ನೀವು ಸಾಕಿದ, ಬೆಳೆಸಿದ ದ್ವಾರಕೀಶ್ ಚೆನ್ನಾಗಿದ್ದೀನಿ; ವದಂತಿಗೆ ಬ್ರೇಕ್ ಹಾಕಿದ ನಿರ್ಮಾಪಕ ದ್ವಾರಕೀಶ್

Apr 30, 2023, 2:03 PM IST

ಸ್ಯಾಂಡಲ್‌ವುಡ್‌ನ ಹಿರಿಯ ನಿರ್ಮಾಪಕ, ನಟ ದ್ವಾರಕೀಶ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ದ್ವಾರಕೀಶ್ ಇನ್ನಿಲ್ಲ ಎನ್ನುವ ಸುದ್ದಿ ವೈರಲ್ ಆಗುತ್ತು. ಈ ಬಗ್ಗೆ ಸ್ವತಃ ದ್ವಾರಕೀಶ್ ಅವರೇ ಪ್ರತಿಕ್ರಿಯೆ ನೀಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ನಮಸ್ಕಾರ...ನಮಸ್ಕಾರ...ನಮಸ್ಕಾರ...ನಾನು ದ್ವಾರಕೀಶ್, ನೀವು ಸಾಕಿದ ದ್ವಾರಕೀಶ್, ಬೆಳೆಸಿದ ದ್ವಾರಕೀಶ್..ಚೆನ್ನಾಗಿದ್ದೀನಿ. ನಿಮ್ಮೆಲ್ಲರ ಆಶೀರ್ವಾದ ನನಗೆ ಬೇಕು. ಗಟ್ಟಿಮುಟ್ಟಾಗಿದ್ದೀನಿ. ಯಾವುದೇ ಚಿಂತೆ ಇಲ್ಲ, ನಗ್ತಾ ಇದ್ದೀನಿ. ನಿಮ್ಮ ಪ್ರೀತಿ, ವಿಶ್ವಾಸ ಹೀಗೆ ಇರಲಿ. ನಿಮ್ಮೆಲ್ಲರ ಆಶೀರ್ವಾದ ಇರೋವರೆಗೂ ನನಗೆ ಏನು ಆಗಲ್ಲ' ಎಂದುದ್ವಾರಕೀಶ್ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.