Jul 9, 2023, 7:12 PM IST
ನೆಲಮಂಗಲ (ಜು.9): ಹಿರಿಯ ನಟಿ ಲೀಲಾವತಿ ಅವರ ನಿವಾಸಕ್ಕೆ ಕನ್ನಡದ ಹಿರಿಯ ನಟಿಯರಾದ ನಟಿ ಉಮಾಶ್ರೀ ಮತ್ತು ಪದ್ಮವಾಸಂತಿ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿರುವ ತೋಟದ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಜೊತೆಗೆ ಕೆಲಕಾಲ ಮಾತುಕತೆ ನಡೆಸಿ ಹಾಡು ಜೊತೆಗೆ ಆಟವಾಡಿದರು. ಚಿತ್ರರಂಗದ ಬಗ್ಗೆ ಹಿಂದಿನ ಕಾಲದ ಊಟ ಉಪಚಾರದ ಬಗ್ಗೆ ಮೆಲುಕು ಹಾಕಿ ಮಾತುಕತೆ ನಡೆಸಿದರು. ಈ ವೇಳೆ ನಟ ಪುತ್ರ ವಿನೋದ್ ರಾಜ್ ಕೂಡ ಜೊತೆಗೆ ಇದ್ದು, ಅವರೊಂದಿಗೂ ಮಾತುಕತೆ ನಡೆಸಿದರು.