Aug 19, 2023, 9:02 AM IST
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshit Shetty) ಮತ್ತೊಂದು ಕುಸುರಿ ಸಪ್ತ ಸಾಗರದಾಚೆ ಎಲ್ಲೋ. ಈ ಸಿನಿಮಾ ಮೇಲೆ ಕನ್ನಡ ಸಿನಿ ಪ್ರೇಕ್ಷಕರಿಗೆ ಅದರಲ್ಲೂ ಯುವ ಪ್ರೇಮಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಯಾಕಂದ್ರೆ ಇದೊಂದು ಅದ್ಭುತ ಪ್ರೇಮಕಾವ್ಯ. ಈ ಪ್ರೇಮದ ಕತೆಗೆ ನಾಯಕ ರಕ್ಷಿತ್ ಶೆಟ್ಟಿ, ನಾಯಕಿ ರುಕ್ಮಿಣಿ ವಾಸಂತ್.. ಇದೀಗ ಸಪ್ತ ಸಾಗರದಾಚೆ ಎಲ್ಲೋ ಟ್ರೈಲರ್ ರಿಲೀಸ್(Sapta Sagaradaache Yello) ಆಗಿದೆ. ಕಡಲ ತಡಿಯಲ್ಲಿ ಪ್ರೀತಿಯ ಅಮಲಿನಲ್ಲಿ ರಕ್ಷಿತ್-ರುಕ್ಮಿಣಿ ಕಂಗೊಳಿಸಿದ್ದಾರೆ. ಗೋದಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿಯ ಕಥೆಗಾರ ಹೇಮಂತ್ ಎಂ ರಾವ್ ಕಲ್ಪನೆಯೆ ಸಿನಿಮಾ ಸಪ್ತ ಸಾಗರದಾಚೆ ಎಲ್ಲೋ.. ಎರಡು ಭಾಗದಲ್ಲಿ ಬರ್ತಾ ಇರೋ ಈ ಚಿತ್ರದ ಮೊದಲ ಭಾಗ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಲಿದೆ. ಪ್ರೇಮ, ಪ್ರಣಯ, ದುರಂತಗಳ ಹೂರಣ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದಲ್ಲಿದೆ ಅಂತ ಟ್ರೈಲರ್‌ನಲ್ಲೇ(Trailer) ಗೊತ್ತಾಗುತ್ತೆ. ಹೀಗಾಗಿ ಬೆಂಗಳೂರಿನ ಶಂಕರ್ ನಾಗ್ ಚಿತ್ರಮಂದಿರದಲ್ಲಿ ಸುದ್ದಿಗೋಷ್ಟಿ ಮಾಡಿದ ಚಿತ್ರತಂಡ ಸಿನಿಮಾದ ಟ್ರೈಲರ್‌ನನ್ನ ಪ್ರೇಕ್ಷಕರ ಮಡಿಲಿಗರ್ಪಿಸಿದೆ.
ಇದನ್ನೂ ವೀಕ್ಷಿಸಿ: Today Horoscope: ಇಂದು ಈ ರಾಶಿಯವರಿಗೆ ಅನಗತ್ಯ ವಿಚಾರಗಳಿಂದ ತೊಂದರೆ ಸಾಧ್ಯತೆ