Aug 29, 2023, 9:56 AM IST
ಭಾರತೀಯ ಚಿತ್ರರಂಗದ ಬಾದ್ ಷಾ ಕಿಚ್ಚ ಸುದೀಪ್ (Kiccha Sudeep) ಸುವರ್ಣ ಮಹೋತ್ಸವದ ಗಳಿಗೆಯಲ್ಲಿದ್ದಾರೆ. ಕಿಚ್ಚ ತನ್ನ ವಯಸ್ಸಿನಲ್ಲಿ ಆಫ್ ಸೆಂಚುರಿ ಭಾರಿಸುತ್ತಿದ್ದಾರೆ. ಇದೇ ಸೆಪ್ಟೆಂಬರ್ 2ಕ್ಕೆ ಸ್ಯಾಂಡಲ್‌ವುಡ್‌ನ ದಾದ 50ನೇ ವಸಂತಕ್ಕೆ ಕಾಲಿಡುತ್ತಾರೆ. ಹೀಗಾಗಿ ಕನ್ನಡದ ಮಾಣಿಕ್ಯ ಕಿಚ್ಚನ 50ನೇ ವರ್ಷದ ಹುಟ್ಟು ಹಬ್ಬವನ್ನ ಅದ್ಧೂರಿಯಾಗಿ ಆಚರಿಸೋದಕ್ಕೆ ದೊಡ್ಡ ಪ್ಲ್ಯಾನ್ ಆಗಿದೆ. ಆ ಪ್ಲ್ಯಾನ್ ಬಗ್ಗೆ ಹೇಳೋಕೂ ಮೊದಲು ಬಾದ್ ಷಾ ಸುದೀಪ್ ತನ್ನ ಪ್ರೀತಿಯ ಸ್ನೇಹಿತರಂತಿರೋ ಫ್ಯಾನ್ಸ್‌ಗೆ ಹುಟ್ಟುಹಬ್ಬದ(Birthday) ಸರ್ಪ್ರೈಸ್ ಒಂದನ್ನ ರೆಡಿಮಾಡಿದ್ದಾರೆ. ವಯಸ್ಸು 50 ಆಗ್ತಿದೆ. ಆದ್ರೆ ನಮ್ಮಣ್ಣ ಸುದೀಪ್ ಹ್ಯಾಂಡ್ಸಮ್ ಲುಕ್ ಮತ್ತಷ್ಟು ಹೆಚ್ಚಾಗ್ತಿದೆ. ಒಬ್ಬ ಡೆಡಿಕೆಟ್ ಆ್ಯಕ್ಟರ್ ಹೇಗಿರಬೇಕು ಅಂತ ಕಿಚ್ಚನ ಈ ಸಿಕ್ಸ್ಪ್ಯಾಕ್ ಫೋಟೋಗಳೇ ಹೇಳ್ತಿವೆ. ಸಿಕ್ಸ್‌ಪ್ಯಾಕ್‌ನಲ್ಲಿ ಮಾಣಿಕ್ಯ ಮಿಂಚಿದ್ದು, ಈ ಫೋಟೋಗಳು ಈಗ ವೈರಲ್ ಆಗ್ತಿದೆ. ಪೈಲ್ವಾನ್(Pailwan) ಸಿನಿಮಾದಿಂದ ತನ್ನ ದೇಹವನ್ನ ಹುರಿಗೊಳಿಸುತ್ತಾ ಬಂದಿರೋ ಈ ಹೆಬ್ಬುಲಿ ಈಗ 46ನೇ ಸಿನಿಮಾದಲ್ಲಿ ಭರ್ಜರಿ ಟ್ರೀಟ್ ಕೊಡೋದಕ್ಕೆ ಸಿದ್ಧರಾಗಿದ್ದಾರೆ. ಅದರ ಫಲವೇ ಕಿಚ್ಚನ ಈ ಸ್ಟನ್ನಿಂಗ್ ಸಿಕ್ಸ್ಪ್ಯಾಕ್ ಲುಕ್.
ಇದನ್ನೂ ವೀಕ್ಷಿಸಿ: ಶಿವಶಕ್ತಿ ಪಾಯಿಂಟ್ ನಾಮಕರಣಕ್ಕೆ ವಿವಾದವೇಕೆ..? ಮೋದಿ ಮಾತಿನಿಂದ ಶುರುವಾಗಿದ್ದೇಕೆ ಹೊಸ ವರಾತ..!