ಗ್ಲೋಬಲ್ ಮಟ್ಟದಲ್ಲಿ ಹಿಟ್ ಆಯ್ತು ಉಪ್ಪಿ-ಕಿಚ್ಚನ ಕಬ್ಜ ಟೀಸರ್!

ಗ್ಲೋಬಲ್ ಮಟ್ಟದಲ್ಲಿ ಹಿಟ್ ಆಯ್ತು ಉಪ್ಪಿ-ಕಿಚ್ಚನ ಕಬ್ಜ ಟೀಸರ್!

Published : Sep 21, 2022, 07:36 PM IST

ಕಬ್ಜ ಟೀಸರ್ ಗ್ಲೋಬಲ್ ಮಟ್ಟದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಕಬ್ಜ ಸಿನಿಮಾದ ಟೀಸರ್ ಯಾವ ಮಟ್ಟಕ್ಕೆ ಇಷ್ಟ ಆಗ್ತಿದೆ ಅಂದ್ರೆ ಹಾಲಿವುಡ್ ಜಗತ್ತು ಮತ್ತೊಮ್ಮೆ ಕನ್ನಡ ಸಿನಿಮಾ ಇಂಡಸ್ಟ್ರಿ ಕಡೆ ತಿರುಗಿ ನೋಡುತ್ತಿದೆ. 

ಮಾಡೋ ಕೆಲಸವನ್ನ ಸರಿಯಾಗಿ ಶ್ರಮ ವಹಿಸಿ ಮಾಡಿದ್ರೆ ಸಕ್ಸಸ್ ಕಟ್ಟಿಟ್ಟ ಬುತ್ತಿ ಅನ್ನೋದು ನಿರ್ದೇಶಕ ಆರ್.ಚಂದ್ರು ವಿಷಯದಲ್ಲೂ ಪ್ರೂವ್‌ ಆಗಿದೆ. ನಿಂತರು, ಕೂತರು, ಮಲಗಿದ್ರು ಕನಸು ಮನಸ್ಸಿನಲ್ಲೂ ನಿರ್ದೇಶಕ ಆರ್.ಚಂದ್ರುಗೆ ಇರೋದು ಒಂದೇ ಒಂದು ಯೋಚನೆ. ಅದೇ ಕಬ್ಜ ಸಿನಿಮಾ.. ಮೊನ್ನೆ ಮೊನ್ನೆವರೆಗು ಕಬ್ಜ ಬಗ್ಗೆ ಯಾವ್ ವಿಶ್ಯೂವಲ್ ಬಿಟ್ಟು ಕೊಟ್ಟಿರದ ಆರ್ ಚಂದ್ರು ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬಕ್ಕೆ ಅಂತ ಕಬ್ಜದ ಟೀಸರ್ ಒಂದನ್ನ ರಿವೀಲ್ ಮಾಡಿದ್ರು. ಇದೀಗ ಆರ್ ಚಂದ್ರು ಕಲ್ಪನೆಗೆ ವಿಶ್ವದ ಸಿನಿ ಪ್ರೇಕ್ಷಕರು ಉಘೇ ಉಘೇ ಎಂದಿದ್ದಾರೆ. ಕಬ್ಜ ಟೀಸರ್ ಗ್ಲೋಬಲ್ ಮಟ್ಟದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಕಬ್ಜ ಸಿನಿಮಾದ ಟೀಸರ್ ಯಾವ ಮಟ್ಟಕ್ಕೆ ಇಷ್ಟ ಆಗ್ತಿದೆ ಅಂದ್ರೆ ಹಾಲಿವುಡ್ ಜಗತ್ತು ಮತ್ತೊಮ್ಮೆ ಕನ್ನಡ ಸಿನಿಮಾ ಇಂಡಸ್ಟ್ರಿ ಕಡೆ ತಿರುಗಿ ನೋಡುತ್ತಿದೆ. 

ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಂದಾಗ ದೇಶ ವಿದೇಶಗಳು ಆ ಸಿನಿಮಾವನ್ನ ದೊಡ್ಡ ಫೆಸ್ಟಿವೆಲ್ ರೀತಿ ಸೆಲೆಬ್ರೇಟ್ ಮಾಡಿದ್ರು. ಇದೀಗ ಅದಕ್ಕು ಒಂದು ಕೈ ಮಿಗಿಲೆನ್ನುವಂತೆ ಕಬ್ಜದ ಕರಾಮತ್ತು ವರ್ಲ್ಡ್ ಸಿನಿ ಮಾರ್ಕೇಟ್ನಲ್ಲಿ ಸೃಷ್ಟಿಯಾಗಿದೆ. ಕಬ್ಜ ಟೀಸರ್ 24 ಗಂಟೆಯಲ್ಲಿ ಒಂದುವರೆ ಕೋಟಿ ಜನ ವೀಕ್ಷಿಸಿದ್ದು ಹೊಸ ದಾಖಲೆ ಸೃಷ್ಟಿಸಿದೆ. ಇದರಿಂದ ವರ್ಲ್ಡ್ ಸಿನಿಮಾ ಮಾರ್ಕೇಟ್ನಲ್ಲಿ ಕಬ್ಜ ಸಿನಿಮಾಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಕೆಜಿಎಫ್ ಸಿನಿಮಾವನ್ನ ರಿಲೀಸ್ ಮಾಡಿದ್ದ ಪ್ರಾಂಚೈಸಿಗಳೆಲ್ಲಾ ಈಗ ಕಬ್ಜ ಸಿನಿಮಾವನ್ನ ನಮ್ಗೆ ಕೊಡಿ ಅಂತ ಭಾರಿ ಡಿಮ್ಯಾಂಡ್ ಮಾಡುತ್ತಿದ್ದಾರಂತೆ. ಈ ಖುಷಿಯನ್ನ ನಿರ್ದೇಶಕ ಆರ್ ಚಂದ್ರು ಹಾಗು ರಿಯಲ್ ಸ್ಟಾರ್ ಉಪೇಂದ್ರ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ. ಭಾರತೀಯ ಸಿನಿ ರಂಗವನ್ನ ಈ ವರ್ಷ ಲೀಡ್ ಮಾಡುತ್ತಿರೋದು ಸ್ಯಾಂಡಲ್ವುಡ್ ಸಿನಿಮಾಗಳು. 

ಕೆಜಿಎಫ್ ಬಂದ ಬಳಿಕ 777 ಚಾರ್ಲಿ ಆ ನಂತರ ವಿಕ್ರಾಂತ್ ರೋಣ ಸಿನಿಮಾಗಳು ಪ್ಯಾನ್ ಇಂಡಿಯಾದಲ್ಲಿ ಸಕ್ಸಸ್ ಆದ್ವು. ಅಷ್ಟೆ ಅಲ್ಲ ಈ ವರ್ಷ ದೇಶದಲ್ಲೇ ಅತಿ ಹೆಚ್ಚು ವೀಕ್ಷಣೆ ಕಂಡ ಟೀಸರ್‌ಗಳ ಪಟ್ಟಿಯಲ್ಲಿ ಕೆಜಿಎಫ್, ಜೇಮ್ಸ್, ಮತ್ತು ವಿಕ್ರಾಂತ್ ರೋಣ ಟೀಸರ್‌ಗಳು ಮೊದಲ ಮೂರು ಸ್ಥಾನ ಪಡೆದಿದ್ವು. ಈಗ ಕಬ್ಜ ಟೀಸರ್ 24 ಗಂಟೆಯಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದು ಎರಡನೇ ಸ್ಥಾನಕ್ಕೇರಿದೆ. ಪ್ಯಾನ್ ಇಂಡಿಯಾ ಮೂವಿ ಮಾಡ್ತೇವೆ ಅಂತ ಹೊರಟ ಉಪ್ಪಿ-ಕಿಚ್ಚ ಹಾಗು ಆರ್ ಚಂದ್ರುಗೆ ಈ ಸಿನಿಮಾ ಟೀಸರ್ ಗ್ಲೋಬಲ್ ಸಿನಿಮಾದ ಇಮೇಜ್ ತಂದುಕೊಡುತ್ತಿದೆ. ಕಬ್ಜ ಸಿನಿಮಾ ಏಳು ಭಾಷೆಯಲ್ಲಿ ಸಿದ್ಧವಾಗಿದ್ದು, ಟೀಸರ್ ನೋಡಿ ಪಾಕಿಸ್ತಾನ, ಜಪಾನ್, ಯುಎಇ ಚೀನಾ ಕೊರಿಯಾ ಸೇರಿದಂತೆ ಹಲವು ದೇಶದ ಸಿನಿ ಪ್ರೇಕ್ಷಕರು ಟೀಸರ್ಗೆ ರಿವ್ಯೂ ಮಾಡಿದ್ದಾರೆ. ಹೀಗಾಗಿ ಈ ಟೀಸರ್‌ನಿಂದ ಕಬ್ಜಕ್ಕೆ ಸೃಷ್ಟಿಯಾಗಿರೋ ಬೇಡಿಕೆ ನೋಡಿ ನಿರ್ದೇಶಕ ಆರ್ ಚಂದ್ರು ಒಂಭತ್ತು ಭಾಷೆಯಲ್ಲಿ ಸಿನಿಮಾವನ್ನ ತೆರೆಗೆ ತರೋದಕ್ಕೆ ಪ್ಲಾನ್ ಮಾಡಿಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
Read more