ಬೆಂಗಳೂರು-ವಿಜಯಪುರ ನಡುವೆ ಜನವರಿ 13, 23, 18 ಮತ್ತು 26 ವಿಶೇಷ ರೈಲು ಸಂಚಾರ

Published : Jan 09, 2026, 09:58 AM IST
Vijayapur To Bengaluru Railway Station

ಸಾರಾಂಶ

ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವದ ಪ್ರಯಾಣಿಕರ ದಟ್ಟಣೆ ನಿವಾರಿಸಲು, ನೈಋತ್ಯ ರೈಲ್ವೆಯು ಎಸ್ಎಂವಿಟಿ ಬೆಂಗಳೂರು ಮತ್ತು ವಿಜಯಪುರ ನಡುವೆ ವಿಶೇಷ ರೈಲು (06245/06246) ಸೇವೆಯನ್ನು ಆರಂಭಿಸಿದೆ. 

ಬೆಂಗಳೂರು: ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವದ ವೇಳೆ ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆಯು ಎಸ್ಎಂವಿಟಿ ಬೆಂಗಳೂರು ಮತ್ತು ವಿಜಯಪುರ ನಡುವೆ ವಿಶೇಷ ರೈಲು ಸೇವೆ ಕಲ್ಪಿಸಿದೆ.

ಎಸ್ಎಂವಿಟಿ ಬೆಂಗಳೂರು-ವಿಜಯಪುರ- ಎಸ್ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್

ಎಸ್ಎಂವಿಟಿ ಬೆಂಗಳೂರು-ವಿಜಯಪುರ- ಎಸ್ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು 06245/06246 (2 ಟ್ರಿಪ್‌) ಸಂಚರಿಸಲಿದೆ. ಎಸ್ಎಂವಿಟಿ ಬೆಂಗಳೂರು - ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಜ. 13 ಮತ್ತು ಜ. 23 ರಂದು ರಾತ್ರಿ 7.15 ಕ್ಕೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 7 ಗಂಟೆಗೆ ವಿಜಯಪುರ ತಲುಪುತ್ತದೆ (2 ಟ್ರಿಪ್‌).

ವಿಜಯಪುರ - ಎಸ್ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಜ.18 ಮತ್ತು ಜ. 26 (ಸೋಮವಾರ) ರಂದು ಸಂಜೆ 5.30 ಕ್ಕೆ ವಿಜಯಪುರದಿಂದ ಹೊರಟು ಮರುದಿನ ಬೆಳಗ್ಗೆ 6.30ಕ್ಕೆ ಎಸ್ಎಂವಿಟಿ ಬೆಂಗಳೂರು ನಿಲ್ದಾಣವನ್ನು ತಲುಪುತ್ತದೆ. (2 ಟ್ರಿಪ್‌)

ಇದನ್ನೂ ಓದಿ: ಬೆಂಗಳೂರಿನಿಂದ ಕೇವಲ 60 ಕಿ.ಮೀ ದೂರದಲ್ಲಿ ಜಲಸಾಹಸ ಕ್ರೀಡೆ; ವಿವಿಧ ವಾಟರ್ ಬೋಟ್‌ ಲಭ್ಯ

ಎಲ್ಲೆಲ್ಲಿ ನಿಲುಗಡೆ?

ಈ ರೈಲುಗಳಿಗೆ (06245/46) ಬಾಣಸವಾಡಿ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಬಾದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ನಿಲ್ದಾಣಗಳಲ್ಲಿ ನಿಲುಗಡೆ ಒದಗಿಸಲಾಗಿದೆ. ಈ ರೈಲು 22 ಬೋಗಿ ಒಳಗೊಂಡಿರುತ್ತದೆ. ಅವುಗಳಲ್ಲಿ 2 ಎಸಿ 2 ಟೈರ್, 3 ಎಸಿ 3 ಟೈರ್, 11 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್ಎಲ್ಆರ್/ಡಿ ಬೋಗಿಗಳು ಇರಲಿವೆ.

ಇದನ್ನೂ ಓದಿ: ಸಂಕ್ರಾಂತಿ ಪ್ರಯಾಣಕ್ಕೆ ಬಂತು ಎರಡು ವಿಶೇಷ ರೈಲು: ಯಶವಂತಪುರ To ತಾಳಗುಪ್ಪ ಎಕ್ಸ್‌ಪ್ರೆಸ್

PREV
Read more Articles on
click me!

Recommended Stories

ರೈಲು ಬರುವ ವೇಳೆಯೇ ಕೆಟ್ಟು ನಿಂತ 25 ಮಕ್ಕಳಿದ್ದ ಶಾಲಾ ವಾಹನ.. ಸ್ಥಳೀಯರಿಂದ ತಪ್ಪಿದ ಭಾರೀ ಅನಾಹುತ
ಮಂತ್ರಿಗಿರಿ ಸಿಗದ್ದಕ್ಕೆ ನೋವಿಲ್ಲ, ಹೀಗ್ಯಾಕೆ ಮಾಡಿದರೆಂಬ ಬೇಸರ: ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ