ವಿಜಯನಗರ ಅರಸರು ಸಾಮ್ರಾಜ್ಯ ವಿಸ್ತರಿಸುತ್ತ ದೇಗುಲ ಕಟ್ಟಿದರು: ಆನಂದ್ ಸಿಂಗ್

By Anusha Kb  |  First Published Apr 11, 2022, 4:56 AM IST

ಜಾನಪದ ಸಾಧಕರಿಗೆ 2021ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ  ಸಚಿವ ಆನಂದ್‌ ಸಿಂಗ್‌ ಚಾಲನೆ ನೀಡಿದರು
 


ಹೊಸಪೇಟೆ(ಏ.11): ಇಡೀ ಜಗತ್ತಿನಲ್ಲಿ ಭಾರತ ಇತಿಹಾಸದಿಂದಲೇ ಗಮನ ಸೆಳೆದಿದೆ. ನಮ್ಮ ಇತಿಹಾಸವನ್ನು ನಾವು ನಿರ್ಲಕ್ಷಿಸಬಾರದು. ವಿಜಯನಗರದ ಆಳರಸರು ಕಲೆ, ಸಾಹಿತ್ಯಕ್ಕೂ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರು ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌(Anand singh) ಹೇಳಿದರು. ಕರ್ನಾಟಕ ಜಾನಪದ ಅಕಾಡೆಮಿ, ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ನಗರದ ಸಿದ್ದಿಪ್ರಿಯಾ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಾನಪದ ಸಾಧಕರಿಗೆ 2021ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಜಯನಗರದ ಅರಸರು ದೇಗುಲಗಳನ್ನು ಕಟ್ಟುತ್ತಲೇ; ಸಾಮ್ರಾಜ್ಯವನ್ನು ವಿಸ್ತರಿಸಿದ್ದಾರೆ. ಬೇರೆ ಸಾಮ್ರಾಜ್ಯದ ಅರಸರು ಅರಮನೆಗಳನ್ನು ಕಟ್ಟಿದ್ದಾರೆ. ಆದರೆ, ವಿಜಯನಗರದ ಅರಸರು ದೇಗುಲ, ಸ್ಮಾರಕಗಳನ್ನು ನಿರ್ಮಿಸಿದ್ದಾರೆ ಎಂದರು.

ವಿಜಯನಗರದ (Vijayanagar) ಅರಸರು ಬರೀ ಕಲೆ, ಸಾಹಿತ್ಯಕ್ಕೆ ಮಾತ್ರ ಮನ್ನಣೆ ನೀಡಲಿಲ್ಲ. ಅದರ ಜತೆಗೆ ಆರ್ಥಿಕತೆಗೂ ಒತ್ತು ನೀಡಿದರು. ನೀರಾವರಿಯನ್ನು ಈ ಭಾಗದಲ್ಲಿ ಬೆಳೆಸಿದರು. ಆಗಿನ ಕಾಲದಲ್ಲೇ ರಾಯ, ಬಸವ, ಬೆಲ್ಲ, ತುರ್ತಾ, ಕಾಳಗಟ್ಟಸೇರಿದಂತೆ ಹತ್ತಕ್ಕೂ ಅಧಿಕ ಕಾಲುವೆಗಳನ್ನು ನಿರ್ಮಿಸಿದ್ದಾರೆ ಎಂದು ಹೇಳಿದರು. ವಿರೂಪಾಕ್ಷೇಶ್ವರ ದೇಗುಲದ (Virupakshashwara temple) ಗರ್ಭಗುಡಿಗೂ ಕಾಲುವೆ ನೀರು ಹೋಗುವಂಥ ವ್ಯವಸ್ಥೆ ಮಾಡಿದ್ದರು. ಇಂಥ ಪರಂಪರೆ, ಇತಿಹಾಸವನ್ನು ಹೊಂದಿರುವ ನೆಲ ನಮ್ಮದಾಗಿದೆ. ಹಾಗಾಗಿ ನಮ್ಮ ಇತಿಹಾಸವನ್ನು ಮರೆಯುವ ಕೆಲಸವಾಗಬಾರದು. ಭಾರತೀಯ ಪುರಾತತ್ವ ಇಲಾಖೆ (Indian Archaeological Department) ಹಂಪಿಯ (Hampi) ಇತಿಹಾಸವನ್ನು ಶೇ.10ರಷ್ಟುಮಾತ್ರ ಅರಿತಿದೆ. ಆದರೆ, ಇನ್ನೂ ಶೇ.90ರಷ್ಟುಅಧ್ಯಯನ ಮಾಡಬೇಕಿದೆ. ಹಂಪಿಯನ್ನು ಬರೀ 30 ನಿಮಿಷದಲ್ಲಿ ನೋಡಲು ಆಗುವುದಿಲ್ಲ. ಇತಿಹಾಸ ಅರಿಯಲು ಸಾಕಷ್ಟು ದಿನಗಳೇ ಹಿಡಿಯುತ್ತವೆ ಎಂದರು.

Tap to resize

Latest Videos

undefined

Ankola: ಬೇಲೆಕೇರಿ ಅದಿರು ನಾಪತ್ತೆ: ಸಚಿವ ಆನಂದ್‌ಸಿಂಗ್‌, ರೆಡ್ಡಿಗೆ ಜಾಮೀನು

ದುಬೈ ಅನ್ನು ಬರೀ 25 ವರ್ಷದಲ್ಲಿ ಕಟ್ಟಲಾಗಿದೆ ಎಂದು ಹೇಳುತ್ತಾರೆ. ಸಿಮೆಂಟ್‌, ಕಬ್ಬಿಣದಿಂದ ನಿರ್ಮಾಣ ಮಾಡಿರುವ ಮಹಲುಗಳು ಬಿದ್ದು ಹೋಗುತ್ತವೆ. ಆದರೆ, ಹಂಪಿಯ ಸ್ಮಾರಕಗಳು ಯಾವ ಭೂಕಂಪಕ್ಕೂ ಜಗ್ಗುವುದಿಲ್ಲ. ಬದರಿನಾಥ ದೇಗುಲ ಯಾವ ಪ್ರವಾಹ, ಹಿಮಸ್ಫೋಟಕ್ಕೂ ಜಗ್ಗದೇ ಹಾಗೇ ಉಳಿದಿತ್ತು. ಇಂಥ ವೈಜ್ಞಾನಿಕತೆಯನ್ನು ನಮ್ಮ ಪೂರ್ವಜರು ಅಳವಡಿಸಿಕೊಂಡಿದ್ದರು ಎಂದರು.

ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ (Mata Manjamma Jogati) ಮಾತನಾಡಿ, ವಿಜಯನಗರದ ಜನರು ಹಾಗೂ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಮಾತೃ ಹೃದಯಿ ಆಗಿದ್ದಾರೆ. ಈ ಒಂದು ಕಾರ್ಯಕ್ರಮ ಎರಡು ದಿನಗಳವರೆಗೆ ಇಷ್ಟೊಂದು ಅಚ್ಚುಕಟ್ಟಾಗಿ ನಡೆಯಲು ಇಲ್ಲಿನ ಜನರೇ ಕಾರಣಕರ್ತರು. ಕಲಾವಿದರು ಕೊರೋನಾ ಸಂಕಷ್ಟಕಾಲದಲ್ಲಿ ಭಾರಿ ಸಂಕಷ್ಟಅನುಭವಿಸಿದ್ದಾರೆ. ಹಾಗಾಗಿ ವೃತ್ತಿ ಕಲಾವಿದರಾಗದೇ, ಹವ್ಯಾಸಿ ಕಲಾವಿದರಾಗಬೇಕು. ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಲು ಪ್ರಶಸ್ತಿ ಪ್ರದಾನ ಮಾಡುತ್ತಿದ್ದೇವೆ ಎಂದರು.

Karnataka Politics: ಡಿಕೆಶಿ ಮನೆಗೆ ಹೋಗಬಾರದಿತ್ತು, ಈಗ ಅರಿವಾಗಿದೆ: ಆನಂದ್‌ ಸಿಂಗ್‌
 

ಜಾನಪದ ಸಾಧಕರಿಗೆ ಪ್ರಶಸ್ತಿ ಪ್ರದಾನ

ನೂತನ ವಿಜಯನಗರ ಹೊರತುಪಡಿಸಿ 30 ಜಿಲ್ಲೆಯ ಜಾನಪದ ಸಾಧಕರಿಗೆ 2021ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ, 2020ನೇ ಸಾಲಿನ ಪುಸ್ತಕ ಬಹುಮಾನವನ್ನು ಮೂವರಿಗೆ ನೀಡಲಾಯಿತು. ಇಬ್ಬರಿಗೆ ತಜ್ಞ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಾರ್ಷಿಕ ಪ್ರಶಸ್ತಿ ಪುರಸ್ಕೃತರು ಹಾಗೂ ತಜ್ಞ ಪ್ರಶಸ್ತಿ ಪುರಸ್ಕೃತರಿಗೆ ತಲಾ 25 ಸಾವಿರ ರು. ನಗದು ಮತ್ತು ಫಲಕ ವಿತರಿಸಲಾಯಿತು. ಪುಸ್ತಕ ಬಹುಮಾನಿತರಿಗೆ 50 ಸಾವಿರ ರು. ನಗದು ಮತ್ತು ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಕಾಡೆಮಿ ರಜಿಸ್ಟ್ರಾರ್‌ ನಮ್ರತಾ, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ರಂಗಪ್ಪನವರ ಮತ್ತಿತರರಿದ್ದರು.

click me!