸ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಬಳಿಕ ಆರೋಪಿ ಬಸ್ ಚಾಲಕ ಕುಲಕರ್ಣಿ ಪರಾರಿಯಾಗಿದ್ದಾನೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಘಟನಾ ಸ್ಥಳಕ್ಕೆ ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಬಸ್ಸಿನ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.