Aug 23, 2023, 9:47 AM IST
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈಗ ಸಪ್ತ ಸಾಗರದಾಚೆ ಎಲ್ಲೋ ತನ್ನ ಪ್ರೀತಿಯನ್ನ ಅರಸಿ ಹೊರಟಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಸಪ್ತ ಸಾಗರದಾಚೆ ಎಲ್ಲೋ ಟ್ರೈಲರ್ ರಿಲೀಸ್ ಆಗಿತ್ತು. ಈ ಟ್ರೈಲರ್ ನೋಡಿದ್ಮೇಲೆ ಗೊತ್ತಾಗಿದ್ದು, ಈ ಸಿನಿಮಾದಲ್ಲಿ ಸಾಗರದಂಥಹಾ ಪ್ರೇಮ ಕತೆ ಇದೆ. ಅದು ತಣ್ಣಗೆ ಹರಿವ ನದಿಯಂಥಹ ಸಿನಿಮಾ ಅಂತ. ಇದೀಗ ಈ ಸಿನಿಮಾದ ಮೇಕಿಂಗ್ ರಿಲೀಸ್(making video) ಆಗಿದೆ. ಲವ್ ಎಮೋಷನ್ ಸ್ಟೋರಿಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ (Sapta Sagaradaache Ello) ಹೇಗೆ ಸಿದ್ಧವಾಯ್ತು ಶೂಟಿಂಗ್ ಹೇಗಿತ್ತು ಅಂತ ಹೇಳುತ್ತಿದೆ ಈ ಮೇಕಿಂಗ್. ಸಪ್ತ ಸಾಗರದಾಚೆ ಎಲ್ಲೋ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ʼಗೋಧಿ ಬಣ್ಣ ಸಾಧಾರಣ ಮೈಕಟ್ಟುʼ ಸಿನಿಮಾ ಖ್ಯಾತಿಯ ನಿರ್ದೇಶಕ ಹೇಮಂತ್ ಎಂ. ರಾವ್.(Director Hemant M. Rao) ಇವರ ಸಿನಿಮಾದಲ್ಲಿ ಸ್ಟ್ರಾಂಗ್ ಕತೆ ಇರುತ್ತೆ. ಅದಕ್ಕೆ ತಕ್ಕಂತಹ ಲೊಕೇಷನ್ಗಳನ್ನ ಹುಡುಕಿ ತುಂಬಾ ಸರಳವಾಗಿ ಸಿನಿಮಾವನ್ನ ಚಿತ್ರೀಕರಸುತ್ತಾರೆ. ಅದನ್ನ ತೆರೆ ಮೇಲೆ ನೋಡಿದಾಗ ರಿಯಲಿಸ್ಟಿಕ್ ಫೀಲ್ ಕೊಡುತ್ತೆ. ಸಪ್ತ ಸಾಗ ಸಾಗರದಾಚೆ ಎಲ್ಲೋ ಸಿನಿಮಾ ಕೂಡ ಹಾಗೆ. ಯವ್ದೇ ಸೆಟ್ ಹಾಕದೇ ರಿಯಲ್ ಪ್ರಪಂಚದ ಮಧ್ಯೆಯೇ ಶೂಟಿಂಗ್ ಮಾಡಿದ್ದಾರೆ. ಪ್ರೀತಿಯ ತೀವ್ರತೆ, ವಿಧಿಯ ಕ್ರೂರತೆ ಈ ಸಿನಿಮಾದ ಹೈಲೆಟ್. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ನಟಿ ರುಕ್ಮಿಣಿ ವಾಸಂತ್ ಡಿ ಗ್ಲಾಮರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮನು ಪಾತ್ರದಲ್ಲಿ ರಕ್ಷಿತ್ ಲವರ್ ಬಾಯ್ ಆಗಿ ಭಿನ್ನ ಹೇರ್ಸ್ಟೈಲ್ ನಲ್ಲಿ ಮಿಂಚುತ್ತಿದ್ರೆ ರುಕ್ಮಿಣಿ ಸರಳವಾದ ಮಿಡಲ್ ಕ್ಲಾಸ್ ಫ್ಯಾಮಿಲಿ ಹುಡುಗಿ ರೀತಿ ಕಾಣಿಸಿದ್ದಾರೆ. ಪರವಃ ಸ್ಟುಡಿಯೋಸ್ ಮೂಲಕ ನಟ ರಕ್ಷಿತ್ ಶೆಟ್ಟಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಈ ಸಿನಿಮಾ ಎರಡು ಪಾರ್ಟ್ನಲ್ಲಿ ಮೂಡಿ ಬರಲಿದೆ. ಸೆಪ್ಟೆಂಬರ್ 1ಕ್ಕೆ ಸಿನಿಮಾದ ಮೊದಲ ಪಾರ್ಟ್ ತೆರೆ ಕಾಣುತ್ತಿದೆ.
ಇದನ್ನೂ ವೀಕ್ಷಿಸಿ: ಮಹಿಳಾ ಡೈರೆಕ್ಟರ್ ಜೊತೆ ರಾಕಿ ಸಿನಿಮಾ: ಯಶ್‌ಗೆ ನಿರ್ದೇಶನ ಮಾಡೋ ಡೈರೆಕ್ಟರ್ ಯಾರು ?