ಕಾಂಗ್ರೆಸ್‌ಗೆ ಧಿಕ್ಕಾರ, ಮೋದಿಗೆ ಜೈಕಾರ : ಬಿಜೆಪಿ ರಾಜ್ಯ ಕಾರ್ಯಕಾರಿಣಿಯ 2 ನಿರ್ಣಯ

Published : Apr 18, 2022, 03:21 AM IST
ಕಾಂಗ್ರೆಸ್‌ಗೆ ಧಿಕ್ಕಾರ, ಮೋದಿಗೆ ಜೈಕಾರ : ಬಿಜೆಪಿ ರಾಜ್ಯ ಕಾರ್ಯಕಾರಿಣಿಯ 2 ನಿರ್ಣಯ

ಸಾರಾಂಶ

ಬಿಜೆಪಿ ರಾಜ್ಯ ಕಾರ್ಯಕಾರಿಣಿಯ 2 ನಿರ್ಣಯ ವಿಪಕ್ಷದ ಹೊಣೆಗಾರಿಕೆಯನ್ನು ಮರೆತಿರುವ ಕಾಂಗ್ರೆಸ್‌ಗೆ ಧಿಕ್ಕಾರ ಪ್ರಧಾನಿ ಮೋದಿ ಅವರ ಕಾರ್ಯವೈಖರಿಗೆ ಜೈಕಾರ  

ವಿಜಯನಗರದಲ್ಲಿ 2 ದಿನ ನಡೆದ ಬಿಜೆಪಿ ರಾಜ್ಯ ಕಾರ‍್ಯಕಾರಿಣಿ ಸಭೆ ಮುಕ್ತಾಯವಾಗಿದೆ. ಕಾಂಗ್ರೆಸ್‌ ವಿರುದ್ಧ ಖಂಡನಾ ನಿರ್ಣಯ ಕೈಗೊಂಡ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಕಾರ್ಯವೈಖರಿ ಮೆಚ್ಚಿ ಅಭಿನಂದನಾ ನಿರ್ಣಯ ಕೈಗೊಂಡಿತು. ಕಾರ್ಯಕಾರಿಣಿಯಲ್ಲಿ ಇವೆರಡೇ ನಿರ್ಣಯಗಳನ್ನು ಪಕ್ಷ ತೆಗೆದುಕೊಂಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಯನ್ನು ಗೆಲ್ಲಲೇಬೇಕು ಎಂದು ಒಕ್ಕೊರಲ ಸಂಕಲ್ಪ ಮಾಡಿದೆ ಎಂದು ಪಕ್ಷದ ರಾಜ್ಯ ಮುಖ್ಯ ವಕ್ತಾರ ಎಂ.ಜೆ. ಮಹೇಶ್‌ (Mahesh) ಕಾರ್ಯಕಾರಿಣಿ ನಂತರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಖಂಡನಾ ನಿರ್ಣಯ:

ವಿರೋಧ ಪಕ್ಷಕ್ಕೆ ದೊಡ್ಡ ಜವಾಬ್ದಾರಿ ಇರುತ್ತದೆ. ಆದರೆ ಇದನ್ನು ಕಾಂಗ್ರೆಸ್‌ ಸಂಪೂರ್ಣ ಮರೆತಿದ್ದು ಸೈದ್ಧಾಂತಿಕವಾಗಿ ದಿವಾಳಿಯಾಗಿದೆ. ವಿಧಾನಸಭಾ ಲೋಕಸಭಾ ಕಲಾಪಗಳಿಗೆ ಅಡ್ಡಿಪಡಿಸುವುದು, ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ, ಸಾವಿನ ಪ್ರಕರಣಗಳಲ್ಲಿ ರಾಜಕಾರಣವನ್ನು ಬೆರೆಸುವುದು ಹೀಗೆ ಹೊಣೆಗಾರಿಕೆ ಮರೆತಿದೆ ಎಂದು ಖಂಡಿಸುವ ಮೊದಲ ನಿರ್ಣಯವನ್ನು ಕಾರ್ಯಕಾರಿಣಿ ಸರ್ವಾನುಮತದಿಂದ ಅಂಗೀಕರಿಸಿದೆ.

ಹಿಂದೂ ಯುವಕ ಹರ್ಷ ಹಾಗೂ ಚಂದ್ರು (Chandru) ಸಾವಿನ ವಿಷಯದಲ್ಲಿ ತುಷ್ಟೀಕರಣದ ರಾಜಕಾರಣ ಮಾಡಿರುವ ಕಾಂಗ್ರೆಸ್‌, ಉಗ್ರರಿಗೆ ಕುಮ್ಮಕ್ಕು ನೀಡುವ ಎಸ್‌ಡಿಪಿಐ (SDPI) ಹಾಗೂ ಪಿಎಫ್‌ಐ (PFI) ಸಂಘಟನೆಗಳ ವಿರುದ್ಧದ 150ಕ್ಕೂ ಹೆಚ್ಚು ಪ್ರಕರಣಗಳನ್ನು ತನ್ನ ಅಧಿಕಾರಾವಧಿಯಲ್ಲಿ ಕೈಬಿಟ್ಟಿದೆ ಎಂದು ಕಾರ್ಯಕಾರಿಣಿ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್‌ ಆಡಳಿತದ ರಾಜಸ್ಥಾನದಲ್ಲಿ ಕೋವಿಡ್‌ ಲಸಿಕೆಯ 11.5 ಲಕ್ಷ ಫೈಲ್‌ಗಳನ್ನು ತಿಪ್ಪೆಗೆಸಿದಿರುವ ಬಗ್ಗೆ ವರದಿಯಾಗಿದೆ. ಇದೇ ವೇಳೆ ಕರ್ನಾಟಕ ಲಸಿಕಾಕರಣದಲ್ಲಿ ಮುಂಚೂಣಿಯಲ್ಲಿದ್ದು ಈ ರಾಷ್ಟ್ರೀಯ ಅಭಿಯಾನ ಯಶಸ್ವಿಯಾಗಿದೆ. ಜೊತೆಗೆ ಹಿಜಾಬ್‌ನಂತಹ (Hijab) ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲಾಗಿದೆ ಎಂದರು.

ಬಿಜೆಪಿ ಕಾರ್ಯಕಾರಣಿ ವೇದಿಕೆಯಲ್ಲಿ ಹಂಪಿ ಕಲಾ ವೈಭವ: ವಿಜ​ಯ​ನ​ಗ​ರ​ದಿಂದಲೇ ಚುನಾ​ವಣಾ ರಣಕಹ​ಳೆ

ಅಭಿವೃದ್ಧಿ ಪಣ...

ಕೋವಿಡ್‌ ಮತ್ತಿತರ ಸವಾಲುಗಳ ಮಧ್ಯೆಯೂ ಸರ್ವಸ್ಪರ್ಶಿ ಬಜೆಟ್‌ ಮಂಡನೆಯ ಮೂಲಕ ನಾಡಿನ ಗಮನ ಸೆಳೆದಿರುವ ಬಸವರಾಜ ಬೊಮ್ಮಾಯಿ ಸರ್ಕಾರ, ಬಜೆಟ್‌ ಘೋಷಣೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲಿದೆ. ಹಿಂದುಳಿದ ಪ್ರದೇಶಗಳಲ್ಲಿ ಆದ್ಯತೆಯ ಮೇಲೆ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ. ಇದನ್ನು ಮುಂದುವರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದರು. ದೇಶದ ಪ್ರಗತಿಗೆ ಡಬಲ್‌ ಎಂಜಿನ್‌ ಸರ್ಕಾರ ಅಗತ್ಯ ಎಂಬ ಪ್ರಧಾನಿ ಮೋದಿ ಅವರ ಮಾತಿಗೆ ಪೂರಕವಾದ ಆಡಳಿತ ನಡೆಯುತ್ತಿದೆ ಎಂದು ಕಾರ್ಯಕಾರಿಣಿ ಮೆಚ್ಚುಗೆ ಸೂಚಿಸಿದೆ.

ಮೋದಿಗೆ ಅಭಿನಂದನೆ:

ಈಶ್ವರಪ್ಪ ರಾಜೀನಾಮೆ ಹಿಂದಿದೆಯಾ ಮತ್ತೊಂದು ಕಹಾನಿ?

ವಿಶ್ವದ ಗಮನ ಸೆಳೆಯುತ್ತಿರುವ ಪ್ರಧಾನಿ ಮೋದಿ (Prime Minister Narendra Modi) ಅವರ ಯೋಜನೆಗಳು ಮತ್ತು ಆಡಳಿತ ವೈಖರಿಯನ್ನು ಪ್ರಶಂಸಿಸಿರುವ ಕಾರ್ಯಕಾರಿಣಿ, ಸಂಕಷ್ಟಗಳನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಪ್ರಧಾನಿ ನಮ್ಮ ದೇಶದವರು ಎಂಬುದು ಹೆಮ್ಮೆಯ ಸಂಗತಿ ಎಂದು ಕಾರ್ಯಕಾರಿಣಿ ಹೇಳಿದೆ. ಸಮರಪೀಡಿತ ಉಕ್ರೇನ್‌ನಿಂದ ಆಪರೇಷನ್‌ ಗಂಗಾ (Operation Ganga) ಮೂಲಕ ಭಾರತೀಯರನ್ನು ಕರೆದು ತಂದದ್ದು ಸಣ್ಣ ಸಂಗತಿಯಲ್ಲ. ಬೇರಾರ‍ಯವ ದೇಶವೂ ಮಾಡಲಾಗದ ಕೆಲಸವನ್ನು ಮೋದಿ ಮಾಡಿ ತೋರಿಸಿದ್ದಾರೆ ಎಂದು ಸಭೆ ಮೆಚ್ಚುಗೆ ಸೂಚಿಸಿದೆ. ಇದಕ್ಕಾಗಿ ಮೋದಿ ಅವರ ಕಾರ್ಯವೈಖರಿಗೆ ಅಭಿನಂದನಾ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

PREV
Read more Articles on
click me!

Recommended Stories

ಭಾನುವಾರ ರಜಾದಿನದ ಮಜಾ ತಂದ ಆಪತ್ತು; ಬಂಡಿಹಳ್ಳಿ ಕೆರೆಯಲ್ಲಿ ನಡೆಯಿತು ಘೋರ ದುರಂತ!
ವಿಶ್ವವಿಖ್ಯಾತ ಹಂಪಿಯ ಸಾಲು ಮಂಟಪವೀಗ ಸ್ವಚ್ಛ