Republic Day 2023; ಶಕ್ತಿಧಾಮದ ಮಕ್ಕಳ ಜೊತೆ ಶಿವರಾಜ್‌ ಕುಮಾರ್ ದಂಪತಿ ಗಣರಾಜೋತ್ಸವ ಆಚರಣೆ

Jan 26, 2023, 2:22 PM IST

ಭಾರತದಲ್ಲಿ 74ನೇ ಗಣರಾಜೋತ್ಸವ ಸಂಭ್ರಮ ಜೋರಾಗಿದೆ. ದೇಶದ ಎಲ್ಲಾ ಕಡೆ ತ್ರಿವರ್ಣ ಧ್ವಜ ಹಾರುತ್ತಿದೆ. ಎಲ್ಲರೂ ಗಣರಾಜ್ಯ ದಿನವನ್ನು ಸಂಭ್ರಮದಿಂದ ಆಚರಣೆ  ಮಾಡುತ್ತಿದ್ದಾರೆ. ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಕೂಡ ಧ್ವಜಾರೋಹಣಮಾಡಿ ಗಣರಾಜ್ಯ ದಿನ ಆಚರಿಸಿದ್ದಾರೆ. ಮೈಸೂರಿನ ಶಕ್ತಿದಾಮದ ಮಕ್ಕಳ ಜೊತೆ ಶಿವಣ್ಣ ಗಣರಾಜ್ಯ ದಿನ ಆಚರಿಸಿದ್ದಾರೆ. ಮಕ್ಕಳ ಜೊತೆ ಶಿವಣ್ಣ ಪತ್ನಿ ಗೀತಾ ಶಿವರಾಜ್ ಕುಮಾರ್ ಧ್ವಜಾರೋಹಣ ಮಾಡಿದರು. ಮಕ್ಕಳ ಮಾರ್ಚ್‌ಫಾಸ್ಟ್ ನೋಡಿ ಶಿವಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳ ಜೊತೆ ಗಣರಾಜೋತ್ಸವ ಆಚರಿಸಿದ ದೊಡ್ಮನೆ ಸದಸ್ಯರ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ.