25 ವರ್ಷ ಹಿಂದೆಯೇ ಕೋಟಿ ಬಜೆಟ್​ನ ಸಿನಿಮಾ 'A': UI ರಿಲೀಸ್ ಮೊದಲು 'ಎ' ರೀ ರಿಲೀಸ್ ಮಾಡೋದೇಕೆ?

25 ವರ್ಷ ಹಿಂದೆಯೇ ಕೋಟಿ ಬಜೆಟ್​ನ ಸಿನಿಮಾ 'A': UI ರಿಲೀಸ್ ಮೊದಲು 'ಎ' ರೀ ರಿಲೀಸ್ ಮಾಡೋದೇಕೆ?

Published : May 12, 2024, 12:26 PM IST

25 ವರ್ಷ ಹಿಂದೆಯೇ ಕೋಟಿ ಬಜೆಟ್​ನ ಸಿನಿಮಾ 'A'! UI ರಿಲೀಸ್ ಮೊದಲು 'A' ರೀ ರಿಲೀಸ್ ಮಾಡೋದೇಕೆ? ಬುದ್ಧಿವಂತರಿಗೆ ಮಾತ್ರ ಎಂದು ಹುಳ ಬಿಟ್ಟಿದ್ದ ಉಪೇಂದ್ರ; ಹೊಸ ಅಲೆ ಎಬ್ಬಿಸಿದ್ದ 'A' ಸಿನಿಮಾ ರೀ ರಿಲೀಸ್..! ಮರು ಬಿಡುಗಡೆ ಆಗುತ್ತಿದೆ ಉಪೇಂದ್ರ ನಿರ್ದೇಶನದ 'A'.

ಉಪೇಂದ್ರ ನಟಿಸಿ, ನಿರ್ದೇಶನ ಮಾಡಿದ್ದ ಕಲ್ಟ್ ಕ್ಲಾಸಿಕ್ ಸಿನಿಮಾ ಒಂದನ್ನು ಮರು ಬಿಡುಗಡೆ ಮಾಡಲಾಗಿದೆ. ಉಪೇಂದ್ರ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿ, ನಿರ್ದೇಶನವನ್ನೂ ಮಾಡಿದ್ದ ‘ಎ’ ಸಿನಿಮಾವನ್ನು ಇದೀಗ ಮರು ಬಿಡುಗಡೆ ಮಾಡಲಾಗುತ್ತಿದೆ. 1998 ರಲ್ಲಿ ಈ ಸಿನಿಮಾ ಮೊದಲ ಬಾರಿಗೆ ಬಿಡುಗಡೆ ಆಗಿತ್ತು. ಆ ವರೆಗೆ ಕೇವಲ ನಿರ್ದೇಶಕನಾಗಿ ಹಾಗೂ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳನ್ನು ಮಾಡುತ್ತಿದ್ದ ಉಪ್ಪಿ ಈ ಸಿನಿಮಾ ಮೂಲಕ ಮೊದಲ ಬಾರಿಗೆ ನಾಯಕ ನಟರಾದರು. ಇದೀಗ ಈ ಸಿನಿಮಾ ಮೇ 17 ರಂದು ಮರು ಬಿಡುಗಡೆ ಆಗಲಿಕ್ಕಿದೆ. 

ಸಾಂಪ್ರದಾಯಿಕ ಕತೆ ಹೇಳುವ ಪದ್ಧತಿಯನ್ನು ನುಚ್ಚು ನೂರು ಮಾಡಿದ್ದ ಉಪೇಂದ್ರ ‘ಎ’ ಸಿನಿಮಾ ಮೂಲಕ ಭಿನ್ನ ವ್ಯಕ್ತಿಯ ಕತೆಯನ್ನು ಅಷ್ಟೆ ಭಿನ್ನವಾಗಿ ಹೇಳಿದ್ದರು. ಸಿನಿಮಾದ ನಾಯಕ, ನಾಯಕಿಗೆ ಆ ಹಿಂದೆ ಇದ್ದ ಎಲ್ಲ ಗಡಿಗಳನ್ನು ಒಡೆದು ನಾಯಕನನ್ನು ಬಹಳ ಭಿನ್ನವಾಗಿ ತೋರಿಸಿದ್ದರು. ಈ ಸಿನಿಮಾಕ್ಕೆ ಉಪೇಂದ್ರ ಬರೆದಿದ್ದ ಚುರುಕು ಸಂಭಾಷಣೆಗಳು ಈಗಲೂ ಜನಪ್ರಿಯ. ಈ ಸಿನಿಮಾದ ಹಾಡುಗಳು ಸಹ ಎವರ್​ಗ್ರೀನ್. ಈ ಸಿನಿಮಾದ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿದ್ದು ಅದನ್ನೇ ಎನ್​ಕ್ಯಾಶ್ ಮಾಡಿಕೊಳ್ಳುವ ಉದ್ದೇಶದಿಂದ ‘ಎ’ ಸಿನಿಮಾವನ್ನು ಈಗ ಮರು ಬಿಡುಗಡೆ ಮಾಡಲಾಗುತ್ತಿದೆ.

07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
Read more