
ಯಶ್ ಕಳೆದ ಹಲವು ತಿಂಗಳಿಂದ ಮುಂಬೈನಲ್ಲಿ ಸತತವಾಗಿ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಮೊದಲು ಮುಂಬೈನ ಮಡ್ ಐಲ್ಯಾಂಡ್ನಲ್ಲಿ ಹಾಕಿದ ಸೆಟ್ನಲ್ಲಿ ಟಾಕ್ಸಿಕ್ ಶೂಟಿಂಗ್ ನಡೆದಿತ್ತು.
ರಾಕಿಂಗ್ ಸ್ಟಾರ್ ಯಶ್ ಕಳೆದ ಹಲವು ತಿಂಗಳುಗಳಿಂದ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. ಒಂದು ಕಡೆ ಟಾಕ್ಸಿಕ್ ಮತ್ತೊಂದು ಕಡೆಗೆ ರಾಮಾಯಣ ಚಿತ್ರೀಕರಣ ಭರದಿಂದ ನಡೀತಾ ಇದೆ. ಈ ಸತತ ಹೆಕ್ಟಿಕ್ ಚಿತ್ರಿಕರಣ ನಡುವೆ ಬಿಡುವು ಮಾಡಿಕೊಂಡು ಯಶ್ ಈಗ ವಿದೇಶ ಯಾತ್ರೆಗೆ ಹೊರಟಿದ್ದಾರೆ. ರಾಕಿ ಅಡ್ಡದ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿವೆ ನೋಡಿ. ರಾಕಿಂಗ್ ಸ್ಟಾರ್ ಯಶ್ ಮುಂಬೈ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸದಾಗಿ ಖರೀದಿ ಮಾಡಿದ ಕಾರಿನಲ್ಲಿ ಥೇಟ್ ರಾಕಿಭಾಯ್ ತರಹ ಮುಂಬೈಗೆ ಬಂದಿಳಿದ್ದಾರೆ. ಕಳೆದ ಹಲವು ತಿಂಗಳಿಂದ ಮುಂಬೈನಲ್ಲೇ ಇದ್ದ ಯಶ್, ಅಲ್ಲಿಂದ ನೇರವಾಗಿ ಅಮೇರಿಕಕ್ಕೆ ಹೊರಟಿದ್ದಾರೆ. ಅಸಲಿಗೆ ತಮ್ಮ ಫ್ಯಾಮಿಲಿ ಜೊತೆಗೆ ವೆಕೇಶನ್ನ ಪ್ಲಾನ್ ಮಾಡಿರೋ ಯಶ್ ಒಂದು ಸಣ್ಣ ವಿರಾಮ ತೆಗೆದುಕೊಂಡಿದ್ದಾರೆ.
ಯಶ್ ಪಕ್ಕಾ ಫ್ಯಾಮಿಲಿ ಮ್ಯಾನ್ ಅನ್ನೋದು ಗೊತ್ತೇ ಇದೆ. ಪ್ರತಿ ಹಬ್ಬ, ಸಮಾರಂಭ, ಬರ್ತ್ಡೇ ಎಲ್ಲವನ್ನೂ ಕುಟುಂಬದ ಜೊತೆಗೆ ಸೆಲೆಬ್ರೇಟ್ ಮಾಡ್ತಾರೆ. ವರ್ಷಕ್ಕೊಮ್ಮೆ ಫ್ಯಾಮಿಲಿ ಜೊತೆಗೆ ದೇಶ - ವಿದೇಶದ ಸುಂದರ ತಾಣಗಳಿಗೆ ಹೋಗಿ ವೆಕೇಶನ್ ಎಂಜಾಯ್ ಮಾಡ್ತಾರೆ. ಯಶ್ ಕಳೆದ ಹಲವು ತಿಂಗಳಿಂದ ಮುಂಬೈನಲ್ಲಿ ಸತತವಾಗಿ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಮೊದಲು ಮುಂಬೈನ ಮಡ್ ಐಲ್ಯಾಂಡ್ನಲ್ಲಿ ಹಾಕಿದ ಸೆಟ್ನಲ್ಲಿ ಟಾಕ್ಸಿಕ್ ಶೂಟಿಂಗ್ ನಡೆದಿತ್ತು. ಆ ಬಳಿಕ ರಾಮಾಯಣ ಮೂವಿಗೆ ಯಶ್ ಸತತ ಡೇಟ್ಸ್ ಕೊಟ್ಟಿದ್ರು. ಯಶ್ ರಾವಣನಾಗಿ ನಟಿಸ್ತಾ ಇರೋ ಬಹುಕೋಟಿ ವೆಚ್ಚದ ಮೆಗಾ ಮೂವಿ ರಾಮಾಯಣ ಮೂವಿಯ ಮೊದಲ ಗ್ಲಿಂಪ್ಸ್ ಇದೇ ಜುಲೈ 3ಕ್ಕೆ ರಿಲೀಸ್ ಆಗ್ತಾ ಇದೆ.
ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ನಟಿಸ್ತಾ ಇರೋ ಈ ಸಿನಿಮಾ ಬಗ್ಗೆ ಇಡೀ ಜಗತ್ತೇ ಕುತೂಹಲದಿಂದ ಕಾಯ್ತಾ ಇದೆ. ಆ ಕುತೂಹಲಕ್ಕೆ ಫಸ್ಟ್ ಗ್ಲಿಂಪ್ಸ್ ಮೂಲಕ ಉತ್ತರ ಕೊಡಲಿದೆ ರಾಮಾಯಣ ಟೀಂ. ಯಶ್ ಈ ಸಿನಿಮಾದ ನಟನಷ್ಟೇ ಅಲ್ಲ ಸಹನಿರ್ಮಾಪಕ ಕೂಡ ಹೌದು. ಸದ್ಯ ಫಸ್ಟ್ ಗ್ಲಿಂಪ್ಸ್ ರೆಡಿ ಮಾಡಿ ರಿಲೀಸ್ಗೆ ಸಜ್ಜು ಮಾಡಿ, ಯಶ್ ತಾವು ವಿದೇಶಕ್ಕೆ ಹಾರಿದ್ದಾರೆ. ಇನ್ನೂ ರಾಕಿಂಗ್ ಸ್ಟಾರ್ ನಟನೆ ನಿರ್ಮಾಣದ ಟಾಕ್ಸಿಕ್ ಸಿನಿಮಾ ಮಾರ್ಚ್ 19 2026ಕ್ಕೆ ರಿಲೀಸ್ ಆಗಲಿದೆ. ಈ ಚಿತ್ರದ ಕೆಲಸಗಳು ಕೂಡ ಭರದಿಂದ ನಡೀತಾ ಇವೆ. ರಾಮಾಯಣ ಪಾರ್ಟ್-1 2026ರ ದೀಪಾವಳಿಗೆ ಬರಲಿದೆ. ಅಲ್ಲಿಗೆ ಮುಂದಿನ ವರ್ಷ ಡಬಲ್ ಗಿಫ್ಟ್ ಕೊಡಲಿದ್ದಾರೆ ರಾಕಿಂಗ್ ಸ್ಟಾರ್.