ಇಳಿ ಸಂಜೆ ಕಡಲ ತೀರದಲ್ಲಿ ರೀಷ್ಮಾ ತಲೆ ಕೆಡಿಸಿದ ಧನ್ವೀರ್..!

Sep 4, 2023, 12:16 PM IST

ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಜಾರ್ ಸೃಷ್ಟಿಸಿಕೊಂಡಿರೋ ಹೀರೋ ಧನ್ವೀರ್(Dhanveer).  ಕಡೆ ಲವ್ ಸ್ಟೋರಿಗೂ ಜೈ ಅನ್ನೋ ಹಾಗೆ ಬಿಗ್ ಸ್ಕ್ರೀನ್ ಮೇಲೆ ತನ್ನನ್ನು ತಾನು ಮೋಲ್ಡ್ ಮಾಡಿಕೊಂಡಿದ್ದಾರೆ. ಧನ್ವೀರ್ ಈಗ ವಾಮನನಾಗಿ ತೆರೆ ಮೇಲೆ ಬರೋದಕ್ಕೆ ಸಜ್ಜಾಗಿದ್ದಾರೆ. ವಾಮನ ಸಿನಿಮಾದ (Vamana movie) ಆಕ್ಷನ್ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿತ್ತು. ಇಲ್ಲಿ ಧನ್ವೀರ್ ಭರ್ಜರಿ ಆಕ್ಷನ್ ಧಮಾಕ ನೋಡಿ ವಾರೆ ವ್ಹಾ ವಾಮನ ಅಂದಿದ್ರು ಸಿನಿ ಪ್ರೇಕ್ಷಕ. ಧನ್ವೀರ್ ನಟನೆಯ ಆಕ್ಷನ್ ಕಟ್ ಲವ್ ಸ್ಟೋರಿ ಸಿನಿಮಾ ವಾಮನ. ಈ ಸಿನಿಮಾದಲ್ಲಿ ಧನ್ವೀರ್ ಆಕ್ಷನ್ ಬಾಯ್ ಮಾತ್ರವಲ್ಲ ಲವರ್ ಬಾಯ್ ಕೂಡ ಹೌದು. ವಾಮನ ಸಿನಿಮಾದಲ್ಲಿ ಏಕ್ ಲವ್ ಯಾ ಬ್ಯೂಟಿ ರೀಷ್ಮಾ ನಾಣಯ್ಯ ಸೌಂಧರ್ಯ ಸಮರ ಇದೆ. ಈ ಜೋಡಿ ಕೆಮಿಸ್ಟ್ರಿ ವಾಮನದಲ್ಲಿ ಸಖತ್ತಾಗೆ ವರ್ಕ್ ಆಗಿದೆ. ರೀಷ್ಮಾ ಧನ್ವೀರ್ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದ್ದು, ಪ್ರೇಮಿಗಳ ಮನದಲ್ಲಿ ಗುನುಗುವಂತಿದೆ. ವಾಮನ ಸಿನಿಮಾದ ಈ ರೊಮ್ಯಾಂಟಿಂಕ್ ಹಾಡು(Romantic Song) ಬಿಡುಗಡೆ ಕಾರ್ಯಕ್ರಮಕ್ಕೆ ಹುಬ್ಬಳಿಯಲ್ಲಿ ನಡೆದಿದೆ. ನಟ ಧನ್ವೀರ್ ಹಾಗೂ ರೀಷ್ಮಾರ ರೊಮ್ಯಾಂಟಿಕ್ ಹಾಡಿಗೆ ಅಜನೀಶ್ ಬಿ ಲೋಕನಾಥ್ ಮ್ಯೂಸಿಕ್ ಮಾಡಿದ್ದಾರೆ. ಈ ಸಾಂಗ್ ನೋಡಿದ ಸಂಗೀತ ಪ್ರೀಯರು ಇಳಿ ಸಂಜೆ ಕಡಲ ತೀರದಲ್ಲಿ ರೀಷ್ಮಾ ತಲೆ ಕಡೆಸಿದ ಧನ್ವೀರ್ ಅಂತ ಕಮೆಂಟ್ ಮಾಡುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  ಹೌಸ್ ಫುಲ್ ಪ್ರದರ್ಶನದಲ್ಲಿ 'ಸಪ್ತ ಸಾಗರದಾಚೆ ಎಲ್ಲೋ': ಸಿನಿಮಾ ಬಾಕ್ಸಾಫೀಸ್ ಕಮಾಲ್ ಹೇಗಿದೆ..?