'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!

'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!

Published : Dec 17, 2025, 03:53 PM IST

45 ಟ್ರೈಲರ್ ನೋಡ್ತಾ ಇದ್ರೆ ಇದು ಯಾವ ಲೆವೆಲ್ ಮೂವಿ ಅನ್ನೋದು ಗೊತ್ತಾಗುತ್ತೆ. ಅರ್ಜುನ್ ಜನ್ಯ ಕಲ್ಪನೆಯ ಈ ಫ್ಯಾಂಟಸಿ ಸಿನಿಮಾ ತೆರೆಗೆ ತರೋದಕ್ಕೆ ನಿರ್ಮಾಪಕ ರಮೇಶ್ ರೆಡ್ಡಿ ನೀರಿನಂತೆ ಹಣ  ಖರ್ಚು ಮಾಡಿದ್ದಾರೆ. ಹಾಲಿವುಡ್ ತಂತ್ರಜ್ಞರೇ ಚಿತ್ರದ ವಿ ಎಫ್ ಎಕ್ಸ್ ವರ್ಕ್ ಮಾಡಿಕೊಟ್ಟಿದ್ದಾರೆ..

ಸೆಂಚ್ಯುರಿ ಸ್ಟಾರ್ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ  ಮತ್ತು ರಾಜ್ ಬಿ ಶೆಟ್ಟಿ ನಟಿಸಿರೋ ಬಹುನಿರೀಕ್ಷೆಯ 45 ಸಿನಿಮಾ ರಿಲೀಸಿಗೆ ಇನ್ನು ಸ್ವಲ್ಪ ದಿನಗಳಷ್ಟೇ ಬಾಕಿ ಇವೆ. ರಿಲೀಸ್ ಹೊಸ್ತಿಲಲ್ಲಿ 45 ಟ್ರೈಲರ್ ಹೊರಬಂದಿದ್ದು, ತ್ರಿಮೂರ್ತಿಗಳ ಫ್ಯಾನ್ಸ್ಗೆ ಸಖತ್ ಸರ್ಫ್ರೈಸ್ ಕೊಟ್ಟಿದೆ.

ತ್ರಿಮೂರ್ತಿಗಳ 45 ಸಿನಿಮಾ ಟ್ರೈಲರ್ ಲಾಂಚ್
ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ರಾಜ್ ಬಿ ಶೆಟ್ಟಿ ನಟಿಸಿರುವ 45 ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಮೂವರು ದಿಗ್ಗಜರ ಸಿನಿಮಾ ಹೇಗಿರುತ್ತೆ ಅಂತ ಫ್ಯಾನ್ಸ್ ನಿರೀಕ್ಷೆ ಮಾಡಿದ್ರೋ ಆ ನಿರೀಕ್ಷೆಯನ್ನು ಮೀರಿಸುವ ಹಾಗಿದೆ 45 ಸಿನಿಮಾದ ಟ್ರೈಲರ್. ತ್ರಿಮೂರ್ತಿಗಳನ್ನು ಸೇರಿಸಿ ನಿರ್ದೇಶಕ  ಅರ್ಜುನ್ ಜನ್ಯ ವಿಭಿನ್ನವಾದ ಕಥೆಯೊಂದನ್ನು ಹೇಳೋಕೆ ಹೊರಟಿರೋದು ಗೊತ್ತಾಗ್ತಾ ಇದೆ .

ಹಾಲಿವುಡ್ ರೇಂಜ್ ಮೇಕಿಂಗ್.. ತ್ರಿಬಲ್ ಧಮಾಕಾ
ಹೌದು 45 ಟ್ರೈಲರ್ ನೋಡ್ತಾ ಇದ್ರೆ ಇದು ಯಾವ ಲೆವೆಲ್ ಮೂವಿ ಅನ್ನೋದು ಗೊತ್ತಾಗುತ್ತೆ. ಅರ್ಜುನ್ ಜನ್ಯ ಕಲ್ಪನೆಯ ಈ ಫ್ಯಾಂಟಸಿ ಸಿನಿಮಾ ತೆರೆಗೆ ತರೋದಕ್ಕೆ ನಿರ್ಮಾಪಕ ರಮೇಶ್ ರೆಡ್ಡಿ ನೀರಿನಂತೆ ಹಣ  ಖರ್ಚು ಮಾಡಿದ್ದಾರೆ. ಹಾಲಿವುಡ್ ತಂತ್ರಜ್ಞರೇ ಚಿತ್ರದ ವಿ ಎಫ್ ಎಕ್ಸ್ ವರ್ಕ್ ಮಾಡಿಕೊಟ್ಟಿದ್ದಾರೆ

ರಾಜ್ ಶೆಟ್ಟಿ ಸೌಮ್ಯ ರೂಪ.. ಶಿವಣ್ಣ, ಉಪ್ಪಿ ಉಗ್ರಾವತಾರ
45 ಟ್ರೈಲರ್ ನಲ್ಲಿ ಮೂವರು ಸ್ಟಾರ್ ಗಳ ಅವತಾರ ಒಂದೊಂದು ರೀತಿ ಇದೆ. ರಾಜ್ ಸೌಮ್ಯ ರೂಪಿ ಯಾಗಿದ್ರೆ ಶಿವಣ್ಣ ಮತ್ತು ಉಪ್ಪಿ ವಿಭಿನ್ನ ವಿಶೇಷ ಗೆಟಪ್ ಗಳಲ್ಲಿ ಮಿಂಚ್ತಾ ಇದಾರೆ.

ಶಿವಣ್ಣನ ಲೇಡಿ ಗೆಟಪ್.. ಏನಿದು 45 ಸೀಕ್ರೆಟ್?
ಹೌದು, ಎಲ್ಲಕ್ಕಿಂತ ಸರ್ ಪ್ರೈಸ್ ಅಂದ್ರೆ ಟ್ರೈಲರ್ ನಲ್ಲಿರೋ ಶಿವಣ್ಣನ ಲೇಡಿ ಗೆಟಪ್ . ಅಣ್ಣಾವ್ರ 'ಚೆಲುವೆಯ ನೋಟ ಚೆನ್ನ' ಹಾಡಿನ ಬಿಟ್ ಜೊತೆ ಶಿವಣ್ಣ ಲೇಡಿ ಗೆಟಪ್ ನಲ್ಲಿ ಕಾಣಿಸಿ ಕೊಂಡಿದ್ದು ಕಂಡು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಏನಿದರ ಹಿಂದಿನ ಸೀಕ್ರೆಟ್ ಅಂತ ತಲೆಗೆ ಹುಳ ಬಿಟ್ಟುಕೊಂಡಿದಾರೆ.

45 ಟ್ರೇಲರ್ ಲಾಂಚ್ ಇವೆಂಟ್ 8 ಜಿಲ್ಲೆಗಳಲ್ಲಿ ಲೈವ್ ನಲ್ಲಿ ಪ್ರಸಾರ ಆಗಿದೆ. ಅದ್ದೂರಿಯಾಗಿ ನಡೆದ ಇವೆಂಟ್ ನಲ್ಲಿ ಲಾಂಚ್ ಆಗಿರೋ ಟ್ರೈಲರ್ ಸಿನಿಮಾ ಕುರಿತ ನಿರೀಕ್ಷೆಯನ್ನ ಡಬಲ್ ಮಾಡಿದೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...

05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
Read more