ಸಾಹಸಸಿಂಹನ ಸ್ಮಾರಕ ನಿರ್ಮಾಣಕ್ಕಾಗಿ ಕೂಗು..! ಸರ್ಕಾರಕ್ಕೆ ಗಡುವು ಕೊಟ್ಟ ಡಾ.ವಿಷ್ಣು ಸೇನಾ ಸಮಿತಿ..!

ಸಾಹಸಸಿಂಹನ ಸ್ಮಾರಕ ನಿರ್ಮಾಣಕ್ಕಾಗಿ ಕೂಗು..! ಸರ್ಕಾರಕ್ಕೆ ಗಡುವು ಕೊಟ್ಟ ಡಾ.ವಿಷ್ಣು ಸೇನಾ ಸಮಿತಿ..!

Published : Dec 18, 2023, 02:47 PM IST

ಅಂತ್ಯವಾಗುತ್ತಾ ಸಾಹಸಸಿಂಹನ ವನವಾಸ..?
ಸ್ಮಾರಕ ನಿರ್ಮಾಣಕ್ಕೆ ಸರ್ಕಾರದ ಮೇಲೆ ಒತ್ತಡ..!
ಸಾಗರೋಪಾದಿಯಲ್ಲಿ ಬಂದ ದಾದಾ ಫ್ಯಾನ್ಸ್..!

ಸಾಹಸ ಸಿಂಹ , ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಅಂದ್ರೆ ಕನ್ನಡ ಸಿನಿ ರಂಗ ಇರುವ ತನಕ ಮರೆಯಲಾಗದ ಹೆಸರು. ಸ್ಯಾಂಡಲ್‌ವುಡ್‌(Sandalwood) ಕಂಡ ಮೇರು ನಟರಲ್ಲಿ ವಿಷ್ಣು ದಾದಾ ಕೂಡ ಒಬ್ಬರು. ಆದ್ರೆ ಒಂದಲ್ಲ ಎರಡಲ್ಲಾ, ಹದಿನಾಲ್ಕು ವರ್ಷಗಳಿಂದ ಕೂಡ ಅವರ ಅಂತ್ಯಕ್ರಿಯೆ ನಡೆದ ಜಾಗದಲ್ಲಿ ಸ್ಮಾರಕ ನಿರ್ಮಾಣ ಆಗಬೇಕೆಂದು ಹೋರಾಟ ನಡೀತಾನೆ ಇದೆ. ಇಂದು ಆ ಹೋರಾಟ ಇನ್ನೊಂದು ಹಂತವನ್ನ ತಲುಪಿದೆ. ಸಾಹಸಸಿಂಹ ವಿಷ್ಣುವರ್ಧನ್(Vishnuvardhan). ಕನ್ನಡ ಸಿನಿ ಜಗತ್ತಿನ ಆಸ್ತಿ. ಸಿನಿಪ್ರೇಮಿಗಳ ಆರಾಧ್ಯ ದೈವ. ಕನ್ನಡಿಗರು ಎಂದೂ ಮರೆಯದಂತ ಸಿನಿಮಾಗಳನ್ನ ಕೊಟ್ಟ ಅಭಿನಯ ಭಾರ್ಗವ. ವಿಷ್ಣುವರ್ಧನ್ ಅವರು ಸಿನಿ ದುನಿಯಾದಲ್ಲಿ ದೊಡ್ಡ ಹೆಸರನ್ನ ಮಾಡಿದವರು. 1950 ಸೆ.18 ರಂದು ಜನಿಸಿದ ವಿಷ್ಣುದಾದಾ 2009 ಡಿಸೆಂಬರ್ 30ರಂದು ಇಹಲೋಕ ತ್ಯಜಿಸ್ತಾರೆ. ವಿಷ್ಣುವರ್ಧನ್ ಅವರ ಪಾರ್ಥೀವ ಶರೀರವನ್ನ ಅಭಿಮಾನ್ ಸ್ಟುಡಿಯೋದಲ್ಲಿ(Abhiman Studio) ಅಂತ್ಯಕ್ರಿಯೆಯನ್ನೂ ಮಾಡಲಾಗುತ್ತೆ. ಅಭಿಮಾನ್ ಸ್ಟುಡಿಯೋ ಅಂದ್ರೆ ವಿಷ್ಣು ಅಭಿಮಾನಿಗಳಿಗೆ ಒಂದು ಭಾವನಾತ್ಮಕ ನಂಟು ಇರೋ ಜಾಗ. ಅಲ್ಲಿಯೇ ನೆಚ್ಚಿನ ನಟ ಪಂಚಭೂತಗಳಲ್ಲಿ ಲೀನವಾಗಿದ್ದು. ಹೀಗಾಗಿ ಅಂದಿನಿಂದಲೂ ಕೂಡ ಸ್ಮಾರಕ ನಿರ್ಮಾಣ ಆಗಬೇಕು ಅನ್ನೋ ಹೋರಾಟ ನಡೀತಾನೆ ಇದೆ. ಆ ಹೋರಾಟಕ್ಕೆ ಈಗ 14 ವರ್ಷದ ಪ್ರಾಯ. ಆದ್ರೆ ಫಲಿತಾಂಶ ಮಾತ್ರ ಶೂನ್ಯ ಅನ್ನೊದು ನೋವಿನ ವಿಚಾರವಾಗಿದೆ.

ಇದನ್ನೂ ವೀಕ್ಷಿಸಿ:  ಕಂತೆ ಕಂತೆ ದುಡ್ಡೆಲ್ಲಾ ಯಾರ ಸ್ವತ್ತು..? ಹೇಗೆ ಬಂತು..? ಆ ದುಡ್ಡಿನ ಸಾಮ್ರಾಜ್ಯ ಕಟ್ಟಿದ್ದು ಹೇಗೆ ಧೀರಜ್ ಸಾಹು..?

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!