Oct 28, 2023, 8:53 AM IST
ಟಗರು ಪಲ್ಯ ಡಾಲಿ ಧನಂಜಯ್ ನಿರ್ಮಾಣದ ಸಿನಿಮಾ. ನೆನಪಿರಲಿ ಪ್ರೇಮ್ ಪುತ್ರಿ ನಾಯಕಿಯಾಗಿ ಡೆಬ್ಯೂ ಆದ ಚಿತ್ರ. ನಟ ನಾಗಭೂಷಣ್‌ಗೆ(Nagabhushana) ಹೀರೋ ಪಟ್ಟ ಕಟ್ಟಿದ ಮೂವಿ. ಈ ಟಗರು ಪಲ್ಯ(Tagaru Palya) ಈಗ ಬೆಳ್ಳಿತೆರೆ ಮೇಲೆ ಬಂದಿದೆ. ಸಿನಿ ಪ್ರೇಕ್ಷಕರ ರುಚಿ ರುಚಿಯಾದ ಟಗರು ಪುಲ್ಯ ತಿಂದು ತೇಗಿದ್ದಾರೆ. ಅಪ್ಪಟ ಹಳ್ಳಿ ಸೊಗಡು, ಸೊಬಗು. ಹೊಟ್ಟೆ ಹುಣ್ಣಾಗುವಷ್ಟು ಕಾಮಿಡಿ. ಅಲ್ಲಲ್ಲಿ ಕಣ್ಣೀರು ತರಿಸೋ ಎಮೋಷನಲ್ ದೃಶ್ಯಗಳ ಹಾವಳಿ. ಸಂಬಂಧ, ಹಬ್ಬ ಹರಿದಿನ ಅಂದ್ರೆ ಏನು.? ಮಗಳ ಮದುವೆಗೆ ಹುಡುಗನ ಆಯ್ಕೆ ಹೇಗಿರಬೇಕು.? ಮಟನ್ ಊಟಕ್ಕೆ ಊರ ಜನ ಸಂಬಂಧಿಕರು ಹೇಗೆ ಒಟ್ಟಾಗ್ತಾರೆ. ಇದನ್ನೆಲ್ಲಾ ನೋಡ್ಬೇಕು ಅಂದ್ರೆ ಟಗರು ಪಲ್ಯಕ್ಕೆ ಹೋಗ್ಬೇಕು. ಟಗರು ಪಲ್ಯ ಸಿನಿಮಾ ಶುರುವಾಗಿ ಹೇಗೆ ಮುಗಿಯುತ್ತೆ ಅನ್ನೋದೇ ಗೊತ್ತಾಗಲ್ಲ. ನಿಮ್ ಕಣ್ಣು ಕಿವಿ ಅತ್ತಿತ್ತ ಹೋಗಲ್ಲ. ಯಾಕಂದ್ರೆ ಈ ಸಿನಿಮಾದಲ್ಲಿ ಸ್ಟ್ರಾಂಗ್ ಸ್ಟೋರಿ ಇದೆ. ಮಂಡ್ಯದ(Mandya) ಮಳವಳ್ಳಿ ಹಳ್ಳಿಯೊಂದರ ದಂಪತಿ ರಂಗಾಯಣ ರಘು ಹಾಗೂ ತಾರಾ. ಅವರ ಮಗಳೇ ಅಮೃತಾ ಪ್ರೇಮ್(Amrutha Prem). ಮಗಳ ಮದುವೆ ಫಿಕ್ಸ್ ಆಯ್ತು ಅಂತ ಹರಕೆ ತೀರಿಸಲು ಕುಟುಂಬ ಇಡೀ ಊರ ಮಂದಿಯನ್ನ ಕರೆದುಕೊಂಡು ಊರ ದೇವರ ಬಳಿ ಹೋಗುತ್ತಾರೆ. ಟಗರು ತಂದು ಊರ ದೇವರಿಗೆ ಹರಕೆ ನೀಡಲು ಮುಂದಾಗುತ್ತಾರೆ. ಆದ್ರೆ ಆ ಟಗರು ತಲೆ ಒದರುವುದೇ ಇಲ್ಲ. ಆ ಟಗರು ಯಾಕೆ ತಲೆ ಒದರಲ್ಲ. ಮಗಳ ಮದುವೆ ಮಾಡೋ ರಂಗಾಯಣ ರಘು ಆಸೆ ಈಡೇರುತ್ತಾ.? ನಾಯಕಿ ಅಮೃತಾ ಮದುವೆ ಆಗೋದು ಯಾರನ್ನ ಅನ್ನೋದೆ ಟಗರು ಪಲ್ಯದ ಕಥೆಯಾಗಿದೆ.
ಇದನ್ನೂ ವೀಕ್ಷಿಸಿ: ಮತ್ತೊಮ್ಮೆ ನಿಖಿಲ್ ಕುಮಾರಸ್ವಾಮಿ, ಧ್ರುವ ಸರ್ಜಾ ಭೇಟಿ: ಇಬ್ಬರು ಒಂದೇ ಸಿನಿಮಾದಲ್ಲಿ ಅಭಿನಯಿಸ್ತಾರಾ?