Aug 11, 2023, 4:41 PM IST
ಬಹುಭಾಷೆಯಲ್ಲಿ ಖುಷಿ ಸಿನಿಮಾ ರಿಲೀಸ್ ಆಗುತ್ತಿದೆ. ಇತ್ತೀಚಿಗೆ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ವಿಜಯ್ ದೇವರಕೊಂಡ ಮತ್ತು ಸಮಂತಾ ಪತಿ-ಪತ್ನಿ ರೀತಿ ಕಾಣಿಸಿಕೊಂಡಿದ್ದಾರೆ. ಪ್ರೀತಿ, ಮದುವೆ, ಜಗಳ ಹಿನ್ನೆಲೆಯಲ್ಲಿ ಈ ಸಿನಿಮಾ ಇರಲಿದೆ .ಪ್ರೀತಿಸಿ ಮದುವೆಯಾಗೊ ಹೀರೋ ಹೀರೋಯಿನ್ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾರೆ. ಮನೆಯವರನ್ನು ಎದುರಿಸಿ ಮದುವೆಯಾಧ ಜೋಡಿ ಖುಷಿಯಾಗಿರುತ್ತಾ ಇಲ್ವಾ ಅನ್ನೋದೆ ಸಿನಿಮಾ ಸ್ಟೋರಿ. ಟ್ರೇಲರ್ ಮೂಲಕ ಖುಷಿ ಸಿನಿಮಾ ಯುವ ಜನತೆಯ ಮನಸ್ಸು ಗೆದ್ದಿದೆ. ತಮಿಳು, ಮಲಯಾಳಂ, ಕನ್ನಡದಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಜಯರಾಂ, ಸಚಿನ್ ಖೇಡೇಕರ್, ಮುರಳಿ ಶರ್ಮಾ, ಲಕ್ಷ್ಮಿ, ಅಲಿ, ಶರಣ್ಯ ಪೊನ್ ವಣ್ಣನ್, ರೋಹಿಣಿ, ರಾಹುಲ್ ರಾಮಕೃಷ್ಣ, ವೆನ್ನೆಲ ಕಿಶೋರ್, ಶ್ರೀಕಾಂತ್ ಅಯ್ಯಂಗಾರ್, ಶರಣ್ಯ ಪ್ರದೀಪ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ತಾಯಿ ಜೊತೆ ಮಾತು ಬಿಟ್ಟಿದ್ದ ನಟಿ ವೈಷ್ಣವಿ; ಭಾವುಕರಾಗಿ ಸತ್ಯ ಬಿಚ್ಚಿಟ್ಟ ಸೀತಾ!