ಸಾರಿಗೆ ಬಸ್ ಪಲ್ಟಿಯಾದ ಪರಿಣಾಮ ಓರ್ವ ಬಾಲಕ ಸಾವನ್ನಪ್ಪಿ, 36 ಜನರಿಗೆ ಗಾಯಗಳಾಗಿವೆ|ತಾಳಿಕೋಟೆ ತಾಲೂಕಿನ ಳಗಾನೂರ ಗ್ರಾಮದ ಬಳಿ ನಡೆದ ಘಟನೆ| ವಿಜಯಪುರದಿಂದ ತಾಳಿಕೋಟೆಗೆ ಆಗಮಿಸುತ್ತಿದ್ದ ಸಾರಿಗೆ ಬಸ್| ಈ ವೇಳೆ ಎಕ್ಸಲ್ ಸುಫರ್ ಬೈಕ್ ನಲ್ಲಿ ಹೊರಟ್ಟಿದ್ದ ಇಬ್ಬರು ಬಾಲಕರು ರಸ್ತೆ ಮಧ್ಯೆ ಬಂದಿದ್ದರಿಂದ ಅದನ್ನು ತಪ್ಪಿಸಲು ಹೋಗಿದ್ದರಿಂದ ಬಸ್ ಪಲ್ಟಿ| ಬಸ್ಸಿನ ಚಕ್ರದಡಿ ಇಬ್ಬರೂ ಬಾಲಕರು ಸಿಲುಕಿಕೊಂಡಿದ್ದರು| ಅದರಲ್ಲಿ ಓರ್ವ ಬಾಲಕ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ| ಮತ್ತೊಬ್ಬ ಗಂಭಿರವಾಗಿ ಗಾಯಗೊಂಡಿದ್ದಾನೆ|
ವಿಜಯಪುರ[ಅ.16]: ಸಾರಿಗೆ ಬಸ್ ವೊಂದು ಪಲ್ಟಿಯಾದ ಪರಿಣಾಮ ಓರ್ವ ಬಾಲಕ ಸಾವನ್ನಪ್ಪಿ, 36 ಜನರಿಗೆ ಗಾಯಗಳಾದ ಘಟನೆ ತಾಳಿಕೋಟೆ ತಾಲೂಕಿನ ಳಗಾನೂರ ಗ್ರಾಮದ ಬಳಿ ನಡೆದಿದೆ. ಮೃತ ಬಾಲಕನನ್ನು ಢವಳಗಿ ಗ್ರಾಮದ ಬೀರಣ್ಣ ಪರದಾನಿ ಬೀರಗುಂಡ(15) ಎಂದು ಗುರುತಿಸಲಾಗಿದೆ.
ಕೆ.ಎ.28 ಎಫ್ 2087 ಸಾರಿಗೆ ಬಸ್ ವಿಜಯಪುರದಿಂದ ತಾಳಿಕೋಟೆ ಗೆ ಆಗಮಿಸುತ್ತಿತ್ತು, ಈ ವೇಳೆ ಎಕ್ಸಲ್ ಸುಫರ್ ಬೈಕ್ ನಲ್ಲಿ ಹೊರಟ್ಟಿದ್ದ ಇಬ್ಬರು ಬಾಲಕರು ರಸ್ತೆ ಮಧ್ಯೆ ಬಂದಿದ್ದರಿಂದ ಅದನ್ನು ತಪ್ಪಿಸಲು ಹೋಗಿದ್ದರಿಂದ ಬಸ್ ಪಲ್ಟಿಯಾಗಿದೆ. ಆದರೂ ಬಸ್ಸಿನ ಚಕ್ರದಡಿ ಇಬ್ಬರೂ ಬಾಲಕರು ಸಿಲುಕಿಕೊಂಡಿದ್ದರು. ಅದರಲ್ಲಿ ಓರ್ವ ಬಾಲಕ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ. ಮತ್ತೊಬ್ಬ ಗಂಭಿರವಾಗಿ ಗಾಯಗೊಂಡಿದ್ದಾನೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇಬ್ಬರು ಬಾಲಕರು ಸಹೋದರರಾಗಿದ್ದು ಢವಳಗಿಯಿಂದ ಕೊಣ್ಣೂರ ಗ್ರಾಮದಲ್ಲಿರುವ ಸಹೋದರಿಯನ್ನು ಕರೆದುಕೊಂಡು ಹೋಗಲು ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 36 ಜನರಲ್ಲಿ ಸುಮಾರು 10 ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿದೆ. ಗಾಯಾಳುಗಳನ್ನು ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಡೆದ ತಕ್ಷಣ ಬಸ್ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಸಿಪಿಆಯ್ ಆನಂದ ವಾಘ್ಮೋಡೆ. ಪಿಎಸ್.ಆಯ್ ವಸಂತ ಬಂಡಗಾರ ಬೆಟ್ಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.