Dec 29, 2023, 10:18 AM IST
ಈ ವರ್ಷ ಎಲ್ಲರ ಗಮನ ಸೆಳೆದ ಕ್ಯೂಟ್ ಜೋಡಿ ಅಂದರೆ ಗ್ಲ್ಯಾಮರ್ ಬೆಡಗಿ ಹರಿಪ್ರಿಯಾ(Haripriya ) ಹಾಗೂ ಕಂಚಿನ ಕಂಠದ ನಟ ವಸಿಷ್ಠ ಸಿಂಹ (Vasishta Simha). ಕೆಲ ವರ್ಷಗಳಿಂದ ಇವರಿಬ್ಬರೂ ಗಪ್-ಚುಪ್ ಆಗೇ ಪ್ರೀತಿಸ್ತಿದ್ರು. ಕೊನೆಗೆ 2023ರಲ್ಲಿ ಶಾಸ್ತ್ರೋಕ್ತವಾಗಿ ಮದುವೆ(Marriage) ಆಗೋದರ ಮೂಲಕ ಸಿಂಹಪ್ರಿಯಾ ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು. ಮುಂಗಾರುಮಳೆ ಬೆಡಗಿ ಎಂದೇ ಪೂಜಾಗಾಂಧಿ ಕೂಡ, ಇದೇ ವರ್ಷ ತಾವು ಪ್ರೀತಿಸಿದ ಹುಡುಗ, ಉದ್ಯಮಿ ವಿಜಯ್ ಘೋರ್ಪಡೆ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಂತ್ರ ಮಾಂಗಲ್ಯದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಪೂಜಾ(Pooja Gandhi) ಅವರ ಸರಳ ಮದುವೆ ಎಲ್ಲರ ಗಮನ ಸೆಳೆಯಿತು. ಇದೇ 2023ರಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಮಗ ಅಭಿಷೇಕ್ ಅಂಬರೀಶ್, ಇವರು ಫ್ಯಾಷನ್ ಐಕಾನ್ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಬಿದ್ದಪ್ಪ ಜೊತೆ ಸಪ್ತಪದಿ ತುಳಿದರು. ಹಲವು ವರ್ಷಗಳಿಂದ ಅವಿವಾ ಬಿದ್ದಪ್ಪನನ್ನು ಪ್ರೀತಿಸುತ್ತಿದ್ದ ಅಭಿಷೇಕ್ ಅಂಬರೀಶ್ ಜೂನ್ 5ರಂದು ಬೆಂಗಳೂರಿನ(Bengaluru) ಅರಮನೆ ಮೈದಾನದಲ್ಲಿ ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕನ್ನಡ ಚಿತ್ರರಂಗದಲ್ಲಿ ನಾವಿಬ್ಬರು ಆತ್ಮೀಯ ಸ್ನೇಹಿತರು ಎಂದೇ ಹೇಳಿಕೊಳ್ಳುತ್ತಿದ್ದ ಜೋಡಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ. ಈ ಜೋಡಿ ನಾವಿಬ್ಬರು ಪ್ರೇಮಿಗಳು. ಈ ವರ್ಷ ಮದುವೆ ಆಗ್ತಾ ಇದ್ದೇವೆ ಎಂದು ಚಿತ್ರರಂಗಕ್ಕೆ ಸರ್ಪ್ರೈಸ್ ಕೊಟ್ಟಿದರು. ಆಗಸ್ಟ್ ತಿಂಗಳಲ್ಲಿ ಹರ್ಷಿಕಾ ಹಾಗೂ ಭುವನ್ ಕೊಡವ ಸಂಪ್ರದಾಯದಂತೆ ಹಸೆಮಣೆ ಏರಿದರು. ಮಾಜಿ ಬಿಗ್ ಬಾಸ್ ಸ್ಪರ್ಧಿ ಒಳ್ಳೆ ಹುಡುಗ ಪ್ರಥಮ್ ಅವರು ಭಾನುಶ್ರೀ ಎಂಬವರ ಜೊತೆ ಮದುವೆ ಆದರು. ಜೂನ್ ತಿಂಗಳಲ್ಲಿ ಭಾನುಶ್ರೀ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರಥಮ್ ನವೆಂಬರ್ ತಿಂಗಳಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇದನ್ನೂ ವೀಕ್ಷಿಸಿ: Kaatera: 300 ಶೋ ಟಿಕೆಟ್ ಸೋಲ್ಡ್ ಔಟ್..! ಕಾಟೇರ ರೊಮ್ಯಾಂಟಿಕ್ ಸಾಂಗ್ ಬಿಡುಗಡೆ..!