ಉಪ್ಪಿಯ 'ಯುಐ' ನೋಡಿದ ಪ್ರೇಕ್ಷಕರ ರಿಯಾಕ್ಷನ್ ಏನು? ಭಾರೀ ಟ್ರೆಂಡ್ ಆಗ್ತಿದೆ ಯಾಕೆ?

Dec 21, 2024, 9:20 PM IST

ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ (Upendra) ಅವರು ಯುಐ (UI) ಸಿನಿಮಾ ಮೂಲಕ ಸದ್ಯ ತುಂಬಾ ಟ್ರೆಂಡಿಂಗ್‌ನಲ್ಲಿ ಇರೋದು ಗೊತ್ತೇ ಇದೆ. ಈ ಯುಐ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ ಅಂತ ಹೇಳೋ ಹಾಗಿಲ್ಲ. ಏಕೆಂದರೆ, ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂಬ ಎರಡು ಅಭಿಪ್ರಾಯ ಬಂದರೆ ಅದಕ್ಕೆ ನಾವು ಮಿಶ್ರ ಪ್ರತಿಕ್ರಿಯೆ ಎನ್ನಬಹುದು. ಆದರೆ, ಇಲ್ಲಿ, ಕೆಲವೊಬ್ಬರು ಸೂಪರ್ ಆಗಿದೆ, ಹಿಂದೆ ಇಂಥ ಸಿನಿಮಾ ಬಂದಿರಲಿಲ್ಲ, ತುಂಬಾ ಚೆನ್ನಾಗಿದೆ ಎನ್ನುತ್ತಿದ್ದರೆ ಕೆಲವರು 'ಅರ್ಥ ಆಗುತ್ತಿಲ್ಲ' ಎನ್ನುತ್ತಿದ್ದಾರೆ. ಹೀಗಿದ್ದಾಗ ಏನು ಹೇಳೋದು?

ಈ ಯುಐ ಸಿನಿಮಾ ನೋಡಿ ತಲೆ ಕೆಡಿಸಿಕೊಂಡು ಬಹಳಷ್ಟು ಜನರು ರಿವ್ಯೂ ಮಾಡುತ್ತಿದ್ದಾರೆ. ಕಥೆಯ ಗುಟ್ಟು ಬಿಟ್ಟುಕೊಡದೇ ಸಿನಿಮಾ ರಿವ್ಯೂ ಮಾಡಬೇಕಾಗಿರುವ ಕಾರಣಕ್ಕೆ ಅವರೆಲ್ಲರೂ ಕೂಡ ಸಾಕಷ್ಟು ಬುದ್ಧಿವಂತಿಕೆ ತೋರಿಸಬೇಕಿದೆ. ಕಾರಣ, ಸಿನಿಮಾವನ್ನು ಸರಿಯಾಗಿ ವಿಮರ್ಶೆ ಮಾಡಿಬಿಟ್ಟರೆ ಇದೂ ಒಂಥರಾ ಫೈರಸಿಯೇ ಆಗುತ್ತದೆ. ಹೀಗಾಗಿ ಸಿನಿಮಾ ಕಥೆಯ ಸೀಕ್ರೆಟ್ ಸಂಪೂರ್ಣ ಬಿಟ್ಟುಕೊಡದೇ ಅದೆಷ್ಟು ಹೇಳಲು ಸಾಧ್ಯವೋ ಅಷ್ಟನ್ನು ಹೇಳುತ್ತಿದ್ದಾರೆ ಮಾಧ್ಯಮಗಳು ಹಾಗೂ ಸೋಷಿಯಲ್ ಮಾಧ್ಯಮಗಳು. 

ಆದರೆ, ಯುಐ ಸಿನಿಮಾ ನೋಡಿದ ಕನ್ನಡದ ಪ್ರೇಕ್ಷಕ ಪ್ರಭುಗಳು ಅದೇನು ಹೇಳುತ್ತಿದ್ದಾರೆ? ಆ ಬಗ್ಗೆ ಇಲ್ಲಿದೆ ಮಾಹಿತಿ, ವಿಡಿಯೋ ನೋಡಿ..