ದರ್ಶನ್ ಭೇಟಿಗೆ ಎರಡೂವರೇ ಗಂಟೆ ಕಾದ ಪತ್ನಿ! ನಟನ ವಿರುದ್ದ ನಿಂತುಬಿಟ್ರಾ ಜೈಲು ಅಧಿಕಾರಿಗಳು?

ದರ್ಶನ್ ಭೇಟಿಗೆ ಎರಡೂವರೇ ಗಂಟೆ ಕಾದ ಪತ್ನಿ! ನಟನ ವಿರುದ್ದ ನಿಂತುಬಿಟ್ರಾ ಜೈಲು ಅಧಿಕಾರಿಗಳು?

Published : Oct 13, 2025, 12:22 PM ISTUpdated : Oct 13, 2025, 12:23 PM IST

ನೀವು ಅದೆಷ್ಟೋ ಸಿನಿಮಾಗಳಲ್ಲಿ ಕೈದಿಗಳನ್ನ ಅವರ ಸಂಬಂಧಿಗಳು ಭೇಟಿ ಮಾಡೋ ದೃಶ್ಯಗಳನ್ನ ನೋಡಿರ್ತೀರಿ. ಜಾಲರಿಯ ಅತ್ತ ಕಡೆ ಕಡೆಗೆ ಕೈದಿ ಇದ್ರೆ ಇತ್ತ ಕಡೆಗೆ ನಿಂತುಕೊಂಡು ಸಂಬಂಧಿಗಳು ಮಾತನಾಡಬೇಕು. ಇಬ್ಬರ ನಡುವೆ ಕಬ್ಬಿಣದ ಪಂಜರ.. ಹತ್ತಿರವಿದ್ರೂ ಮೈಲುಗಳಷ್ಟು ಅಂತರ.

ನಟ ದರ್ಶನ್ (Darshan Thoogudeepa) ತನಗೆ ಜೈಲಿನಲ್ಲಿ ಸೂಕ್ತ ಸೌಲಭ್ಯ ಕೊಡ್ತಾ ಇಲ್ಲ ಅಂತ ಜೈಲು ಅಧಿಕಾರಿಗಳ ಮೇಲೆ ಪದೇ ಪದೇ ದೂರು ಕೊಟ್ಟಿರೋದು ಗೊತ್ತೇ ಇದೆ. ಮತ್ತೆ ಮತ್ತೆ ಕೋರ್ಟ್​ಗೆ ಹೋಗಿ ತಲೆನೋವು ತರ್ತಾ ಇರೋ ದಾಸನಿಗೆ ಜೈಲರ್ಸ್​ ಕೂಡ ಪಾಠ ಕಲಿಸೋದಕ್ಕೆ ನಿರ್ಧರಿಸಿದಂತಿದೆ. ಮೊನ್ನೆ ದಾಸನ ಭೇಟಿ ಹೋದ ಪತ್ನಿ ವಿಜಯಲಕ್ಷ್ಮೀ  ಬರೊಬ್ಬರಿ ಎರಡೂವರೆ ಗಂಟೆ ಸರತಿಯಲ್ಲಿ ನಿಂದು ಕಾದಿದ್ದಾರೆ. ದರ್ಶನ್​​ಗೆ ಹಿಂದೆ ಕೊಡ್ತಿದ್ದ ಎಲ್ಲಾ ವಿಐಪಿ ಟ್ರೀಟ್​ಮೆಂಟ್ ಕಟ್ ಮಾಡಿದ್ದು, ಬಿಗ್ ಶಾಕ್ ಕೊಟ್ಟಿದ್ದಾರೆ.

ಯೆಸ್ ದರ್ಶನ್​ನ ಭೇಟಿ ಮಾಡ್ಲಿಕ್ಕೆ ಹೋಗಿದ್ದ ವಿಜಯಲಕ್ಷ್ಮೀ ಪತಿಯ ಭೇಟಿಗೆ ಪರಪ್ಪನ ಅಗ್ರಹಾರದಲ್ಲಿ ಬರೊಬ್ಬರಿ ಎರಡೂವರೇ ಗಂಟೆ ಕಾದಿದ್ದಾರೆ. ಸಾಮಾನ್ಯವಾಗಿ ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಸಂಖ್ಯೆ ಹೆಚ್ಚು. 2200 ಕೈದಿಗಳು ಹಿಡಿಯಬಲ್ಲ ಈ ಜೈಲಿನಲ್ಲಿ 5000ಕ್ಕೂ ಅಧಿಕ ಕೈದಿಗಳು ಇದ್ದಾರೆ. ಸಹಜವಾಗೇ ಭೇಟಿಗೆ ಬರುವವರು ಗಂಟೆಗಟ್ಟಳೇ ಕಾಯಬೇಕಾಗುತ್ತೆ.

ಇಷ್ಟು ದಿನ ದಾಸನಿಗೆ ಒಂದು ರೀತಿ ವಿಐಪಿ ಟ್ರೀಟ್​ಮೆಂಟ್ ಇರ್ತಾ ಇತ್ತು. ಭೇಟಿಗೆ ಬಂದವರನ್ನ ಪ್ರತ್ಯೇಕ ಕೋಣೆಯಲ್ಲಿ ಕೂರಿಸಿ ಅಲ್ಲೇ ದರ್ಶನ್​ನ ಕರೆದು ಭೇಟಿ ಮಾಡಿಸ್ತಾ ಇದ್ರಂತೆ. ಆದ್ರೆ ಈ ಸಾರಿ ಮಾತ್ರ ವಿಜಯಲಕ್ಷ್ಮೀಯನ್ನ  ಸಾಮಾನ್ಯ ಕೈದಿಗಳ ಸಂಬಂಧಿಕರ ಸಾಲಿನಲ್ಲೇ ನಿಲ್ಲಿಸಿ ಗಂಟೆಗಟ್ಟಲೆ ಕಾಯಿಸಿದ್ದಾರೆ. ಜೊತೆಗೆ ಗ್ಯಾಲರಿನಲ್ಲೇ ನಿಂತು ಮಾತನಾಡುವಂತೆ ಸೂಚಿಸಿದ್ದಾರೆ.

ನೀವು ಅದೆಷ್ಟೋ ಸಿನಿಮಾಗಳಲ್ಲಿ ಕೈದಿಗಳನ್ನ ಅವರ ಸಂಬಂಧಿಗಳು ಭೇಟಿ ಮಾಡೋ ದೃಶ್ಯಗಳನ್ನ ನೋಡಿರ್ತೀರಿ. ಜಾಲರಿಯ ಅತ್ತ ಕಡೆ ಕಡೆಗೆ ಕೈದಿ ಇದ್ರೆ ಇತ್ತ ಕಡೆಗೆ ನಿಂತುಕೊಂಡು ಸಂಬಂಧಿಗಳು ಮಾತನಾಡಬೇಕು. ಇಬ್ಬರ ನಡುವೆ ಕಬ್ಬಿಣದ ಪಂಜರ.. ಹತ್ತಿರವಿದ್ರೂ ಮೈಲುಗಳಷ್ಟು ಅಂತರ.

ಮೊನ್ನೆ ವಿಜಯಲಕ್ಷ್ಮೀ ಮತ್ತು ದರ್ಶನ್ ನಡುವೆ ಇಂಥದ್ದೇ ಸನ್ನಿವೇಶ ನಡೆದಿದೆ. ಈ ಸ್ಥಿತಿ ಕಂಡು ವಿಜಯಲಕ್ಷ್ಮೀ ಕಣ್ಣೀರು ಹಾಕಿದ್ದಾರಂತೆ. ದರ್ಶನ್ ನನ್ನ ಹಣೆಬರಹ ಇದ್ದಂತೆ ಆಗಲಿ, ಪದೇ ಪದೇ ಭೇಟಿಗೆ ಬರಬೇಡ ಅಂದಿದ್ದಾರಂತೆ.

ಹೌದು ದರ್ಶನ್​ನ ನಡೆಸಿಕೊಳ್ತಾ ಇರೋ ರೀತಿಯನ್ನ ನೋಡಿದ್ರೆ, ದಾಸನ ವಿರುದ್ದ ಜೈಲು ಅಧಿಕಾರಿಗಳು ಜಿದ್ದಿಗೆ ಬಿದ್ದಂತೆ ಕಾಣ್ತಾ ಇದೆ. ದರ್ಶನ್ ತನಗೆ ದಿಂಬು, ಹಾಸಿಗೆ ಸೇರಿದಂತೆ ಸೂಕ್ತ ಸೌಲಭ್ಯ ಕೊಡ್ತಾ ಇಲ್ಲ ಅಂತ ಕೋರ್ಟ್ ಮೊರೆ ಹೋಗಿದ್ರು. ಕೋರ್ಟ್ ಜೈಲಾಧಿಕಾರಿಗಳಿಗೆ ಜೈಲು ಮ್ಯಾನುವೆಲ್​ನಂತೆ ಹಾಸಿಗೆ, ದಿಂಬು ಕೊಡಿ ಅಂತ ಸೂಚನೆ ಕೊಟ್ಟಿತ್ತು.

ಆದ್ರೆ ಕೋರ್ಟ್ ಆದೇಶ ಬಂದ ಮೇಲೂ ತನಗೆ ಸೂಕ್ತ ಸೌಲಭ್ಯ ಕೊಡ್ತಾ ಇಲ್ಲ ಅಂತ ದರ್ಶನ್ ಪರ ವಕೀಲರು ಮತ್ತೆ ಅರ್ಜಿ ಸಲ್ಲಿಸಿದ್ರು. ಬರೊಬ್ಬರಿ ಮೂರು ಸಾರಿ ಅರ್ಜಿ ಸಲ್ಲಿಸಿ ಜೈಲು ಅಧಿಕಾರಿಗಳು ಕೋರ್ಟ್ ಆದೇಶ ಪಾಲಿಸ್ತಾ ಇಲ್ಲ ಅಂತ ದೂರು ನೀಡಲಾಗಿದೆ.

ಜೈಲಿನಲ್ಲಿ ಉಳಿದ ಕೈದಿಗಳಂತೆ ಹೊಂದಿಕೊಂಡು ಹೋಗದೇ ಹೀಗೆ ಪದೇ ಪದೇ ಕೋರ್ಟ್ ಮೆಟ್ಟಿಲು ಏರ್ತಾ ಇರೋ ದಾಸನಿಗೆ ಬುದ್ದಿ ಕಲಿಸಬೇಕು ಅಂತ ಜೈಲರ್ಸ್ ಸಜ್ಜಾದಂತೆ ಕಾಣ್ತಾ ಇದೆ. ಅಂತೆಯೇ ತಾವಾಗಿಯೇ ದರ್ಶನ್​ಗೆ ಕೊಡ್ತಾ ಇದ್ದ ಕೆಲ ವಿಐಪಿ ಟ್ರೀಟ್​​ಮೆಂಟ್ ನ ಕಟ್ ಮಾಡಿದ್ದಾರೆ. ಈಗಲೂ ಕೋರ್ಟ್​ನಿಂದ ಆದೇಶ ತೆಗೆದುಕೊಂಡು ಬಾ ಅಂತ ಸವಾಲು ಹಾಕ್ತಾ ಇದ್ದಾರೆ.

ಈ ಹಿಂದೆ ದರ್ಶನ್​ಗೆ ಸೌಲತ್ತು ಕೊಡೋದಕ್ಕೆ ಹೋಗಿ ಜೈಲು ಅಧಿಕಾರಿ ಸಸ್ಪೆಂಡ್ ಆಗಿದ್ದಾರೆ. ಈ ವಿಚಾರ ಸುಪ್ರೀಂ ಕೋರ್ಟ್​ವರೆಗೂ ಹೋಗಿ ಜೈಲಾಧಿಕಾರಿಗಳಿಗೆ ತಲೆನೋವು ತಂದಿದೆ. ಇದರ ನಡುವೆ ದರ್ಶನ್​ ಬೇರೆ ಪದೇ ಪದೇ ಕೋರ್ಟ್​ಗೆ ಹೋಗಿ ತಮ್ಮ ಮೇಲೆ ದೂರು ಕೊಡ್ತಾ ಇರೋದು ಜೈಲರ್ಸ್​ ಪಿತ್ತ ನೆತ್ತಿಗೇರುವಂತೆ ಮಾಡಿದೆ.

ದರ್ಶನ್ ಹೊರಗೆ ಚಕ್ರವರ್ತಿಯಂತೆ ಮೆರೆದಾತ. ಏನ್ ಬೇಕೋ ಅದು ಕೇಳಿದ ಕ್ಷಣಮಾತ್ರದಲ್ಲಿ ಸಿಕ್ತಾ ಇತ್ತು. ದಾಸ ಕೇಳಿದ್ದನ್ನ ತಂದು ಸುರಿಯೋದಕ್ಕೆ ಹಿಂದೆ ದೊಡ್ಡ ದಂಡೇ ಇರ್ತಾ ಇತ್ತು. ಆದ್ರೆ ಈಗ ದರ್ಶನ್ ಇರೋದು ಜೈಲಿನಲ್ಲಿ. ಹೊರಗಿನಂತೆ ಇಲ್ಲೂ ದುಡ್ಡಿನ ಮದದಿಂದ ದರ್ಪ ತೋರಿದ್ರೆ, ಜೈಲು ಅಧಿಕಾರಿಗಳು ಬಾಲ್ ಕಟ್ ಮಾಡದೇ ಬಿಡ್ತಾರಾ,.?

ಸದ್ಯ ಈ ಡ್ರಾಮಾದಿಂದ ದರ್ಶನ್ ಪತ್ನಿ ನೋವನ್ನ ಅನುಭವಿಸುವಂತೆ ಆಗಿದೆ. ಸಾಮಾನ್ಯ ಜನರ ಜೊತೆಗೆ ಸರತಿ ಸಾಲಿನಲ್ಲಿ ನಿಂತು , ಅವಮಾನ ನುಂಗಿ ದಾಸನನ್ನ ಭೇಟಿಮಾಡಿಕೊಂಡು ಬಂದಿದ್ದಾರೆ. ಇನ್ನೂ ಎಷ್ಟು ದಿನ ಈ ನೋವು, ಅಪಮಾನ ಅಂತ ಕಣ್ಣೀರು ಹಾಕ್ತಾ ಇದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ…

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
03:23ಟಾಕಿಂಗ್ ಸ್ಟಾರ್ ಸೃಜನ್​ ಲೋಕೇಶ್ ಸಿನಿಮಾದ ಸ್ಪೆಷಲ್ ಸಾಂಗ್ ಬಿಡುಗಡೆ
Read more