ಬೆಳ್ಳಿತೆರೆ ಮೇಲೆ ಬೆಳಗುತ್ತಿದೆ ಮತ್ತೊಂದು ದೇಸಿ ಕಥೆ! ಯೋಗರಾಜ್ ಭಟ್-ಬಿ.ಸಿ. ಪಾಟೀಲ್ 'ಗರಡಿ' ಹೇಗಿದೆ?

Nov 12, 2023, 9:12 AM IST

ಗರಡಿ ಅಂದ ಕೂಡ್ಲೆ ಇಲ್ಲಿ ಕುಸ್ತಿ ಸುತ್ತ ಕಥೆ ಸಾಗುತ್ತೆ. ಈ ದೇಸಿ ಕುಸ್ತಿ ಜೊತೆ ಪ್ಯೂರ್ ಲವ್ ಸ್ಟೋರಿ ಇದೆ. ನಾಯಕ ಯಶಸ್‌ ಸೂರ್ಯ(Yashas Surya) ಗರಡಿ ಮನೆಯಲ್ಲಿ ತೋಳು ತಟ್ಟೋದರ ಜೊತೆಗೆ ನಾಯಕಿ ಸೋನಲ್ ಮಂಥೋರೋ ಪ್ರೀತಿಯಲ್ಲೂ ಬಿಳ್ತಾರೆ. ಸೋನಲ್‌ನಲ್ಲಿ ಸಿಟಿ ಹುಡುಗಿ. ಆದ್ರೆ ಯಶಸ್ ಹಳ್ಳಿ ಹುಡುಗ. ಈ ಸಿಟಿ ಹುಡ್ಗಿ ಹಳ್ಳಿ ಹುಡುಗ ಮಧ್ಯೆ ನಡೆಯೋ ಸೀಕ್ವೆನ್ಸ್‌ಗಳು ಸಖತ್ತಾಗಿವೆ. ಕಾಲ ಕಾಲದಿಂದಲೂ ಗರಡಿ(Garadi movie) ಮನೆಯನ್ನ ನಡೆಸಿಕೊಂಡು ಬರೋ ರಾಣೆ ಕುಟುಂಬ. ರಾಣೆ ಪಾತ್ರದಲ್ಲಿ ರವಿಶಂಕರ್ ನಟಿಸಿದ್ದಾರೆ. ಆ ರಾಣೆ ಮನೆಯಲ್ಲಿ ಗರಡಿ ಪೈಲ್ವಾನ್‌ಗಳನ್ನ ಸಜ್ಜುಗೊಳಿಸುವ ಕೆಲಸ ರಂಗಪ್ಪಣ್ಣನದ್ದು. ಬಿ ಸಿ ಪಾಟೀಲ್‌(BC Patil) ಇಲ್ಲಿ ರಂಗಪ್ಪಣ್ಣ ಪಾತ್ರ ಮಾಡಿದ್ದಾರೆ. ಈ ಗರಡಿ ಮನೆಯಲ್ಲಿರುವ ನಾಯಕ ಯಶಸ್ ಸೂರ್ಯಗೆ ಕುಸ್ತಿ ಅಖಾಡಕ್ಕೆ ಇಳಿಯುವಂತಿಲ್ಲ ಅನ್ನೋ ನಿರ್ಬಂಧ ಇರುತ್ತೆ. ಆದ್ರೂ ಸೂರಿ ಹೇಗೆ ಕುಸ್ತಿ ಅಖಾಡಕ್ಕೆ ಇಳಿದು ಕುಸ್ತಿ ಮಾಡ್ತಾನೆ.? ಈ ಗರಡಿ ಪೈಲ್ವಾನ್‌ ಬದುಕಿನಲ್ಲಿ ನಾಯಕಿ ಪಪ್ಪಿ ಸೋನಲ್‌ ಹೇಗೆ ಬರ್ತಾಳೆ? ಅನ್ನೋದೆ ಗರಡಿಯ ಕಥೆ. ಗರಡಿ ಸಿನಿಮಾದ ಮತ್ತೊಂದು ಹೈಲೆಟ್ ನಟ ದರ್ಶನ್(Darshan). ಈ ಕತೆಯನ್ನ ನಟ ಯಶಸ್ ಸೂರ್ಯಗೆ ಸಿನಿಮಾ ಮಾಡಿ ಅಂತ ಯೋಗರಾಜ್ ಭಟ್ ಗೆ ಹೇಳಿದ್ದೇ ನಟ ದರ್ಶನ್. ಹೀಗಾಗಿ ಗರಡಿಯಲ್ಲಿ ದರ್ಶನ್ ಗೆಸ್ಟ್ ರೋಲ್ ಮಾಡಿದ್ದು, ಗರಡಿ ಪೋರ್ಸ್ ಹೆಚ್ಚಿಸಿದ್ದಾರೆ. ದರ್ಶನ್ ಪಾತ್ರ ಹೇಗಿದೆ ಅಂತ ನೋಡ್ಬೇಕು ಅಂದ್ರೆ ಅದಕ್ಕೆ ಗರಡಿಯನ್ನ ಥಿಯೇಟರ್ನಲ್ಲೇ ನೋಡ್ಬೇಕು.

ಇದನ್ನೂ ವೀಕ್ಷಿಸಿ:  ಅಡುಗೆ ಕುಕ್ಕರ್‌ನಲ್ಲಿ ತಯಾರಾಗುತ್ತಿತ್ತು ಮಾದಕ ವಸ್ತು: ಬೆಂಗಳೂರು ಡ್ರಗ್ ಮುಕ್ತ ನಗರವಾಗುವುದು ಯಾವಾಗ..?