Sep 24, 2023, 10:41 AM IST
‘ಅಭಿಮಾನಿಗಳೇ ದೇವರು’ ಈ ಒಂದು ಮಾತು ದೊಡ್ಮನೆಯಲ್ಲಿದ್ದವರೆಲ್ಲರ ಹೃದಯಾಂತರಾಳದ ಮಾತು. ಅದರಲ್ಲೂ ಶಿವಣ್ಣ(Shivaraj kumar) ತಮ್ಮ ಅಭಿಮಾನಿಗಳಲ್ಲೇ ಸ್ನೇಹಿತರು, ಕುಟುಂಬದ ಸದಸ್ಯರನ್ನೂ ಕಾಣ್ತಾರೆ. ಅದಕ್ಕೆ ಇಂದಿಗೂ ಇವರ ಮನೆಗೆ ಯಾರೊಬ್ಬ ಅಭಿಮಾನಿ(Fan) ಬಂದರೂ ಅವರನ್ನ ನಿರಾಸೆ ಮಾಡಿ ಕಳುಹಿಸಿದ್ದೇ ಇಲ್ಲ. ಶಿವಣ್ಣನವರ ಇದೇ ಸರಳ ಗುಣಕ್ಕೆ ಅಭಿಮಾನಿಗಳೂ ಫಿದಾ ಆಗಿದ್ದಾರೆ. ಡಾ.ರಾಜ್ ಮನೆತನದ ಕುಡಿ ಅಂದ್ರೆ ಸಾಮಾನ್ಯನಾ ಹೇಳಿ. ತಂದೆಗೆ ತಕ್ಕ ಮಗ ಅನ್ನೊದಕ್ಕೆ ಶಿವಣ್ಣನೇ ಬೇಸ್ಟ್ ಉದಾಹರಣೆಯಾಗಿದ್ದಾರೆ. ನಟ ಶಿವರಾಜ್ ಕುಮಾರ್ ನೋಡೋದಕ್ಕೆ ಸೈಲೆಂಟ್ ಅಂತ ಅನ್ಸಿದ್ರೂ, ನಟಿಸುವಾಗ ಮಾತ್ರ ಅಕ್ಷರಶಃ ಪರಕಾಯ ಪ್ರವೇಶ ಮಾಡಿ ನಟಿಸ್ತಿರ್ತಾರೆ. ಇಲ್ಲಿಯವರೆಗೆ ಇವರು ಏನಿಲ್ಲ ಅಂದರೂ ನೂರಿಪ್ಪತ್ತಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ. ಎಲ್ಲ ಪಾತ್ರಗಳು ಒಂದಕ್ಕಿಂತ ಒಂದು ಭಿನ್ನ. ಆದರೂ ಯಾವ ಪಾತ್ರಕ್ಕೂ ಚ್ಯುತಿ ಬರದಂತೆ ನಡಿಸಿದ್ದಾರೆ ಈ ದೊಡ್ಡಮನೆ ಹುಡುಗ.
ಇದನ್ನೂ ವೀಕ್ಷಿಸಿ: ಅಭಿಮಾನಿಗೋಸ್ಕರ ಪಾರ್ವತಮ್ಮನ ಮಗ ಮಾಡಿದ್ದೇನು ಗೊತ್ತಾ..? ಯುವತಿ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡ ಶಿವಣ್ಣ..!