ಯಶ್‌- ದಳಪತಿ ಮಧ್ಯೆ ಭರ್ಜರಿ ಟಗಾಫರ್, ಬೀಸ್ಟ್‌ಗೆ ಟಕ್ಕರ್ ಕೊಡುತ್ತಾ ಕೆಜಿಎಫ್-2.?

ಯಶ್‌- ದಳಪತಿ ಮಧ್ಯೆ ಭರ್ಜರಿ ಟಗಾಫರ್, ಬೀಸ್ಟ್‌ಗೆ ಟಕ್ಕರ್ ಕೊಡುತ್ತಾ ಕೆಜಿಎಫ್-2.?

Published : Apr 04, 2022, 02:14 PM IST

ಇಡೀ ದೇಶದ ಸಿನಿ ಪ್ರೇಕ್ಷಕರು ಈಗ ಕೆಜಿಎಫ್-2 ಜ್ವರದಲ್ಲಿದ್ದಾರೆ. ಏಪ್ರಿಲ್ 14 ಬೇಗ ಬಂದು ಬಿಡ್ಲಪ್ಪಾ ಅಂತ ಕಾಯ್ತಿದ್ದಾರೆ. ಆದ್ರೆ ಅದಕ್ಕೂ ಒಂದು ದಿನ ಅಂದ್ರೆ ಏಪ್ರಿಲ್ 13ಕ್ಕೇ ಬೆಳ್ಳಿತೆರೆ ಮೇಲೆ ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್ ನಟಿಸಿರೋ ಬೀಸ್ಟ್ ಸಿನಿಮಾ ಬರ್ತಿದೆ. 

ಇಡೀ ದೇಶದ ಸಿನಿ ಪ್ರೇಕ್ಷಕರು ಈಗ ಕೆಜಿಎಫ್-2 ಜ್ವರದಲ್ಲಿದ್ದಾರೆ. ಏಪ್ರಿಲ್ 14 ಬೇಗ ಬಂದು ಬಿಡ್ಲಪ್ಪಾ ಅಂತ ಕಾಯ್ತಿದ್ದಾರೆ. ಆದ್ರೆ ಅದಕ್ಕೂ ಒಂದು ದಿನ ಅಂದ್ರೆ ಏಪ್ರಿಲ್ 13ಕ್ಕೇ ಬೆಳ್ಳಿತೆರೆ ಮೇಲೆ ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್ ನಟಿಸಿರೋ ಬೀಸ್ಟ್ ಸಿನಿಮಾ ಬರ್ತಿದೆ. ಹೀಗಾಗಿ ಸಿನಿ ಮಾರ್ಕೆಟ್‌ನಲ್ಲಿ ರಾಕಿಯ ಕೆಜಿಎಫ್-2 ಹಾಗೂ ವಿಜಯ್ರ ಬೀಸ್ಟ್ ಸಿನಿಮಾ ಬಗ್ಗೆ ಚರ್ಚೆ ಶುರುವಾಗಿದ್ದು, ಇಬ್ಬರ ಮಧ್ಯೆ ಟಗಾಫರ್ ಏರ್ಪಟ್ಟಿದೆ. ಇದೀಗ ಕೆಜಿಎಫ್-2 ಟ್ರೈಲರ್ ಬಂದ ಮೇಲೆ ಬೀಸ್ಟ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಈ ಎರಡು ಸಿನಿಮಾಗಳ ಮಧ್ಯೆ 24 ಗಂಟೆಯಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಟ್ರೈಲರ್ ಯಾವ ಸಿನಿಮಾದ್ದು ಅನ್ನೋ ಲೆಕ್ಕಾಚಾರ ಶುರುವಾಗಿದೆ. 

ದಳಪತಿ ವಿಜಯ್ ಬೀಸ್ಟ್ ಚಿತ್ರಕ್ಕೆ ಸೌತ್‌ನಲ್ಲಿ ದೊಡ್ಡ ಮಾರ್ಕೆಟ್ ಇದೆ.  ಹೀಗಾಗಿ ಬಾಕ್ಸಾಫೀಸ್ನಲ್ಲಿ ಯಶ್ ಹಾಗು ವಿಜಯ್ ಮಧ್ಯೆ ಕ್ಲಾಶ್ ಆಗೋದಂತೂ ಸತ್ಯ. ಆದ್ರೆ ಯಶ್ ಮುಂದೆ ವಿಜಯ್ ಎದ್ದು ನಿಲ್ಲೋದು ಕಷ್ಟಕ್ಕೇ ಕಷ್ಟ ಅಂತ ಗೊತ್ತಾಗ್ತಿದೆ. ಯಾಕಂದ್ರೆ ಕೆಜಿಎಫ್-2 ಟ್ರೈಲರ್ ಬಂದಾಗ 24 ಗಂಟೆಯಲ್ಲಿ 105 ಮಿಲಿಯನ್ ವೀಕ್ಷಣೆ ಕಂಡಿತ್ತು. ಆದ್ರೆ ದಳಪತಿ ವಿಜಯ್ ಬೀಸ್ಟ್ ಟ್ರೈಲರ್ 24 ಗಂಟೆಯಲ್ಲಿ ಬರೀ 30 ಮಿಲಿಯನ್ ವೀಕ್ಷಣೆ ಕಂಡಿದೆ. ಈ ಆಧಾರದ ಮೇಲೆ ರಾಕಿಂಗ್ ಸ್ಟಾರ್ ಮುಂದೆ ದಳಪತಿ ಆಟ ನಡೆಯೊದಿಲ್ಲಾ ಅಂತ ಬಾಕ್ಸಾಫೀಸ್ ಪಂಡಿತರು ಹೇಳ್ತಿದ್ದಾರೆ. ಯಶ್ ಕೆಜಿಎಫ್-2 ಪ್ರಚಾರಕ್ಕಾಗಾಗಿ ದೇಶಾದ್ಯಂತ ಸುತ್ತುತ್ತಿದ್ದಾರೆ. ಆದ್ರೆ ದಳಪತಿ ವಿಜಯ್ ಬೀಸ್ಟ್ ಪ್ರಚಾರದಲ್ಲಿ ಅಷ್ಟಾಗಿ ಕಾಣಿಸುತ್ತಿಲ್ಲ. ಕೆಜಿಎಫ್-2 ಐದು ಭಾಷೆಯಲ್ಲಿ ರಿಲೀಸ್ ಆಗುತ್ತಿದ್ರೆ, ಬೀಸ್ಟ್ ಕೂಡ ಐದು ಭಾಷೆಯಲ್ಲಿ ತೆರೆಗೆ ಬರ್ತಿದೆ.

 

04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
Read more