ಶಿವಣ್ಣ ಮನೆಯಲ್ಲಿ ಭಾರೀ ಮೀಟಿಂಗ್, ಅಖಾಡಕ್ಕಿಳಿದ ದೊರೆ ಜೊತೆ ಗುಪ್ತ್ ಗುಪ್ತ್ ಸಭೆ..!

ಶಿವಣ್ಣ ಮನೆಯಲ್ಲಿ ಭಾರೀ ಮೀಟಿಂಗ್, ಅಖಾಡಕ್ಕಿಳಿದ ದೊರೆ ಜೊತೆ ಗುಪ್ತ್ ಗುಪ್ತ್ ಸಭೆ..!

Published : May 19, 2025, 03:24 PM IST

ಸ್ಯಾಂಡಲ್​ವುಡ್​ಗೆ ಒಬ್ಬ ಲೀಡರ್ ಸಿಕ್ಕಾಗಿದೆ. ಇಂಡಸ್ಟ್ರಿಯ ಮುಂದಾಳತ್ವ ವಹಿಸೋದಕ್ಕೆ ಇಂಡಸ್ಟ್ರಿಯ ಸಮಸ್ಯೆಗಳನ್ನ ಬಗೆಹರಿಸೋದಕ್ಕೆ ನಾನು ಸಿದ್ದ ಅಂತ ಒಬ್ಬ ಸೀನಿಯರ್ ಸ್ಟಾರ್ ಸಜ್ಜಾಗಿ ನಿಂತಿದ್ದಾರೆ. ಅದು ಬೇರ್ಯಾರೂ ಅಲ್ಲ ದೊಡ್ಮನೆ ದೊಡ್ಮಗ..

ಸ್ಯಾಂಡಲ್​ವುಡ್​​ನ ಇವತ್ತಿನ ದುಸ್ಥಿತಿಗೆ ನಾಯಕತ್ವದ ಕೊರತೆ ಕಾರಣ ಅನ್ನೋ ಮಾತು ಬಹುದಿನಗಳಿಂದ ಕೇಳಿ ಬರ್ತಾ ಇದೆ. ಯಾವ ನಾಯಕರೂ ಲೀಡರ್​ಶಿಪ್ ವಹಿಸಿಕೊಳ್ತಾ ಇಲ್ಲ ಅನ್ನೋ ದೂರು ಇದೆ. ಆದ್ರೆ ಆ ದೂರಿಗೆ ಕೊನೆಗೂ ಈಗ ಮುಕ್ತಿ ಸಿಕ್ಕಿದೆ. ಇಂಡಸ್ಟ್ರಿಯ ಸಮಸ್ಯೆಗಳನ್ನ ಸಾಲ್ವ್ ಮಾಡಲಿಕ್ಕೆ ಒಬ್ಬ ಲೀಡರ್ ಅಖಾಡಕ್ಕೆ ಇಳಿದಿದ್ದಾರೆ.  ಆ ಲೀಡರ್ ಉಳಿದ ಸ್ಟಾರ್ಸ್​ಗೆ ಉಳಿದ ವಾರ್ನಿಂಗ್ ಕೂಡ ಮಾಡಿದ್ದಾರೆ. 

ಯೆಸ್, ಸ್ಯಾಂಡಲ್​ವುಡ್​ಗೆ ಒಬ್ಬ ಲೀಡರ್ ಸಿಕ್ಕಾಗಿದೆ. ಇಂಡಸ್ಟ್ರಿಯ ಮುಂದಾಳತ್ವ ವಹಿಸೋದಕ್ಕೆ ಇಂಡಸ್ಟ್ರಿಯ ಸಮಸ್ಯೆಗಳನ್ನ ಬಗೆಹರಿಸೋದಕ್ಕೆ ನಾನು ಸಿದ್ದ ಅಂತ ಒಬ್ಬ ಸೀನಿಯರ್ ಸ್ಟಾರ್ ಸಜ್ಜಾಗಿ ನಿಂತಿದ್ದಾರೆ. ಅದು ಬೇರ್ಯಾರೂ ಅಲ್ಲ ದೊಡ್ಮನೆ ದೊಡ್ಮಗ,  ಸೆಚ್ಯೂರಿ ಸ್ಟಾರ್ ಶಿವರಾಜ್​ಕುಮಾರ್..

ಕನ್ನಡ ಚಿತ್ರರಂಗ ಇವತ್ತು ನಾನಾ ಸಮಸ್ಯೆಗಳನ್ನ ಎದುರಿಸ್ತಾ ಇದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಮುಚ್ತಾ ಇವೆ. ಮಲ್ಟಿಪ್ಲೆಕ್ಸ್​​ಗಳಲ್ಲಿ ಕನ್ನಡ ಸಿನಿಮಾಗಳಿಗೆ ಸ್ಕ್ರೀನ್ ಸಿಕ್ತಾ ಇಲ್ಲ. ದೊಡ್ಡ ಸ್ಟಾರ್​ಗಳು ಬೇಗ ಬೇಗ ಸಿನಿಮಾ ಮಾಡ್ತಾ ಇಲ್ಲ. ಹೊಸಬರ ಸಿನಿಮಾಗಳಿಗೆ ಜನ ಬರ್ತಾ ಇಲ್ಲ. ಓಟಿಟಿಗಳು ಕನ್ನಡ ಸಿನಿಮಾಗಳನ್ನ ಕೊಂಡುಕೊಳ್ತಾ ಇಲ್ಲ. ಇದರ ನಡುವೆ ನೂರೆಂಟು ವಿವಾದಗಳು, ಹಾದಿ ಬೀದಿಗೊಂಡು ಫಿಲ್ಮ್ ಚೇಂಬರ್ ಗಳು.. ಯಾರ ಮಾತು ಯಾರೂ ಕೇಳ್ತಾ ಇಲ್ಲ..  ಟೋಟಲಿ ಸ್ಯಾಂಡಲ್​ವುಡ್​ ದಿಕ್ಕುತಪ್ಪಿದೆ.

ಕನ್ನಡ ಚಿತ್ರರಂಗದ ಈ ಸ್ಥಿತಿಗೆ ನಾಯಕತ್ವದ ಕೊರತೆಯೇ ಕಾರಣ ಅನ್ನೋ ಮಾತು ಬಹುದಿನಗಳಿಂದ  ಇದೆ. ರೆಬೆಲ್ ಸ್ಟಾರ್ ಅಂಬರೀಶ್ ಅಗಲಿಕೆ ನಂತರ ಶಿವರಾಜ್​ಕುಮಾರ್ ಇಂಡಸ್ಟ್ರಿಯ ನಾಯಕತ್ವದ ಹೊಣೆ ಹೊರಬೇಕು ಅನ್ನೋದು ಎಲ್ಲರ ಬೇಡಿಕೆಯಾಗಿತ್ತು.ಆದ್ರೆ ಅದ್ಯಾಕೋ ಶಿವಣ್ಣ ಮನಸು ಮಾಡಿರಲಿಲ್ಲ. ಈ ನಡುವೆ ತಮ್ಮ ಅನಾರೋಗ್ಯದ ಸಮಸ್ಯೆಗಳ ನಡುವೆ ಶಿವಣ್ಣ ಸೈಲೆಂಟ್ ಆಗಿದ್ರು. ಆದ್ರೆ ಈಗ ಪರಿಸ್ಥೀತಿ ಕೈಮೀರಿ ಹೋಗ್ತಾ ಇರೋದನ್ನ ನೋಡಿ ಶಿವಣ್ಣ ಅಖಾಡಕ್ಕೆ ಇಳಿದಿದ್ದಾರೆ.  ಶಿವರಾಜ್​ಕುಮಾರ್ ಮನೆಯಲ್ಲಿ ಒಂದು ಹೈವೋಲ್ಟೇಜ್ ಮೀಟಿಂಗ್ ನಡೆದಿದೆ.

ಹಲವು ನಿರ್ಮಾಪಕರು, ವಿತರಕರು, ಪ್ರದರ್ಶಕರು ಮತ್ತು  ಗಣೇಶ್, ದುನಿಯಾ ವಿಜಯ್, ಧ್ರುವ ಸೇರಿದಂತೆ ಹಲವು ನಾಯಕರು ಕೂಡ ಈ ಮೀಟಿಂಗ್​ನಲ್ಲಿ ಭಾಗಿಯಾಗಿದ್ದು ಇಂಡಸ್ಟ್ರಿಯ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಸಿಎಂನ ಭೇಟಿ ಮಾಡಿ ಇಂಡಸ್ಟ್ರಿಯ ಸಮಸ್ಯೆಗಳ ಬಗ್ಗೆ ಸರ್ಕಾರದಿಂದ ಸಹಾಯ ಕೋರಲು ಪ್ಲಾನ್ ಮಾಡಲಾಗಿದೆ. 

ಹೌದು ನಮ್ಮ ಸ್ಯಾಂಡಲ್​ವುಡ್​​ನ ದೊಡ್ಡ ಸಮಸ್ಯೆ ಅಂದ್ರೆ ನಮ್ಮ ಸ್ಟಾರ್​ಗಳು ಸಿಕ್ಕಾಪಟ್ಟೆ ಚ್ಯೂಸಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಹುಚ್ಚಿಗೆ ಬಿದ್ದಿರೋ ಸ್ಟಾರ್ಸ್, ಸಣ್ಣ ಸಿನಿಮಾಗಳನ್ನ ಮಾಡೋದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ನೂರಾರು ಕೋಟಿ ವೆಚ್ಚದ ಪ್ಯಾನ್ ಇಂಡಿಯಾ ಸಿನಿಮಾ ಮಾಡಲಿಕ್ಕೆ ವರ್ಷಾನುಗಟ್ಟಳೇ ಸಮಯ ಬೇಕು. ಸೋ ಸ್ಟಾರ್ಸ್ ಸಿನಿಮಾಗಳು ಬೇಗ ಬರ್ತಾ ಇಲ್ಲ. ಸಹಜವಾಗೇ  ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರೋದು ಕಡಿಮೆಯಾಗೋದಕ್ಕೆ ಇದು ಕಾರಣವಾಗಿದೆ.  ನಿಮಗೆಲ್ಲಾ ಗೊತ್ತಿರೋ ಹಾಗೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೊನೆ ಸಿನಿಮಾ ರಿಲೀಸ್ ಆಗಿ ಮೂರು ವರ್ಷದ ಮೇಲಾಯ್ತು ಅವರ ಮುಂದಿನ ಚಿತ್ರ ಟಾಕ್ಸಿಕ್ ತೆರೆಗೆ ಬರೋದು ಮುಂದಿನ ವರ್ಷ,

ಯಶ್ ದೊಡ್ಡ ಕನಸಿನೊಂದಿಗೆ ದೊಡ್ಡ ಪ್ರಾಜೆಕ್ಟ್ ಮಾಡ್ತಾ ಇದ್ದಾರೆ. ಆದ್ರೆ ಜನರನ್ನ ಚಿತ್ರಮಂದಿರಕ್ಕೆ ಕರೆತರಬಲ್ಲ ಸ್ಟಾರ್ 4 ವರ್ಷಕ್ಕೊಂದು ಸಿನಿಮಾ ಮಾಡಿದ್ರೆ ಇಂಡಸ್ಟ್ರಿ ಗತಿ ಏನು..? ಕಿಚ್ಚ ಸುದೀಪ್ ಕೂಡ ಎರಡು-ಮೂರು ವರ್ಷಕ್ಕೊಂದು ಸಿನಿಮಾ ಮಾಡ್ತಾ ಇದ್ದಾರೆ. ಧ್ರುವ ಕೂಡ ಭಯಂಕರ ಚ್ಯೂಸಿ. ಹೀಗಾದ್ರೆ ಕಷ್ಟ. ಕನಿಷ್ಟ ವರ್ಷಕ್ಕೊಂದು ಸಿನಿಮಾ ಮಾಡಿ, ಇಲ್ಲದೇ ಹೋದ್ರೆ ನಮ್ಮ ಇಂಡಸ್ಟ್ರಿ ಇನ್ನೂ ಸಂಕಷ್ಟಕ್ಕೆ ಸಿಲುಕುತ್ತೆ ಅಂತ ಶಿವಣ್ಣ ವಾರ್ನ್ ಮಾಡಿದ್ದಾರೆ.

ಒಟ್ನಲ್ಲಿ ಇಂಡಸ್ಟ್ರಿಯ ಸಮಸ್ಯೆಗಳನ್ನ ಬಗೆ ಹರಿಸೋ ನಿಟ್ಟಿನಲ್ಲಿ ಒಂದು ಹೆಜ್ಜೆಯನ್ನ ಇಟ್ಟಾಗಿದೆ. ಅದ್ರಲ್ಲೂ ಶಿವಣ್ಣ ಲೀಡರ್ ಶಿಪ್ ವಹಿಸಿಕೊಂಡಾಗಿದೆ. ಮುಂದಿನ ದಿನಗಳಲ್ಲಿ ಶಿವಣ್ಣನ ನಾಯಕತ್ವದಲ್ಲಿ ಚಿತ್ರರಂಗದ ಸಮಸ್ಯೆಗಳು ಬಗೆಹರಿಯಲಿ.. ಸ್ಯಾಂಡಲ್​ವುಡ್​ ಮತ್ತೆ ಶೈನ್ ಆಗಲಿ ಅನ್ನೋದೇ ಸಿನಿಪ್ರಿಯರ ಹಾರೈಕೆ.

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
Read more