ಮುದ್ದೇಬಿಹಾಳ: ಬಸ​ವ​ಸಾ​ಗ​ರ​ ಡ್ಯಾಂನಿಂದ 3.70 ಲಕ್ಷ ಕ್ಯುಸೆಕ್‌ ನೀರು ಹೊರಕ್ಕೆ

Published : Oct 25, 2019, 11:32 AM IST
ಮುದ್ದೇಬಿಹಾಳ: ಬಸ​ವ​ಸಾ​ಗ​ರ​ ಡ್ಯಾಂನಿಂದ 3.70 ಲಕ್ಷ ಕ್ಯುಸೆಕ್‌ ನೀರು ಹೊರಕ್ಕೆ

ಸಾರಾಂಶ

ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಹೆಚ್ಚಿದ ಒಳಹರಿವು| ಸಂಪೂರ್ಣ ಭರ್ತಿಯಾದ ಜಲಾಶಯ|ಜಲಾಶಯದ 19 ಗೇಟ್‌ ಮೂಲಕ 3.70 ಲಕ್ಷ ಕ್ಯುಸೆಕ್‌ ನೀರನ್ನು ನದಿಗೆ ಹರಿಬಿಡಲಾಯಿತು|

ಮುದ್ದೇಬಿಹಾಳ[ಅ.25]: ತಾಲೂಕಿನ ಗಡಿಭಾಗದಲ್ಲಿರುವ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಆಲಮಟ್ಟಿಯ ಲಾಲಬಹದ್ದೂರ ಶಾಸ್ತ್ರೀ ಮತ್ತು ಕೂಡಲ ಸಂಗಮ ಬಳಿ ಮಲಪ್ರಭಾ ನದಿಯ ನೀರು ಕೃಷ್ಣಾ ನದಿ ಮೂಲಕ ಅಪಾರ ಪ್ರಮಾಣದಲ್ಲಿ ಹರಿದು ಬರತೊಡಗಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಭರ್ತಿಯಾಗಿದ್ದ ಜಲಾಶಯವನ್ನು ಸ್ವಲ್ಪ ಮಟ್ಟಿಗೆ ಖಾಲಿ ಮಾಡಲಾಗುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪರಿಣಾಮ ಗುರುವಾರ ಬೆಳಗ್ಗೆ ಜಲಾಶಯದ 19 ಗೇಟ್‌ ಮೂಲಕ 3.70 ಲಕ್ಷ ಕ್ಯುಸೆಕ್‌ ನೀರನ್ನು ನದಿಗೆ ಹರಿಬಿಡಲಾಯಿತು. ಈ ಹಂತದಲ್ಲಿ ಜಲಾಶಯಕ್ಕೆ ಒಳಹರಿವು 3.50 ಲಕ್ಷ ಕ್ಯುಸೆಕ್‌ ಇತ್ತು. ಸಂಜೆಯ ಹೊತ್ತಿಗೆ ನದಿಯಲ್ಲಿ ಪ್ರವಾಹ ಪರಿಸ್ಥಿತಿ ನಿಧಾನವಾಗಿ ಇಳಿಮುಖವಾಗುತ್ತಿರುವುದನ್ನು ಅರಿತು ಹೊರಹರಿವನ್ನು 15 ಗೇಟ್‌ ಮೂಲಕ 2.20 ಲಕ್ಷ ಕ್ಯುಸೆಕ್‌ಗೆ ತಗ್ಗಿಸಲಾಯಿತು. ಮಧ್ಯಾಹ್ನ 2 ಗಂಟೆಯವರೆಗೂ 3 ಲಕ್ಷ ಕ್ಯುಸೆಕ್‌ ಮೇಲೆಯೇ ಇದ್ದ ಹೊರಹರಿವು ಮದ್ಯಾಹ್ನ 3 ಗಂಟೆ ನಂತರ ಇಳಿಮುಖವಾಗತೊಡಗಿದ್ದು ನದಿ ದಂಡೆಯಲ್ಲಿದ್ದ ಜನರ ಆತಂಕ ನಿವಾರಣೆಗೆ ಅವಕಾಶ ಮಾಡಿಕೊಟ್ಟಿತು. ಸಂಜೆ 6 ಗಂಟೆ ಹೊತ್ತಿದೆ ಈ ಜಲಾಶಯಕ್ಕೆ ಆಲಮಟ್ಟಿಯಿಂದ 2.30 ಲಕ್ಷ ಒಳಹರಿವು ಇದೆ.
 

PREV
click me!

Recommended Stories

ಬಸವತತ್ವ ಪ್ರಚಾರಕ, ವಚನ ಶಿಲಾ ಮಂಟಪದ ರೂವಾರಿ ಚನ್ನಬಸವ ಶ್ರೀಗಳು ಲಿಂಗೈಕ್ಯ
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ