Dec 25, 2024, 8:36 AM IST
ಅಮೇರಿಕದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಡಾ.ಶಿವರಾಜ್ ಕುಮಾರ್ ಗೆ ಸರ್ಜರಿ . ಮೂತ್ರಕೋಶ ಕ್ಯಾನ್ಸರ್ ನಿಂದ ಬಳಲ್ತಾ ಇರೋ ಶಿವಣ್ಣನಿಗೆ ತಜ್ಞ ವೈದ್ಯರಿಂದ ಸರ್ಜರಿ , ಮುಂದಿನ 10 ದಿನಗಳ ಕಾಲ ಆಸ್ಪತ್ರೆಯಲ್ಲೇ ಅಬ್ಸರ್ವೇಶನ್ನಲ್ಲಿ ಇರುತ್ತಾರೆ . ಅತ್ತ ಶಿವಣ್ಣನಿಗೆ ಶಸ್ತ್ರಚಿಕಿತ್ಸೆ ನಡೀತಾ ಇದ್ರೆ ಇತ್ತ ಕರುನಾಡನಾಡಿನಾದ್ಯಂತ ಅಭಿಮಾನಿಗಳು ಪೂಜೆ, ಪುನಸ್ಕಾರ ಮಾಡಿ ಹರಕೆ ಕಟ್ಟಿದ್ದಾರೆ. ಶಿವಣ್ಣನ ಮನೆಯಲ್ಲಿ ಗಂಗಾಧರ ಸ್ವಾಮಿಗಳಿಂದ ಹೋಮ ಹವನ ನೆರವೇರಿದೆ. ಕಾಡು ಮಲ್ಲೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಮಾಡಿಸಲಾಗಿದೆ. ಮೈಸೂರಿನ ಅಗ್ರಹಾರದಲ್ಲಿರುವ 101 ಗಣಪತಿ ದೇವಸ್ಥಾನಗಳಲ್ಲಿ ವಿಶೇಷ ಅರ್ಚನೆ ಮಾಡಿಸಲಾಗಿದೆ. ಶಿವ ಸೈನ್ಯ ಅಭಿಮಾನಿ ಸಂಘದವರು ಮುಡಿಕೊಟ್ಟು, ಉರುಳು ಸೇವೆ ಮಾಡಿದ್ದಾರೆ.