
ದರ್ಶನ್ ಅಭಿನಯದ ‘ದಿ ಡೆವಿಲ್’ ಚಿತ್ರದ ಶೂಟಿಂಗ್ ಕೊನೆ ಹಂತದಲ್ಲಿದ್ದು, ಸೆಪ್ಟೆಂಬರ್ ಕೊನೆಯ ವಾರದಲ್ಲಿ ಸಿನಿಮಾ ಬಿಡುಗಡೆಯಾಗುವುದು ಫಿಕ್ಸ್ ಆಗಿದೆ.
ದರ್ಶನ್ ಅಭಿನಯದ ‘ದಿ ಡೆವಿಲ್’ ಚಿತ್ರದ ಶೂಟಿಂಗ್ ಕೊನೆ ಹಂತದಲ್ಲಿದ್ದು, ಸೆಪ್ಟೆಂಬರ್ ಕೊನೆಯ ವಾರದಲ್ಲಿ ಸಿನಿಮಾ ಬಿಡುಗಡೆಯಾಗುವುದು ಫಿಕ್ಸ್ ಆಗಿದೆ. ಈ ಹಿಂದೆ ಡಿಸೆಂಬರ್ ನಲ್ಲಿ ಬಿಡುಗಡೆಯಾಗಬಹುದು ಎಂಬ ಊಹೆಗಳು ಇದ್ದರೂ, ಚಿತ್ರತಂಡ ಈಗ ಸೆಪ್ಟೆಂಬರ್ ನಲ್ಲೇ ಸಿನಿಮಾ ತೆರೆಕಾಣಿಸಲು ತೀರ್ಮಾನಿಸಿದೆ. ಒಂದು ಹಾಡಿನ ಶೂಟಿಂಗ್ ಬಾಕಿ ಉಳಿದಿದ್ದು, ಆಗಸ್ಟ್ ತಿಂಗಳಿಂದ ಪ್ರಚಾರ ಕಾರ್ಯಗಳು ಆರಂಭವಾಗಲಿವೆ. ಚಿತ್ರತಂಡದ ಸಂಭಾಷಣೆಯಕಾರ ಕಾಂತಾರಾಜು ಮಾಹಿತಿ ನೀಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸವೂ ವೇಗವಾಗಿ ನಡೆಯುತ್ತಿದೆ. 2023ರ ಡಿಸೆಂಬರ್ ನಲ್ಲಿ ಬಿಡುಗಡೆಯಾದ ‘ಕಾಟೇರ’ ಸಿನಿಮಾ ಯಶಸ್ಸು ಕಂಡ ಹಿನ್ನೆಲೆಯಲ್ಲಿ ‘ಡೆವಿಲ್’ ಕೂಡ ಅದೇ ಮಾಸದಲ್ಲಿ ಬರಬಹುದು ಎಂಬ ನಿರೀಕ್ಷೆ ಇದ್ದರೂ, ಇದೀಗ ಸೆಪ್ಟೆಂಬರ್ ರಿಲೀಸ್ ಪ್ಲಾನ್ ಮಾಡಲಾಗಿದೆ. ದರ್ಶನ್ ಅಭಿಮಾನಿಗಳಿಗೆ ಇದು ಸಿಹಿ ಸುದ್ದಿ ಆಗಿದ್ದು, ಡಿಸೆಂಬರ್ ವರೆಗೆ ಕಾಯಬೇಕಿಲ್ಲ ಎಂಬ ಖುಷಿಯ ಘೋಷಣೆಯಾಗಿದೆ.