2025ಕ್ಕೆ ನೂರೆಂಟು ನಿರೀಕ್ಷೆ, ಸಾಲು ಸಾಲು ಮೂವಿ, ಪ್ಯಾನ್ ಇಂಡಿಯಾ ಮೋಡಿ ಮಾಡಲು ಸ್ಯಾಂಡಲ್​ವುಡ್ ಸಜ್ಜು!

2025ಕ್ಕೆ ನೂರೆಂಟು ನಿರೀಕ್ಷೆ, ಸಾಲು ಸಾಲು ಮೂವಿ, ಪ್ಯಾನ್ ಇಂಡಿಯಾ ಮೋಡಿ ಮಾಡಲು ಸ್ಯಾಂಡಲ್​ವುಡ್ ಸಜ್ಜು!

Published : Jan 02, 2025, 07:12 PM ISTUpdated : Jan 02, 2025, 07:17 PM IST

2025ರಲ್ಲಿ ಕೆಜಿಎಫ್ ಸ್ಟಾರ್ ಯಶ್ ಅವರ ಟಾಕ್ಸಿಕ್, ಕಾಂತಾರ ಪ್ರಿಕ್ವೆಲ್, ಕೆಡಿ, 45 ಮತ್ತು ಡೆವಿಲ್ ಸೇರಿದಂತೆ ಹಲವು ಬಿಗ್ ಬಜೆಟ್ ಸಿನಿಮಾಗಳು ತೆರೆಗೆ ಬರಲಿವೆ. ಈ ಚಿತ್ರಗಳು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವ ನಿರೀಕ್ಷೆಯಿದೆ.

ಮ್ಯಾಕ್ಸ್ ಸಕ್ಸಸ್ ಮೂಲಕ ಖುಷಿ ಖುಷಿಯಾಗಿ ವರ್ಷಾರಂಭ ಮಾಡಿರೋ ಸ್ಯಾಂಡಲ್​ವುಡ್ ಹೊಸ ವರ್ಷ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದೆ. 2025ರಲ್ಲಿ ಹಲವು ಬಿಗ್ ಸ್ಟಾರ್​ಗಳ ಬಹುನಿರೀಕ್ಷೆಯ ಸಿನಿಮಾಗಳು ತೆರೆಗೆ ಬರೋ ತಯಾರಿಯಲ್ಲಿವೆ. ಈ ವರ್ಷ ಮತ್ತೆ ಪ್ಯಾನ್ ಇಂಡಿಯಾ ಮ್ಯಾಜಿಕ್ ಮಾಡೋಕೆ ಕನ್ನಡ ಚಿತ್ರರಂಗ ಸಜ್ಜಾಗಿದೆ.
 
2022ರಲ್ಲಿ ಕೆಜಿಎಫ್-2, ಕಾಂತಾರ ಸಿನಿಮಾಗಳ ಸಕ್ಸಸ್​ನಿಂದ ಸ್ಯಾಂಡಲ್​ವುಡ್​ ಪ್ಯಾನ್ ಇಂಡಿಯಾ ಸದ್ದು ಸುದ್ದಿ ಮಾಡಿತ್ತು. ಆದ್ರೆ 2023, 2024ರಲ್ಲಿ ಕನ್ನಡ ಸಿನಿಮಾಗಳು ಅಷ್ಟಾಗಿ ಗಡಿಯಾಚೆ ಸೌಂಡ್ ಮಾಡ್ಲಿಲ್ಲ. ಆದ್ರೆ 2025ರಲ್ಲಿ ಮಾತ್ರ ಮತ್ತೆ ಹಳೆಯ ಫಾರ್ಮ್​ಗೆ ಬರೋಕೆ ಸ್ಯಾಂಡಲ್​ವುಡ್ ಸಜ್ಜಾಗಿದೆ. ಯಾಕಂದ್ರೆ ಕೆಜಿಎಫ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಮೂವಿ ಈ ವರ್ಷ ರಿಲೀಸ್ ಆಗಲಿದೆ.
 
ಯಶ್ ಬಹುದೊಡ್ಡ ಮಹತ್ವಾಕಾಂಕ್ಷೆಯಿಂದ ರೆಡಿ ಮಾಡ್ತಾ ಇರೋ ಟಾಕ್ಸಿಕ್ ಮೂವಿ ಏಪ್ರಿಲ್ 2025ಕ್ಕೆ ಬರಬೇಕಿತ್ತು. ಆದ್ರೆ ಸದ್ಯದ ಅಪ್​ಡೇಟ್ ಪ್ರಕಾರ 2025ರ ಸೆಕೆಂಡ್ ಹಾಫ್ ನಲ್ಲಿ ಈ ಸಿನಿಮಾ ಬರಲಿದೆ. ಜಸ್ಟ್ ಪ್ಯಾನ್ ಇಂಡಿಯಾ ಅಲ್ಲ ವರ್ಲ್ಡ್​ ವೈಡ್ ಸಿನಿಮಾ ರಿಲೀಸ್ ಮಾಡ್ಲಿಕ್ಕೆ ಹಾಲಿವುಡ್​ನ 20th ಸೆಂಚ್ಯುರಿ ಸ್ಟುಡಿಯೋ ಜೊತೆ ಮಾತುಕತೆ ನಡೆಸಿದ್ದಾರೆ ಯಶ್.ಇನ್ನೂ 2022ರಲ್ಲಿ ವರ್ಲ್ಡ್ ವೈಡ್ ಮೋಡಿ ಮಾಡಿದ್ದ ಕಾಂತಾರ ಮೂವಿ ಪ್ರೀಕ್ವೆಲ್ ಕೂಡ ಈ ವರ್ಷ ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ. ಕಾಂತಾರ ಚಾಪ್ಟರ್​ 1ನ 7 ಭಾಷೆಗಳಲ್ಲಿ ರೆಡಿಮಾಡ್ತಿರೋ ರಿಷಭ್ ಶೆಟ್ರು ಈ ವರ್ಷ ಮತ್ತೊಂದು ಅದ್ಭುತ ಸೃಷ್ಟಿಸೋ ಪ್ಲಾನ್​ನಲ್ಲಿದ್ದಾರೆ.

ಇನ್ನೂ ಈಗಾಗ್ಲೇ ತನ್ನ ಹಾಡಿನಿಂದ ಮೋಡಿ ಮಾಡಿರೋ ಪ್ರೇಮ್ ನಿರ್ದೇಶನದ,  ಧ್ರುವ ಸರ್ಜಾ ನಟನೆಯ ಕೆಡಿ ಮೂವಿ ಮಾರ್ಚ್ ಅಥವಾ ಏಪ್ರಿಲ್​ನಲ್ಲಿ ತೆರೆಗೆ ಬರುವ ತಯಾರಿಯಲ್ಲಿದೆ.  ಡಾ.ಶಿವರಾಜ್​ಕುಮಾರ್, ಉಪೇಂದ್ರ, ರಾಜ್ ಶೆಟ್ಟಿ ನಟಿಸಿರೋ 45 ಮೂವಿ ಈ ವರ್ಷದ ಮತ್ತೊಂದು ಮೋಸ್ಟ್ ಎಕ್ಸ್​ಪೆಕ್ಟೆಡ್ ಮೂವಿ. ದರ್ಶನ್ ನಟನೆಯ ಡೆವಿಲ್ ಸಿನಿಮಾದ ಕೆಲಸಗಳು ಮರುಪ್ರಾರಂಭ ಆಗಿದ್ದು ಈ ವರ್ಷದ ಮೊದಲಾರ್ಧದಲ್ಲೇ ಡೆವಿಲ್ ರಿಲೀಸ್ ಆಗೋ ಸಾಧ್ಯತೆ ಇದೆ. ಒಟ್ಟಾರೆ ಮ್ಯಾಕ್ಸ್ ಸಕ್ಸಸ್ ಮೂಲಕ ಖುಷಿಯಿಂದಲೇ ವರ್ಷ ಶುರುಮಾಡಿರೋ ಕನ್ನಡ ಸಿನಿರಂಗ 2025ರ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದೆ.

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
Read more