'ಗುರು ಶಿಷ್ಯರು' ಸಿನಿಮಾದಲ್ಲಿ ಖೋ ಖೋ ಆಟದ ಖದರ್; ಶರಣ್ ನೋಡಿ ಫ್ಯಾನ್ಸ್ ಫುಲ್ ಖುಷ್

'ಗುರು ಶಿಷ್ಯರು' ಸಿನಿಮಾದಲ್ಲಿ ಖೋ ಖೋ ಆಟದ ಖದರ್; ಶರಣ್ ನೋಡಿ ಫ್ಯಾನ್ಸ್ ಫುಲ್ ಖುಷ್

Published : Sep 06, 2022, 01:15 PM IST

ಕಾಮಿಡಿ ಅಧ್ಯಕ್ಷ ಶರಣ್ ಈ ಬಾರಿ ಗುರುವಾಗಿ ಶಿಷ್ಯರ ದೊಡ್ಡ ಗ್ಯಾಂಗ್ ಕಂಟಿಕೊಂಡು ಬರುತ್ತಿದ್ದು, ಶಿಕ್ಷಕರ ದಿನದಂದ ಅಂಗವಾಗಿ ಗುರು ಶಿಷ್ಯರು ಟ್ರೈಲರ್ ರಿಲೀಸ್ ಆಗಿದೆ. ಗುರು ಶಿಷ್ಯರು 1995ರಲ್ಲಿ ನಡೆಯೋ ಸ್ಟೋರಿಯ ಸಿನಿಮಾ.

ಗುರು ಶಿಷ್ಯರು, ಈ ಹೆಸ್ರು ಕನ್ನಡ ಸಿನಿ ಪ್ರೇಕ್ಷಕರ ಮನದಲ್ಲಿ ಹಾಸು ಹೊಕ್ಕಾಗಿದೆ. 1981ರದಲ್ಲಿ ಬಂದ ಈ ಸಿನಿಮಾ ಸಿಕ್ಕಾಪಟ್ಟೆ ಫೇಮಸ್.  ಇದೇ ಹೆಸರಿನಲ್ಲಿ ಹೊಸ ಗುರು ಶಿಷ್ಯರು ಈಗ ಬೆಳ್ಳಿತೆರೆ ಮೇಲೆ ಬರೋದಕ್ಕೆ ಸಜ್ಜಾಗಿದ್ದಾರೆ. ಕಾಮಿಡಿ ಅಧ್ಯಕ್ಷ ಶರಣ್ ಈ ಬಾರಿ ಗುರುವಾಗಿ ಶಿಷ್ಯರ ದೊಡ್ಡ ಗ್ಯಾಂಗ್ ಕಂಟಿಕೊಂಡು ಬರುತ್ತಿದ್ದು, ಶಿಕ್ಷಕರ ದಿನದಂದ ಅಂಗವಾಗಿ ಗುರು ಶಿಷ್ಯರು ಟ್ರೈಲರ್ ರಿಲೀಸ್ ಆಗಿದೆ. ಗುರು ಶಿಷ್ಯರು 1995ರಲ್ಲಿ ನಡೆಯೋ ಸ್ಟೋರಿಯ ಸಿನಿಮಾ. ಖೋ ಖೋ ಆಟದ ಸುತ್ತ ಹೆಣೆದಿರೋ ಕಥೆಯಲ್ಲಿ ದೇಸಿಯಾ ಆಟ ಖೋ ಖೋ ಖದರ್ರು, ಪವರ್ಅನ್ನ ತೋರಿಸಲಾಗುತ್ತಿದೆ. ಒಂದು ಊರನ್ನ ಉಳಿಸಿಕೊಳ್ಳಲು ಖೋ ಖೋ ಆಟ ಎಷ್ಟು ಮುಖ್ಯವಾಗುತ್ತೆ ಅನ್ನೋದರನ್ನ ಶರಣ್ ಶಿಷ್ಯರು ತೋರಿಸುತ್ತಾರೆ. ಹೀಗಾಗಿ ಈ ಗುರು ಶಿಷ್ಯರು ಒಂದೊಳ್ಳೆ ಸ್ಪೋರ್ಟ್ಸ್ ಡ್ರಾಮಾ ಅಂತ ಟ್ರೈಲರ್ ತೋರಿಸಿದೆ.  ಗುರು ಶಿಷ್ಯರು ಸಿನಿಮಾದ ಮೈನ್ ಹೈಲೆಟ್ ಕಾಮಿಡಿ ಅಧ್ಯಕ್ಷ ಶರಣ್ ಆದ್ರೆ ಮತ್ತೊಂದ್ ಕಡೆ ಕನ್ನಡ ಚಿತ್ರರಂಗದ ಸ್ಟಾರ್ ಕಿಡ್ಸ್ ನಟಿಸಿದ್ದಾರೆ. ಗುರು ಶಿಷ್ಯರು ಸಿನಿಮಾದಲ್ಲಿ ಶರಣ್ ಮೇಸ್ಟ್ರು ಪಾತ್ರ ಮಾಡಿದ್ದು, 13 ಜನ ಮಕ್ಕಳ ಖೋ ಖೋ ಟೀಂ ಕಟ್ಟುತ್ತಾರೆ. ಆ ಖೋ ಖೋ ಟೀಂನಲ್ಲಿ ಶರಣ್ ಪುತ್ರ ಹೃದಯ್, ಪ್ರೇಮ್ ಪುತ್ರ ಏಕಾಂತ್, ರವಿಶಂಕರ್ ಗೌಡ ಪುತ್ರ ಸೂರ್ಯ, ನವೀನ್ ಕೃಷ್ಣ ಪುತ್ರ ಹರ್ಷಿತ್, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಶಾಸಕ ರಾಜು ಗೌಡ ಪುತ್ರ ಮಣಿಕಂಠ ನಾಯಕ್ ನಟಿಸಿದ್ದಾರೆ. ಇನ್ನುಳಿದ ಏಳು ಜನರನ್ನ ಆಡಿಷನ್ ಮಾಡಿ ಸೆಲೆಕ್ಟ್ ಮಾಡಿದ್ದಾರೆ.

07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
Read more