ಮಾರ್ಟಿನ್ ಮೆಗಾ ಎಂಟ್ರಿಗೆ ಕೌಂಟ್​ಡೌನ್ ಸ್ಟಾರ್ಟ್: 3000 ಸ್ಕ್ರೀನ್ಸ್.. ಮಿಡ್ ನೈಟ್ ಶೋ.. ಧ್ರುವ ಸರ್ಜಾ ಹವಾ!

ಮಾರ್ಟಿನ್ ಮೆಗಾ ಎಂಟ್ರಿಗೆ ಕೌಂಟ್​ಡೌನ್ ಸ್ಟಾರ್ಟ್: 3000 ಸ್ಕ್ರೀನ್ಸ್.. ಮಿಡ್ ನೈಟ್ ಶೋ.. ಧ್ರುವ ಸರ್ಜಾ ಹವಾ!

Published : Oct 10, 2024, 02:32 PM IST

ಸ್ಯಾಂಡಲ್​ವುಡ್​ನ ಮೋಸ್ಟ್ ಅವೇಟೆಡ್ ಮೂವಿ ಮಾರ್ಟಿನ್ ರಿಲೀಸ್​​ಗೆ ಇನ್ನು ಮೂರೇ ದಿನ ಬಾಕಿ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಈ ಸಿನಿಮಾ ಪ್ಯಾನ್ ವರ್ಲ್ಡ್ ದೊಡ್ಡಮಟ್ಟದಲ್ಲಿ ರಿಲೀಸ್ ಆಗ್ತಾ ಇದೆ. ರಿಲೀಸ್ ಹೊಸ್ತಿಲ್ಲಿ ಮಾರ್ಟಿನ್ ಮೇನಿಯಾ ಹೇಗಿದೆ..? 

ಸ್ಯಾಂಡಲ್​ವುಡ್​ನ ಮೋಸ್ಟ್ ಅವೇಟೆಡ್ ಮೂವಿ ಮಾರ್ಟಿನ್ ರಿಲೀಸ್​​ಗೆ ಇನ್ನು ಮೂರೇ ದಿನ ಬಾಕಿ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಈ ಸಿನಿಮಾ ಪ್ಯಾನ್ ವರ್ಲ್ಡ್ ದೊಡ್ಡಮಟ್ಟದಲ್ಲಿ ರಿಲೀಸ್ ಆಗ್ತಾ ಇದೆ. ರಿಲೀಸ್ ಹೊಸ್ತಿಲ್ಲಿ ಮಾರ್ಟಿನ್ ಮೇನಿಯಾ ಹೇಗಿದೆ..? ಎಷ್ಟು ಸ್ಕ್ರೀನ್​ಗಳಲ್ಲಿ ಮಾರ್ಟಿನ್ ಆಟ ಶುರುವಾಗಲಿದೆ..? ಇದೆಲ್ಲದರ ಕುರಿತ ಸ್ಟೋರಿ ಇಲ್ಲಿದೆ ನೋಡಿ. ಧ್ರುವ ಸರ್ಜಾ ಫ್ಯಾನ್ಸ್ ಮೂರು ವರ್ಷಗಳಿಂದ ಕಾದಿರೋ ಬಹುನಿರೀಕ್ಷೆಯ ಮಾರ್ಟಿನ್ ಸಿನಿಮಾ ಇನ್ನೂ ಮೂರೇ ದಿನಗಳಲ್ಲಿ ಬಿಗ್ ಸ್ಕ್ರೀನ್ ಮೇಲೆ ಬರಲಿದೆ. ಮಾರ್ಟಿನ್ ಮೇಕಿಂಗ್ ಸ್ಟಾಂಡರ್ಡ್ ನೋಡಿದವರು, ಇದು ವರ್ಲ್ಡ್​ ವೈಡ್ ಕನ್ನಡದ ಬಾವುಟ ಹಾರಿಸೋದು ಫಿಕ್ಸ್ ಅಂತ ಭವಿಷ್ಯ ನುಡಿದಿದ್ದಾರೆ.   ಶುಕ್ರವಾರ ಮಾರ್ಟಿನ್ ಬರೊಬ್ಬರಿ 3000 ಸಾವಿರ ಸ್ಕ್ರೀನ್​ಗಳಲ್ಲಿ ರಿಲೀಸ್ ಆಗ್ತಾ ಇದೆ. ಉತ್ತರ ಭಾರತದಲ್ಲಿ ಮಾರ್ಟಿನ್​ ಹಿಂದಿ ವರ್ಷನ್​ಗೆ ಸಿಕ್ಕಾಪಟ್ಟೆ ಬೇಡಿ ಇದ್ದು, ನಾರ್ತ್ ಇಂಡಿಯನ್ ಸ್ಟೇಟ್​​ಗಳಲ್ಲೇ ಸಾವಿರ ಸ್ಕ್ರೀನ್​ಗಳಲ್ಲಿ ಮಾರ್ಟಿನ್ ಆಟ ಶುರುವಾಗಲಿದೆ. 

ಇನ್ನೂ ಕರುನಾಡಿನಲ್ಲಂತೂ ಧ್ರುವ ಫ್ಯಾನ್ಸ್ ಅಕ್ಷರಶಃ ಮಾರ್ಟಿನ್ ಹಬ್ಬ ಮಾಡೋದಕ್ಕೆ ಸಜ್ಜಾಗಿದ್ದಾರೆ. ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಅರ್ಲಿ ಮಾರ್ನಿಂಗ್ ಶೋಗಳನ್ನ ಹಾಕಲಾಗಿದೆ. ದಾವಣಗೆರೆ ಸೇರಿದಂತೆ, ಉತ್ತರ ಕರ್ನಾಟಕದ ಅನೇಕ ಕಡೆಗೆ ಅಕ್ಟೋಬರ್ 10ರ ರಾತ್ರಿಯೇ ಶೋ ಅರೇಂಜ್ ಆಗಿವೆ. ರಾತ್ರಿ 11ಗಂಟೆಗೆ ಹಲವು ಕಡೆಗೆ ಫ್ಯಾನ್ಸ್ ಶೋ ನಡೆಯಲಿವೆ. ಬೆಂಗಳೂರಿನಲ್ಲಿ ಕೆ.ಜಿ ರಸ್ತೆಯ ನರ್ತಕಿ ಚಿತ್ರಮಂದಿರದಲ್ಲಿ ಮಾರ್ಟಿನ್ ರಿಲೀಸ್ ಆಗ್ತಾ ಇದೆ. ಬೆಂಗಳೂರಿನ 5 ಚಿತ್ರಮಂದಿರಗಳಲ್ಲೂ ಮಿಡ್ ನೈಡ್ ಶೋಗಳನ್ನ ಹಾಕಲಾಗಿದೆ. ಮಲ್ಟಿಪ್ಲೆಕ್ಸ್​​ಗಳಲ್ಲಿ ದಾಖಲೆ ಸ್ಕ್ರೀನ್​ಗಳಲ್ಲಿ ಮಾರ್ಟಿನ್ ಆಟ ಶುರುವಾಗ್ತಾ ಇದೆ. ಒಟ್ಟಾರೆ ಮಾರ್ಟಿನ್ ಹವಾ ಸಖತ್ ಜೋರಾಗಿದೆ. ಮೂರು ವರ್ಷಗಳ ಬಳಿಕ ಧ್ರುವ ಸಿನಿಮಾ ಬರ್ತಿರೋದ್ರಿಂದ ಫ್ಯಾನ್ಸ್ ದೊಡ್ಡ ಮಟ್ಟದಲ್ಲಿ ಸೆಲೆಬ್ರೇಷನ್​ಗೆ ಸಜ್ಜಾಗಿದ್ದಾರೆ. ಕಟೌಟ್​, ಹಾರ, ಪಟಾಕಿ ಎಲ್ಲವೂ ಸಜ್ಜಾಗಿವೆ.. ಜಸ್ಟ್ ಮಾರ್ಟಿನ್ ಬರೊದೊಂದೇ ಬಾಕಿ.

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more