ಬಿಗ್​ಬಾಸ್ ಮನೆಯಲ್ಲೀಗ ವಕೀಲ್ ಸಾಬ್ ಹವಾ: ಜಗದೀಶ್ ಆಟದೆದ್ರು ದೊಡ್ಮನೆ ಮನೆ ಮಂದಿ ಕಂಗಾಲು

ಬಿಗ್​ಬಾಸ್ ಮನೆಯಲ್ಲೀಗ ವಕೀಲ್ ಸಾಬ್ ಹವಾ: ಜಗದೀಶ್ ಆಟದೆದ್ರು ದೊಡ್ಮನೆ ಮನೆ ಮಂದಿ ಕಂಗಾಲು

Published : Oct 07, 2024, 11:33 AM ISTUpdated : Oct 07, 2024, 12:12 PM IST

ಬಿಗ್​ಬಾಸ್ ಮನೆಯಲ್ಲಿ ಪ್ರತಿಸಾರಿಯೂ ಒಬ್ಬರಲ್ಲ ಒಬ್ಬ ಸ್ಪರ್ಧಿಗಳು ತಮ್ಮದೇ ಹವಾ ಸೃಷ್ಟಿಸ್ತಾರೆ. ಏನಾದ್ರೊಂದು ಗಿಮಿಕ್ ಮಾಡಿ ರೇಸ್​ನಲ್ಲಿ ತಾವೇ ಗೆಲ್ಲಬೇಕು ಅಂತ ದೊಡ್ಮನೆಯಲ್ಲಿ ರಣರಂಗವನ್ನೇ ಸೃಷ್ಟಿಸ್ತಾರೆ. ಈ ಸಾರಿ ಬಿಗ್ ಬಾಸ್ ಮನೆಯಲ್ಲಿ ಇದೇ ರೀತಿ ಫೈಯರ್ ಸೃಷ್ಟಿಸಿರೋದು ಲಾಯರ್ ಜಗದೀಶ್. 

ಬಿಗ್​ಬಾಸ್ ಮನೆಯಲ್ಲಿ ಪ್ರತಿಸಾರಿಯೂ ಒಬ್ಬರಲ್ಲ ಒಬ್ಬ ಸ್ಪರ್ಧಿಗಳು ತಮ್ಮದೇ ಹವಾ ಸೃಷ್ಟಿಸ್ತಾರೆ. ಏನಾದ್ರೊಂದು ಗಿಮಿಕ್ ಮಾಡಿ ರೇಸ್​ನಲ್ಲಿ ತಾವೇ ಗೆಲ್ಲಬೇಕು ಅಂತ ದೊಡ್ಮನೆಯಲ್ಲಿ ರಣರಂಗವನ್ನೇ ಸೃಷ್ಟಿಸ್ತಾರೆ. ಈ ಸಾರಿ ಬಿಗ್ ಬಾಸ್ ಮನೆಯಲ್ಲಿ ಇದೇ ರೀತಿ ಫೈಯರ್ ಸೃಷ್ಟಿಸಿರೋದು ಲಾಯರ್ ಜಗದೀಶ್. ಬಿಗ್ ಬಾಸ್ ಮನೆಯಲ್ಲಿ ಈ ಸಾರಿ ಆರಂಭದಲ್ಲೇ ಬಿಗ್ ಹವಾ ಕ್ರಿಯೇಟ್ ಮಾಡಿರೋದು ಲಾಯರ್ ಜಗದೀಶ್. ಹೊರಗಡೆ ಕಿರಿಕ್ಕು, ಗಿಮಿಕ್ಕು ಮಾಡಿಕೊಂಡು ಸದ್ದು ಮಾಡ್ತಿದ್ದ ಇವರು ಬಿಗ್ ಬಾಸ್ ಮನೆಯಲ್ಲೂ ಅದನ್ನೇ ಮುಂದುವರೆಸಿದ್ದಾರೆ. ಇತರೇ ಸ್ಪರ್ಧಿಗಳ ಜೊತೆಗೆ ಕಾಲು ಕೆರೆದುಕೊಂಡು ಜಗಳ ಮಾಡೋ ಜಗ್ಗಿ, ಬಿಗ್ ಬಾಸ್ ಟಿಆರ್​ಪಿಯನ್ನ ಸರ್ರನೇ ಏರುವಂತೆ ಮಾಡಿದ್ದಾರೆ. ಮಾತು ಮಾತಿಗೂ ಜಗಳ ತೆಗೆಯೋ ಜಗದೀಶ್ , ಎಲ್ಲಾ ಮನೆಮಂದಿಯನ್ನೂ ಎದುರು ಹಾಕ್ಕೊಂಡಿದ್ದಾರೆ. 

ಇನ್ನೂ ಮನೆಮಂದಿ ಜೊತೆಗೆ ಜಗಳವಾಡಿದ್ದು ಸಾಲಲಿಲ್ಲ ಅಂತ ಖುದ್ದು ಬಿಗ್ ಬಾಸ್​ಗೇನೇ ಚಾಲೆಂಜ್ ಹಾಕಿದ್ದಾರೆ. ಬಿಗ್ ಬಾಸ್ ಶೋದ ಅಸಲಿಯತ್ತನ್ನ ಎಕ್ಸ್​ಪೋಸ್ ಮಾಡ್ತಿನಿ ಅಂತ ಕ್ಯಾಮರಾ ಮುಂದೆ ಎಗರಾಡಿರೋ ಜಗದೀಶ್ ಮನೆಮಂದಿಗೆಲ್ಲಾ ಶಾಕ್ ಕೊಟ್ಟಿದ್ದಾರೆ. ಜಗದೀಶ್ ಆಡೋ ರೀತಿ ನೋಡಿದವರು ಈತ ಹುಚ್ಚ ವೆಂಕಟ್, ಪ್ರಥಮ್ ರೀತಿಯೇ ಫೇಮಸ್ ಆಗೋದು ಫಿಕ್ಸ್ ಅಂತಿದ್ದಾರೆ. ಮತ್ತೊಂದಿಷ್ಟು ಜನ ಈ ವಾರವೇ ಈತ ಮನೆಯಿಂದ ಹೊರಬರ್ತಾನೆ ಅಂತ ಕಾಮೆಂಟ್ ಮಾಡ್ತಾ ಇದ್ದಾರೆ. ಪಾಸಿಟಿವ್ವೋ ನೆಗಟಿವ್ವೋ.. ಒಟ್ಟಾರೆ ಈ ಸಾರಿ ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳಿಗಿಂತ ಹೆಚ್ಚು ಹವಾ ಸೃಷ್ಟಿಸಿರೋದು ಒನ್ ಌಂಡ್ ಓನ್ಲಿ ಲಾಯರ್ ಜಗದೀಶ್. ಈ ವಕೀಲ್ ಸಾಬ್ ತನ್ನ ಕಿರಿಕ್ಕು, ಗಿಮಿಕ್ಕುಗಳಿಂದ ಬಿಗ್ ಬಾಸ್​​ ನೋಡುಗರ ನಂಬರ್ ಹೆಚ್ಚಿಸಿರೋದು ಸುಳ್ಳಲ್ಲ

04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
03:58ಬಿಗ್ ​ಬಾಸ್​ನಿಂದ ಬಿಗ್​ ಬಾಸೇ ಔಟ್.. ದೊಡ್ಮನೆಯಲ್ಲಿ ವಿಲನ್ ಟಾಸ್ಕ್‌ಗಳಿಂದ ಬೆಚ್ಚಿಬಿದ್ದ ಸ್ಪರ್ಧಿಗಳು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:12BBK 12: ಅಂಥಂಥ ಮಾತಾಡಿ ಅಶ್ವಿನಿ ಗೌಡಗೆ ಕ್ಯಾಪ್ಟನ್ಸಿ ಸಿಗದಂತೆ ಮಾಡಿದ ಗಿಲ್ಲಿ ನಟ!
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
06:04ಬಿಗ್​ಬಾಸ್ ಅಗ್ನಿ ಪರೀಕ್ಷೆ, ಬಿಗ್​ ಬಾಸ್ ಮನೆಯಲ್ಲಿ ಗಿಲ್ಲಿಯ ಪ್ರೇಮಕಾವ್ಯ..!
06:01ಗಿಲ್ಲಿ ಮೇಲೆ ಹಲ್ಲೆ ಮಾಡಿಯೂ ಬಚಾವ್ ಆದ್ರಾ ರಿಷಾ ಗೌಡ? ಕಿಚ್ಚ ಸುದೀಪ್ ಎದುರೇ ಕಿಕ್​ ಔಟ್?