Ghar Wapsi ವಿಜಯನಗರ ಜಿಲ್ಲೆಯಲ್ಲಿ ಘರ್‌ವಾಪಸಿ, ಕ್ರೈಸ್ತರಾಗಿ ಮತಾಂತರಗೊಂಡಿದ್ದ 22 ಮಂದಿ ಮರಳಿ ಹಿಂಧೂ ಧರ್ಮ ಸೇರ್ಪಡೆ!

By Suvarna NewsFirst Published Jan 24, 2022, 2:09 AM IST
Highlights
  • ಹಂಪಿಯ ಮಾತಂಗ ಆಶ್ರಮದ ಶ್ರೀ ಪೂರ್ಣಾನಂದ ಭಾರತಿ ಸ್ವಾಮೀಜಿ ನೇತೃತ್ವ
  • ಅಲೆಮಾರಿ ಬುಡ್ಗ ಜಂಗಮ ಸಮಾಜಕ್ಕೆ ಆಮಿಷವೊಡ್ಡಿ ಮತಾಂತರ
  • 5 ಕುಟುಂಬಗಳು ಮರಳಿ ಹಿಂದೂ ಧರ್ಮಕ್ಕೆ ಮತಾಂತರ

ವಿಜಯನಗರ(ಜ.24):  ಅತ್ತ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ(anti conversion bill) ಸದ್ದು ಮಾಡುತ್ತಿದ್ದರೆ ಇತ್ತ ವಿಜಯನಗರ ಜಿಲ್ಲೆಯಲ್ಲಿ ಕ್ರೈಸ್ತ ಧರ್ಮದಿಂದ ಐದು ಕುಟುಂಬಗಳು ಭಾನುವಾರ ಹಿಂದೂ(Hindu) ಧರ್ಮಕ್ಕೆ ಮರಳಿದೆ. ನಗರದ 10ನೇ ವಾರ್ಡ್‌ನ ಅರವಿಂದ ನಗರದ ಬುಡ್ಗ ಜಂಗಮ ಕಾಲೋನಿಯ ಐದು ಕುಟುಂಬಗಳ 22 ಸದಸ್ಯರು ಘರ್‌ ವಾಪಸಿ ಆದರು. ಹಂಪಿಯ ಮಾತಂಗ ಆಶ್ರಮದ ಶ್ರೀ ಪೂರ್ಣಾನಂದ ಭಾರತಿ ಸ್ವಾಮೀಜಿ ಅವರು ಶುದ್ಧೀಕರಣ ಮಾಡಿ ಹಿಂದೂ ಧರ್ಮಕ್ಕೆ ಬರಮಾಡಿಕೊಂಡರು. ಕಾಲನಿಯ ಜಂಬಲಮ್ಮ ಮತ್ತು ಮಾರೆಮ್ಮ ದೇಗುಲದ ಶಮಿವೃಕ್ಷದ ಬಳಿ ತೆರಳಿ ಬುಡ್ಗ ಜಂಗಮ ಹಿಂದೂ ಸಂಪ್ರದಾಯದಂತೆ ದೇವತೆಗೆ ಕೈಮುಗಿದು, ಪೂಜೆ ಸಲ್ಲಿಸಿ ಮಾತೃ ಧರ್ಮಕ್ಕೆ ಮರಳಿದರು.

ಬುಡ್ಗ ಜಂಗಮ ಸಮಾಜದ ರಾಜ್ಯಾಧ್ಯಕ್ಷ ಸಣ್ಣಮಾರೆಪ್ಪ ಮಾತನಾಡಿ, ಅಲೆಮಾರಿ ಬುಡ್ಗ ಜಂಗಮ ಸಮಾಜದವರು ಹೊಟ್ಟೆಪಾಡಿಗಾಗಿ ಸಣ್ಣ-ಪುಟ್ಟಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಈ ಸಮಾಜದವರಿಗೆ ಆಮಿಷವೊಡ್ಡಿ ಮತಾಂತರ ಮಾಡುವುದು ಸರಿಯಲ್ಲ. ರಾಜ್ಯಾದ್ಯಂತ ಅಲೆಮಾರಿ ಬುಡ್ಗಜಂಗಮ ಸಮಾಜದವರು ಮತಾಂತರ(Christianity) ಹೊಂದಿದವರು ಮೂಲ ಹಿಂದೂ ಧರ್ಮಕ್ಕೆ ವಾಪಸ್‌ ಬರಬೇಕು. ಸಮಾಜದವರನ್ನು ಆಮಿಷ ಒಡ್ಡಿ ಮತಾಂತರ ಮಾಡಿದರೆ ಕಾನೂನು ಹೋರಾಟ ಕೈಗೊಳ್ಳಲಾಗುವುದು. ನಮ್ಮ ಬುಡಕಟ್ಟು ಸಂಪ್ರದಾಯದೊಂದಿಗೆ ಹಿಂದೂ ಧರ್ಮವನ್ನು ಉಳಿಸಿ ಬೆಳೆಸಲು ಎಲ್ಲರೂ ಕಟಿಬದ್ಧರಾಗಬೇಕು. ಒಂದು ವೇಳೆ ಮತಾಂತರಗೊಂಡರೆ ಸರ್ಕಾರದ ಯಾವುದೇ ಸೌಲಭ್ಯ ಸಿಗುವುದಿಲ್ಲ. ಪ.ಜಾತಿಯವರು ಮತಾಂತರಗೊಂಡರೆ ತಮ್ಮ ಮಕ್ಕಳಿಗೆ ಸಿಗುವ ಉದ್ಯೋಗ, ಶಿಕ್ಷಣ ಸೌಲಭ್ಯವನ್ನು ಕಳೆದುಕೊಳ್ಳುವ ಸ್ಥಿತಿ ಇದೆ. ಹೊಸ ಕಾಯ್ದೆಯಲ್ಲಿ ಇದನ್ನು ಅಡಕ ಮಾಡಲಾಗಿದೆ. ಇದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

Crime News: ಕ್ರೈಸ್ತ ಶಾಲೆಯಲ್ಲಿ ಮತಾಂತರಕ್ಕೆ ಒತ್ತಾಯ: ವಿದ್ಯಾರ್ಥಿನಿ ಆತ್ಮಹತ್ಯೆ

ಮುಖಂಡರಾದ ವೈ. ಯಮುನೇಶ್‌, ವೆಂಕಟೇಶಮೂರ್ತಿ, ಪ್ರಸನ್ನ, ಕೇಶವ್‌, ಸಾಲಿಸಿದ್ದಯ್ಯಸ್ವಾಮಿ, ಕೋರಿ ಫಕ್ಕೀರಪ್ಪ, ಸೂರ್ಯನಾರಾಯಣ ಕೊಳಗಲ್‌, ಶಿವರುದ್ರಯ್ಯ ಹಿರೇಮಠ, ವೀರೇಶ್‌, ದೊಡ್ಡ ಜಂಬಣ್ಣ, ನಾಗೇಶ, ಜಂಬಕ್ಕ, ಮಾರೆಣ್ಣ ಮತ್ತಿತರರಿದ್ದರು.

ಕಳೆದ ಎಂಟು ವರ್ಷಗಳ ಹಿಂದೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಹೊಟ್ಟೆಪಾಡಿಗಾಗಿ ಹೊಸಪೇಟೆಯಿಂದ ವಲಸೆ ಹೋದ ಸಂದರ್ಭದಲ್ಲಿ ಮತಾಂತರ ಆಗಿದ್ದರು. ಈಗ ಸಮಾಜದ ಹಿರಿಯರು ಹಾಗೂ ಮಾತಂಗಶ್ರೀಗಳ ನೇತೃತ್ವದಲ್ಲಿ ಘರ್‌ವಾಪಸಿ ಆಗಿದ್ದಾರೆ.

Ghar Wapsi: 15 ವರ್ಷದ ಬಳಿಕ ಮರಳಿ ಹಿಂದೂ ಧರ್ಮಕ್ಕೆ, ಉಮೇಶ್ ಆದ ಮೊಹಮ್ಮದ್ ಅಬ್ದುಲ್ಲಾ!

ಮಲೆಬೆನ್ನೂರಿನಲ್ಲಿ ಮತಾಂತರ ಹಾವಳಿ:
 ದಾವೋ ಮತ್ತು ಕಾರ್ಬಾರಿಗಳು ಗ್ರಾಮದಲ್ಲಿ ಇಂತಹ ಮತಾಂತರ ಕೃತ್ಯವನ್ನು ಮರುಕಳಿಸದಂತೆ ತಡೆಗಟ್ಟಬೇಕು. ಬೇರೆ ಧರ್ಮಕ್ಕೆ ಮತಾಂತರಗೊಂಡವರನ್ನು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್‌ ಮತ್ತು ಎಂ.ಡಿ.ವೆಂಕಟೇಶ್‌ನಾಯ್‌್ಕ ಅವರ ಸಮ್ಮುಖದಲ್ಲಿ ಘರ್‌ ವಾಪಸಿ ಕಾರ್ಯಕ್ರಮದ ಮೂಲಕ ಮತ್ತೆ ಜನಾಂಗಕ್ಕೆ ತರಲಾಗುವುದು ಎಂದು ಲಂಬಾಣಿ ಸಮುದಾಯದ ನಾಯಕ ಹೇಳಿದ್ದಾರೆ.

ಅಭಿವೃದ್ಧಿ ಹೊಂದಿದ ತಾಂಡಾಗಳಲ್ಲಿ ಸೇವಾಲಾಲ್‌ ದೇವಾಲಯ ಮತ್ತು ಸಮುದಾಯದ ಬೆಳವಣಿಗೆಗೆ ತಾಂಡಾ ನಿಗಮದ ಅಧ್ಯಕ್ಷರೊಂದಿಗೆ ಚರ್ಚಿಸಿ, ಹಿಂಡಸಗಟ್ಟಕ್ಯಾಂಪ್‌ನಲ್ಲಿ ಏಪ್ರಿಲ್‌ ಅಂತ್ಯದೊಳಗೆ ಅಧ್ಯಕ್ಷರ ವಾಸ್ಯವ್ಯಕ್ಕೆ ದಿನಾಂಕ ನಿಗದಿ ಮಾಡಲಾಗುವುದು ಎಂದು ತಿಳಿಸಿದರು.

ಅನ್ಯ ದೇವರನ್ನು ಪೂಜೆ ಮಾಡುವ ಮೊದಲು ತಮ್ಮ ತಂದೆ ತಾಯಿಯನ್ನು ಪೂಜಿಸಿ, ಆಮಿಷಕ್ಕೆ ಒಳಗಾಗಿ ಬೇರೆ ದೇವರನ್ನು ಪೂಜೆ ಮಾಡಿದರೆ ಭೂಮಿ, ಗಾಳಿ ಮತ್ತು ಪ್ರಕೃತಿ ಸಹ ಕ್ಷಮಿಸಲ್ಲ. ಪ್ರಾಣಿ, ಪಕ್ಷಿಯಲ್ಲಿ ಜಾತಿಯಿಲ್ಲ, ಮಾನವರಲ್ಲಿ ಮಾತ್ರ ಜಾತಿ ಪದ್ಧತಿಯಿದ್ದು, ಜನ ಹಣಕ್ಕಾಗಿ ಯಾವುದೇ ಕಾರ್ಯಕ್ಕೆ ಶರಣಾಗುತ್ತಾರೆ ಎಂದು ಶ್ರೀಗಳು ವಿಷಾದಿಸಿದರು.ಕರ್ನಾಟಕ ಬಂಜಾರ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಗಿರೀಶ್‌ನಾಯ್‌್ಕ ಮಾತನಾಡಿ, ಲಂಬಾಣಿ ಸಮುದಾಯದಲ್ಲಿ ಉತ್ತಮ ಸಂಪ್ರದಾಯವಿದ್ದು, ಅನ್ಯದೇಶದವರೂ ಮಾರು ಹೋಗಿದ್ದಾರೆ. ದೆಹಲಿ ವಸ್ತುಸಂಗ್ರಹಾಲಯದಲ್ಲಿ ಬಂಜಾರ ಸಂಸ್ಕೃತಿಯ ಉಲ್ಲೇಖವಿದೆ. ತಿರುಪತಿ ದೇವಾಲಯದ ವೆಂಕಟೇಶ್ವರನ ಪಕ್ಕದಲ್ಲೂ ಲಂಬಣಿ ಗುರುಗಳ ಪೂಜೆ ನಡೆಯುತ್ತದೆ. ಸರ್ಕಾರದ ಎಸ್‌ಸಿ ಮೀಸಲಾತಿ ಪಡೆದು ಬೇರೆ ಧರ್ಮಕ್ಕೆ ಮತಾಂತರಗೊಳ್ಳುವವರ ಮೀಸಲಾತಿ ರದ್ದು ಮಾಡುವ ಬಗ್ಗೆ ತಹಸೀಲ್ದಾರ್‌ಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.

click me!