ಅಂತೆ ಕಂತೆ ಅಲ್ಲ, ದುರಂತ ನಾಯಕ ಆಗ್ಬಿಟ್ರಾ ದರ್ಶನ್? ಇಳಿದ ತೂಕ.. ಕಳಾಹೀನ ಮುಖ..!

ಅಂತೆ ಕಂತೆ ಅಲ್ಲ, ದುರಂತ ನಾಯಕ ಆಗ್ಬಿಟ್ರಾ ದರ್ಶನ್? ಇಳಿದ ತೂಕ.. ಕಳಾಹೀನ ಮುಖ..!

Published : Nov 05, 2025, 02:20 PM IST

ಜೈಲಿನ ವಾತಾವರಣ ಹೊಂದದೇ 10 ಕೆಜಿಯಷ್ಟು ತೂಕ ಕಳೆದುಕೊಂಡಿರೋ ದರ್ಶನ್ ಲುಕ್ ಗುರುತೇ ಸಿಗದಷ್ಟು ಪದಲಾಗಿದೆ. ಕೋರ್ಟ್ ನಲ್ಲಿ ಬೆಂಚ್ ಮೇಲೆ ಕುಳಿತ ದರ್ಶನ್ ಫೋಟೊವಂತೂ ಶಾಕಿಂಗ್ ಆಗಿದೆ. ಮುಂದೇನು ಗತಿ?

ಬರೊಬ್ಬರಿ ಎರಡೂವರೇ ತಿಂಗಳ ಬಳಿಕ ಜೈಲಿಂದ ಹೊರಬಂದು, ಕೋರ್ಟ್ ಅಟೆಂಡ್ ಮಾಡಿರೋ ದರ್ಶನ್ (Darshan Thoogudeepa), ಮೇಲೆ ಚಾರ್ಜ್​ಫ್ರೇಮ್ ಮಾಡಲಾಗಿದೆ. ಕೋರ್ಟ್​ಗೆ ಬಂದ ಸ್ಟಾರ್ ನಟ ದರ್ಶನ್ ಅವತಾರ ನೋಡಿದವರು ಶಾಕ್ ಆಗಿದ್ದಾರೆ. 10 ಕೆಜಿಯಷ್ಟು ತೂಕ ಕಳೆದುಕೊಂಡಿರೋ ದರ್ಶನ್ ಮುಖ ಕಳಾಹೀನವಾಗಿದೆ. ನೋಡಲಿಕ್ಕೆ ಆಗದಷ್ಟು ಕೃಶವಾಗಿರೋ ದರ್ಶನ್​ನ ನೋಡ್ತಾ ಇದ್ರೆ, ಈತನನ್ನ ದುರಂತ ನಾಯಕ ಅನ್ನದೇ ವಿಧಿಯಿಲ್ಲ.

ಎರಡೂವರೇ ತಿಂಗಳ ಬಳಿಕ ಹೊರಜಗತ್ತಿನ ದರ್ಶನ..!

ಸುಪ್ರೀಂ ಕೋರ್ಟ್ ಬೇಲ್ ರದ್ದು ಮಾಡಿದ  ಎರಡೂವರೇ ತಿಂಗಳ ಬಳಿಕ ದರ್ಶನ್​ಗೆ ಹೊರಜಗತ್ತಿನ ದರ್ಶನವಾಗಿದೆ. ಸೋಮವಾರ 64ನೇ ಸಿಸಿಎಚ್ ಕೋರ್ಟ್​ಗೆ ಬಂದ ದಾಸನ ಅವತಾರ ಕಂಡು ಫ್ಯಾನ್ಸ್ ಶಾಕ್ ಆಗಿದ್ದಾರೆ.

ಜೈಲಿನ ವಾತಾವರಣ ಹೊಂದದೇ 10 ಕೆಜಿಯಷ್ಟು ತೂಕ ಕಳೆದುಕೊಂಡಿರೋ ದರ್ಶನ್ ಲುಕ್ ಗುರುತೇ ಸಿಗದಷ್ಟು ಪದಲಾಗಿದೆ. ಕೋರ್ಟ್ ನಲ್ಲಿ ಬೆಂಚ್ ಮೇಲೆ ಕುಳಿತ ದರ್ಶನ್ ಫೋಟೊವಂತೂ ಶಾಕಿಂಗ್ ಆಗಿದೆ.

ಮುಖ ಬಾಡಿದೆ.. ಕಣ್ಣುಗಳಲ್ಲಿ ಕಾಂತಿಯಿಲ್ಲ.. ಗಲ್ಲ ಒಳಗೆ ಹೋಗಿದೆ. ನೆರೆತ ಕೂದುಲು.. ಗಡ್ಡ.. ಅರೇ ಇದು ಕನ್ನಡ ಚಿತ್ರರಂಗದಲ್ಲಿ ಚಕ್ರವರ್ತಿಯಂತೆ ಮೆರೆದ ದಾಸನಾ ಅಂತ ಫ್ಯಾನ್ಸ್ ಕನ್​ಫ್ಯೂಸ್ ಆಗಬೇಕು ಹಾಗಿದೆ ದರ್ಶನ್ ಅವತಾರ.

ಅಸಲಿಗೆ ಜೈಲು ಎಂಥವರನ್ನೂ ಜರ್ಜರಿತರನ್ನಾಗಿ ಮಾಡಿಬಿಡುತ್ತೆ. ಮಾನಸಿಕವಾಗಿ ದೈಹಿಕವಾಗಿ ಕುಗ್ಗಿಸಿಬಿಡುತ್ತೆ. ದರ್ಶನ್​ ರೀತಿ ಹೊರಗಡೆ ಐಷಾರಾಮಿಯಾಗಿ ಬದುಕಿದವರಂತೂ ಜೈಲಿನ ವಾತಾವರಣದಲ್ಲಿ ಕಂಗಾಲಾಗಿ ಬಿಡ್ತಾರೆ.. ಸದ್ಯ ದರ್ಶನ್​ಗೂ ಅದೇ ಆಗಿರೋದು.

ಡಿ-ಗ್ಯಾಂಗ್ ಮೇಲೆ ದೋಷಾರೋಪ ಮಾಡಿದ ಕೋರ್ಟ್
ಹೌದು ಎ-1 ಪವಿತ್ರಾ, ಎ-2 ದರ್ಶನ್ ಸೇರಿದಂತೆ ರೇಣುಕಾಸ್ವಾಮಿ ಮರ್ಡರ್ ಕೇಸ್​​ನ ಆರೋಪಿಗಳ ಮೇಲೆ ಏನೆಲ್ಲಾ ಆರೋಪ ಇದೆಯೋ ಅದೆಲ್ಲವನ್ನ ನ್ಯಾಯಾದೀಶರು ಓದಿ ಹೇಳಿ,  ನಿಮ್ಮ ವಿರುದ್ದ ಇಂತಿಂಥಾ ಆರೋಪಗಳಿವೆ ಅಂತ ಚಾರ್ಜ್ ಫ್ರೆಮ್ ಮಾಡಿದ್ದಾರೆ.

ನಟ ದರ್ಶನ್ ವಿರುದ್ದ  ಒಂದಲ್ಲ ಎರಡಲ್ಲ ಬರೊಬ್ಬರಿ 11 ಸೆಕ್ಷನ್ ಹಾಕಲಾಗಿದೆ. ಈ ಎಲ್ಲಾ ಆರೋಪಗಳನ್ನ ಕೋರ್ಟ್ ದರ್ಶನ್ ಮೇಲೆ ಹೊರಿಸಿದ್ದು, ನಾನೇನು ಮಾಡಿಲ್ಲ ಸ್ವಾಮಿ ಅಂತ ದಾಸ ಅಲವತ್ತುಕೊಂಡಿದ್ದಾನೆ. ಆದ್ರೆ ಆರೋಪಿ ನಾ ಮಾಡಿಲ್ಲ ಅಂದಕೂಡಲೇ ಕೇಸ್ ಮುಗಿಯಲ್ಲ. ನವೆಂಬರ್ 10ರಿಂದ ಸಾಕ್ಷಿಗಳ ವಿಚಾರಣೆ ಮಾಡೋದಕ್ಕೆ ಕೋರ್ಟ್ ಆದೇಶ ನೀಡಿದೆ.

ಮುಂದಿನ ದಿನಗಳಲ್ಲಿ ಸಾಕ್ಷಿಗಳ ವಿಚಾರಣೆ ನಡೆಯಲಿದೆ. ಆ ಸಾಕ್ಷಿಗಳು, ಆಧಾರಗಳು, ಫೋರೆನ್ಸಿಕ್ ವರದಿ, ಟೆಕ್ನಿಕಲ್ ಎವಿಡೆನ್ಸ್​ಗಳು ದಾಸನ ಮುಂದಿನ ಭವಿಷ್ಯವನ್ನ ನಿರ್ಧಾರ ಮಾಡಲಿವೆ. ಒಟ್ಟಾರೆ ದರ್ಶನ್ ಸ್ಥಿತಿ ನೊಡಿದ್ರೆ  ಈತನನ್ನ ದುರಂತ ನಾಯಕ ಅಂತ ಕರೆಯದೇ ವಿಧಿಯಿಲ್ಲ..! ಹೆಚ್ಚಿನ ಮಾಹಿತಿಗೆ ವಿಡಿಯೋ ನೊಡಿ.. 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more