Bachelor Party: 15 ವರ್ಷದ ದಿಗಂತ್‌, ಯೋಗಿ ಸ್ನೇಹಕ್ಕೆ ಬ್ಯಾಚುಲರ್ ಪಾರ್ಟಿ ಕೊಟ್ಟ ರಕ್ಷಿತ್‌..!

Bachelor Party: 15 ವರ್ಷದ ದಿಗಂತ್‌, ಯೋಗಿ ಸ್ನೇಹಕ್ಕೆ ಬ್ಯಾಚುಲರ್ ಪಾರ್ಟಿ ಕೊಟ್ಟ ರಕ್ಷಿತ್‌..!

Published : Jan 22, 2024, 08:57 AM ISTUpdated : Jan 22, 2024, 08:58 AM IST

ಬ್ಯಾಚುಲರ್ ಪಾರ್ಟಿ.. ಇದು ನಟ ದೂದ್ ಪೇಡ ದಿಗಂತ್ ಹಾಗೂ ಲೂಸ್ ಮಾದ ಯೋಗಿಯ ಸಿನಿಮಾ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರೋ ಸಿನಿಮಾ ಇದು. 
 

ರಿಯಲ್ ಲೈಫ್‌ನಲ್ಲಿ ನಟ ಯೋಗಿ(Yogi) ಹಾಗೂ ದಿಗಂತ್‌ರದ್ದು(Diganth) 15 ವರ್ಷದ ಸ್ನೇಹ. ಇವರಿಬ್ಬರ ಈ 15 ವರ್ಷದ ಸ್ನೇಹಕ್ಕೆ ಈಗ ಕಿರಿಕ್ ಪಾರ್ಟಿ ಹೀರೋ ರಕ್ಷಿತ್ ಶೆಟ್ಟಿ ಬ್ಯಾಚುಲರ್ ಪಾರ್ಟಿ(Bachelor Party) ಕೊಟ್ಟಿದ್ದಾರೆ. ‘ಕಿರಿಕ್ ಪಾರ್ಟಿ’ಯ ಬರಹಗಾರ ಅಭಿಜಿತ್ ಮಹೇಶ್ ಬ್ಯಾಚುಲರ್ ಪಾರ್ಟಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಇಬ್ಬರು ಗಳೆಯರು ಬ್ಯಾಚ್ಯೂಲರ್ ಪಾರ್ಟಿ ಮಾಡೋಕೆ ಬ್ಯಾಂಕಾಕ್‌ಗೆ ಹೋದಾಗ ಏನೆಲ್ಲಾ ಆಗುತ್ತೆ ಅನ್ನೋ ಕಥೆ ಈ ಸಿನಿಮಾದಲ್ಲಿದೆ. ಕಿರಿಕ್ ಪಾರ್ಟಿ ಸಿನಿಮಾದ ಹಾಗೆ ಬ್ಯಾಚುಲರ್ ಪಾರ್ಟಿ ಸಿನಿಮಾ ಯೂತ್ ಕಾಮಿಡಿ ಸ್ಟೋರಿಯ ಮೂವಿ. ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿ ಮೂರು ದಿನದಲ್ಲಿ 2.2 ಮಿಲಿಯನ್ ವೀಕ್ಷಣೆ ಕಂಡಿದ್ದು, ಕನ್ನಡ ಸಿನಿ ಪ್ರೇಕ್ಷಕರಲ್ಲಿ ಹೊಸ ಭರವಸೆ ಮೂಡಿಸಿದೆ. ಟ್ರೈಲರ್ನಲ್ಲೇ  ಕಾಮಿಡಿ ಕಿಕ್ ಕೊಡುತ್ತಿದ್ದು, ಸಿನಿಮಾದ ಬಹುಪಾಲು ಶೂಟಿಂಗ್ ವಿದೇಶದಲ್ಲೇ ಆಗಿದೆ. ಪರಂವಃ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಜಿ. ಎಸ್. ಗುಪ್ತ ಹಾಗೂ ರಕ್ಷಿತ್ ಶೆಟ್ಟಿ(Rakshit Shetty) ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಯೋಗಿ ದಿಗಂತ್ ಜೊತೆ ನಟ ಅಚ್ಯುತ್ ಕುಮಾರ್ ಕೂಡ ಬ್ಯಾಚುಲರ್ ಪಾರ್ಟಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಈ ಯೂತ್ ಫುಲ್ ಸಿನಿಮಾ ಜನವರಿ 26ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ.

ಇದನ್ನೂ ವೀಕ್ಷಿಸಿ:  Dhruva-Prem: ‘KD’ ಬಳಿಕ ಮತ್ತೆ ಒಂದಾಗುತ್ತೆ ಧ್ರುವ-ಪ್ರೇಮ್ ಜೋಡಿ ಯಾವ ಸಿನಿಮಾಗೆ ಗೊತ್ತಾ..?

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more