ತೆರೆಮೇಲೆ KGF 2 ಹಬ್ಬ, ರಾಕಿ ಭಾಯ್ ಫ್ಯಾನ್ಸ್‌ಗೆ ಭರ್ಜರಿ ಧಮಾಕ!

ತೆರೆಮೇಲೆ KGF 2 ಹಬ್ಬ, ರಾಕಿ ಭಾಯ್ ಫ್ಯಾನ್ಸ್‌ಗೆ ಭರ್ಜರಿ ಧಮಾಕ!

Published : Apr 15, 2022, 02:50 PM ISTUpdated : Apr 15, 2022, 03:33 PM IST

ಪ್ರಶಾಂತ್ ನೀಲ್ (Prashant Neel) ನಿರ್ದೇಶನ, ಯಶ್ (Yash) ನಟನೆಯ ಕೆಜಿಎಫ್‌ - 2 (KGF 2)  ಹುಟ್ಟು ಹಾಕಿದ್ದ ನಿರೀಕ್ಷೆಯನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದೆ. ಪ್ರಶಾಂತ್ ನೀಲ್ ಈ ಬಾರಿ ಮೇಕಿಂಗ್‌ಮೇಲೆ ಹೆಚ್ಚು ನಿಗಾ ವಹಿಸಿದ್ದಾರೆ. 

ಪ್ರಶಾಂತ್ ನೀಲ್ (Prashant Neel)  ನಿರ್ದೇಶನ, ಯಶ್ (Yash) ನಟನೆಯ ಕೆಜಿಎಫ್‌ - 2 (KGF 2) ಹುಟ್ಟು ಹಾಕಿದ್ದ ನಿರೀಕ್ಷೆಯನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದೆ. ಆಕ್ಷನ್ ಧಮಾಕ, ಗುಂಡಿನ ಮೊರೆತ, ಡೈಲಾಗ್ ದರ್ಬಾರ್ ಅದಕ್ಕೆ ತಕ್ಕನಾದ ಬ್ಯಾಕ್‌ಗ್ರೌಂಡ್ ಮ್ಯೂಸಿಕ್, ಕಣ್ಣಿಗೆ ಕಂಡಿದ್ದೆಲ್ಲಾ ಕಣ್ಣರಳಿಸಿ ನೋಡುವಂತೆ ಮಾಡುವ ಅದ್ಧೂರಿ ಮೇಕಿಂಗ್, ಬಿಗ್ ಸ್ಟಾರ್ ಕಾಸ್ಟ್, ಪ್ರಶಾಂತ್ ನೀಲ್ ಕಟ್ಟಿಕೊಟ್ಟ ಸ್ಕ್ರೀನ್ ಪ್ಲೇ, ರಾಕಿಯ ಸ್ಟೈಲೀಶ್ ಮಾಸ್ ಅವತಾರ, ಅಧಿರ ಸಂಜಯ್ ದತ್ ಆರ್ಭಟ, ರಮಿಕಾ ಸೇನ್ ಆಗಿರೋ ರವೀನಾ ಟಂಟನ್ ದರ್ಬಾರ್, ಶ್ರೀನಿಧಿ ಶೆಟ್ಟಿ ಮಾಸ್ ಕ್ಯೂಟ್ನೆಸ್, ಅಷ್ಟೆ ಅಲ್ಲ ಸಿನಿಮಾದಲ್ಲಿ ಬರೋ ಪ್ರತಿಯೊಂದು ಪಾತ್ರಗಳು ಮನಸ್ಸಿನಾಳಕ್ಕೆ ಇಳಿದುಬಿಡೋ ಮಟ್ಟಕ್ಕೆ ಸಿನಿಮಾ ಕಟ್ಟಿಕೊಡಲಾಗಿದೆ.

ಪ್ರಶಾಂತ್ ನೀಲ್ ಈ ಬಾರಿ ಮೇಕಿಂಗ್‌ಮೇಲೆ ಹೆಚ್ಚು ನಿಗಾ ವಹಿಸಿದ್ದಾರೆ. ನೀಲ್ ಇಮ್ಯಾಜಿನೇಷನ್‌ಗೆ ತಕ್ಕಂತೆ ಟ್ಯಾಲೆಂಟ್ ಬಳಸಿ ಛಾಯಗ್ರಾಹಕ ಭುವನ್ ಗೌಡ ಸಿನಿಮಾ ಚಿತ್ರೀಕರಿಸಿದ್ದು, ಹೊಸದೊಂದು ಲೋಕವನ್ನೇ ಸೃಷ್ಟಿಸಿದ್ದಾರೆ. ಮತ್ತೊಂದ್ ಕಡೆ ಆರ್ಟ್ ಡೈರೆಕ್ಟರ್ ಶಿವಕುಮಾರ್ ಕೆಲಸ ಪ್ರತಿ ದೃಶ್ಯದಲ್ಲೂ ಎದ್ದು ಕಾಣುತ್ತೆ. 

ಕೆಜಿಎಫ್-2 ಸಿನಿಮಾ ಅಂತ ಬಂದಾಗ ಕತೆ ಎಷ್ಟು ಕುತೂಹಲ ಹುಟ್ಟಿಸುತ್ತೋ ಅಷ್ಟೇ ಎಕ್ಸೈಟ್ಮೆಂಟ್ ಕ್ರಿಯೆಟ್ ಮಾಡಿದ್ದು, ಸಂಜಯ್ ದತ್ ಅಧಿರ ಹಾಗು ರವೀನ ಟಂಡನ್ ರಮೀಕಾ ಸೇನ್ ಪಾತ್ರಗಳು. ಅಧಿರ ಹಾಗು ರಮೀಕಾ ಸೇನ್ ಬೆಳ್ಳಿತೆರೆ ಮೇಲೆ ಬರುತ್ತಿದ್ದಂತೆ ಎದೆಯಲ್ಲಿ ನಡುಕ ಹುಟ್ಟುತ್ತೆ. ಅಷ್ಟೊಂದು ಪವರ್ ಫುಲ್ ಆಗಿ ನಿಮ್ಮನ್ನ ರಂಜಿಸಿದ್ದಾರೆ. ವಿಜಯೇಂದ್ರ ಇಂಗಳಗಿ ಪಾತ್ರದಲ್ಲಿ ಪ್ರಕಾಶ್ ರಾಜ್ ಇಡೀ ಸಿನಿಮಾವನ್ನುಅದ್ಭುತವಾಗಿ ನಿರೂಪಿಸಿದ್ದಾರೆ. ಇನ್ನು ತೆಲುಗು ನಟ ರಾವ್ ರಮೇಶ್‌, ಅಚ್ಯುತ್‌ ಕುಮಾರ್, ಅಯ್ಯಪ್ಪ ಪಿ. ಶರ್ಮಾ, ಮಾಳವಿಕಾ ಅವಿನಾಶ್, ಈಶ್ವರಿ ರಾವ್, ತಾರಕ್ ಪೊನ್ನಪ್ಪ, ವಸಿಷ್ಠ ಸಿಂಹ, ತಮಗೆ ಸಿಕ್ಕ ಪಾತ್ರಗಳಿಂದ ಮನಸ್ಸಿನಲ್ಲಿ ಉಳಿಯುತ್ತಾರೆ. 

 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more