ಕಿಟ್ಟು ಪುಟ್ಟು To ಆಪ್ತಮಿತ್ರ.. ವಿಷ್ಣುವರ್ಧನ್-ದ್ವಾರಕೀಶ್ ಸ್ನೇಹದಲ್ಲಿ ಬಿರುಕು ಮೂಡಲು ಅದೊಂದೇ ಕಾರಣ!

ಕಿಟ್ಟು ಪುಟ್ಟು To ಆಪ್ತಮಿತ್ರ.. ವಿಷ್ಣುವರ್ಧನ್-ದ್ವಾರಕೀಶ್ ಸ್ನೇಹದಲ್ಲಿ ಬಿರುಕು ಮೂಡಲು ಅದೊಂದೇ ಕಾರಣ!

Published : Apr 17, 2024, 09:26 AM ISTUpdated : Apr 17, 2024, 09:27 AM IST

ನಿರ್ಮಾಣ ಮಾಡಿದ್ದು 53.. 14 ಸಿನಿಮಾಗಳಲ್ಲಿ ವಿಷ್ಣುವರ್ಧನ್..! ಕಿಟ್ಟುಪುಟ್ಟ to ಆಪ್ತಮಿತ್ರ.. ಹೇಗಿತ್ತು ಆಪ್ತಮಿತ್ರರ ಬಾಂಧವ್ಯ..? ಬಿರುಕು ಮೂಡಿದ್ದಾದರೂ ಏಕೆ..? ದೂರ ಮಾಡಲು ಎಂದೂ ಆಗಲ್ಲ.. ಎನ್ನುತ್ತಿದ್ದವರ ಸ್ನೇಹದ ಕಥೆ..!

ನಿರ್ಮಾಣ ಮಾಡಿದ್ದು 53.. 14 ಸಿನಿಮಾಗಳಲ್ಲಿ ವಿಷ್ಣುವರ್ಧನ್..! ಕಿಟ್ಟುಪುಟ್ಟ to ಆಪ್ತಮಿತ್ರ.. ಹೇಗಿತ್ತು ಆಪ್ತಮಿತ್ರರ ಬಾಂಧವ್ಯ..? ಬಿರುಕು ಮೂಡಿದ್ದಾದರೂ ಏಕೆ..? ದೂರ ಮಾಡಲು ಎಂದೂ ಆಗಲ್ಲ.. ಎನ್ನುತ್ತಿದ್ದವರ ಸ್ನೇಹದ ಕಥೆ..! ಇದೇ ಈ ಕ್ಷಣದ ಎಪಿಸೋಡ್ ಆಪ್ತಮಿತ್ರರು..! ಕನ್ನಡದ ಕುಳ್ಳ, ಸ್ಯಾಂಡಲ್‌ವುಡ್‌ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್ ಅವರು ಇಂದು ನಮ್ಮನ್ನೆಲ್ಲ ಅಗಲಿದ್ದಾರೆ.. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದ್ವಾರಕೀಶ್ ಅವ್ರು ತಮ್ಮ ಮನೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.. ನಟರಾಗಿ, ನಿರ್ಮಾಪಕರಾಗಿ ಹಲವಾರು ದಶಕಗಳ ಕಾಲ ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದರು. ಕನ್ನಡ ಸಿನಿಮಾ ರಂಗದಲ್ಲಿ ಕಳ್ಳ ಕುಳ್ಳ ಎಂದು ಪ್ರಖ್ಯಾತಿ ಪಡೆದಿದ್ದಂತಹ ಡಾಕ್ಟರ್ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಸ್ನೇಹ ಎಷ್ಟರ ಮಟ್ಟಿಗೆ ಬಲವಾಗಿತ್ತು ಎಂಬುದು ನಮ್ಮೆಲ್ಲರಿಗೂ ಗೊತ್ತೇ ಇದೆ. 

ವಿಷ್ಣುವರ್ಧನ್ ದ್ವಾರಕೀಶ್ ಜೊತೆ ಬಹಳ ಮಧುರವಾದ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. ಹೀಗಿರುವಾಗ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಅವರ ಸ್ನೇಹದಲ್ಲಿ ಬಿರುಕು ಮೂಡಿತ್ತು.. ಹಾಗಾದ್ರೆ ವಿಷ್ಣು ದ್ವಾರಕೀಶ್ ನಡುವಿನ ಬಾಂಧವ್ಯ ಹೇಗಿತ್ತು..? ಆಪ್ತಮಿತ್ರ ನಂತರ ದ್ವಾರಕೀಶ್ ವಿಷ್ಣು ಜೊತೆ ಸಿನಿಮಾ ಮಾಡಲೇ ಇಲ್ಲ.. ಆದ್ರೆ ವಿಷ್ಣು ಜೊತೆ ಇನ್ನೂ ಸಿನಿಮಾ ಮಾಡ್ಬೇಕಿತ್ತು ಅಂತ ದ್ವಾರಕೀಶ್ ಹೇಳ್ಕೊಂಡಿದ್ರು. ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ಅವ್ರ ಸ್ನೇಹ ಸಂಭಂದ ತುಂಬಾ ಚೆನ್ನಾಗಿತ್ತು.. ಈ ಜೋಡಿ ಮಾಡಿದ ಸಿನಿಮಾಗಳು ಸೂಪರ್ ಹಿಟ್ ಆಗ್ತಿತ್ತು.. ಆದ್ರೆ ಇಬ್ಬರ ಮಧ್ಯೆ ಬಿರುಕುಂಟಾಗಿ ನಂತರ ಇವ್ರಿಬ್ಬರು ಒಂದಾಗಿದ್ದು 5 ವರ್ಷಗಳ ಬಳಿಕ. ದ್ವಾರಕೀಶ್ ಅವ್ರು ನಿರ್ಮಾಣ ಮಾಡಿದ 53 ಸಿನಿಮಾಗಳ ಪೈಕಿ 14 ಸಿನಿಮಾಗಳಲ್ಲಿ ವಿಷ್ಣುವರ್ಧನ್ ನಟಿಸಿದ್ದಾರೆ.. ಅವುಗಳಲ್ಲಿ ಬಹುತೇಕ ಸಿನಿಮಾಗಳು ಈ ಆಪ್ತಮಿತ್ರರಿಗೆ ಸಕ್ಸಸ್ ತಂದು ಕೊಟ್ಟಿವೆ.

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
Read more